ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಾಯುವವರೆಗೂ ನಾನು ವಿಶ್ವೇಶ್ವರ ಭಟ್ ಮತ್ತು ಮೋದಿಜಿ ನಿಷ್ಠ'

By Mahesh
|
Google Oneindia Kannada News

Recommended Video

ಸಾಯುವವರೆಗೂ ನಾನು ಮೋದಿಜಿ ನಿಷ್ಠ' - ಪ್ರತಾಪ್ ಸಿಂಹ | Oneindia Kannada

ಮೈಸೂರು, ಜನವರಿ 19: "ಮೋದಿಜಿಯನ್ನು ಹೊಗಳಿ, ಸತತವಾಗಿ ಅವರ ಪರವಾಗಿ ಬರೆದ (2004, ಜೂನ್ 19ರಿಂದ) ಮೊದಲ ಕನ್ನಡ ಬರಹಗಾರ ಹಾಗು ಮೋದಿಜಿ ಆತ್ಮಚರಿತ್ರೆ ಬರೆದ ಮೊಟ್ಟಮೊದಲ ಲೇಖಕ ನಾನು. ಸಾಯುವವರೆಗೂ ನಾನು ವಿಶ್ವೇಶ್ವರ ಭಟ್ ಮತ್ತು ಮೋದಿಜಿ ನಿಷ್ಠ. ಜನವರಿ 27ಕ್ಕೆ ಹನುಮ ಜಯಂತಿ ಮೆರವಣಿಗೆ ಇದೆ. ಬಂದು ಕಣ್ಣಾರೆ ಕಂಡು ಆನಂದಿಸಿರಂತೆ. ವದಂತಿ ಬಿಡಿ."

ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಭಾರತೀಯ ಜನತಾ ಪಕ್ಷವನ್ನು ತೊರೆದು ಜೆಡಿಎಸ್ ಸೇರುತ್ತಿದ್ದಾರೆ. ಪ್ರತಾಪ್ ಅವರನ್ನು ಸೆಳೆಯುವಲ್ಲಿ ಜೆಡಿಎಸ್ ಯುವ ನೇತಾರ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಂಸದ ಎಚ್ ವಿಶ್ವನಾಥ್ ಅವರು ಯಶಸ್ವಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದೆಲ್ಲವೂ ಶುದ್ಧ ಸುಳ್ಳು ಎಂದು ಫೇಸ್ ಬುಕ್ ಪೋಸ್ಟ್ ಮೂಲಕ ಸಂಸದ ಪ್ರತಾಪ್ ಸ್ಪಷ್ಟನೆ ನೀಡಿದ್ದಾರೆ.

ಹುಣಸೂರು ನಗರಸಭೆ ನೂತನ ಅಧ್ಯಕ್ಷರಾಗಿ ಜಾತ್ಯಾತೀತ ಜನತಾ ದಳ ಬೆಂಬಲಿತ ಅಭ್ಯರ್ಥಿ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಹುಣಸೂರು ನಗರಸಭಾಧ್ಯಕ್ಷರಾಗಿದ್ದ ಲಕ್ಷ್ಮಣ ಅವರನ್ನೂ ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಳಿಸಲಾಗಿತ್ತು. ಹೀಗಾಗಿ ಹುಣಸೂರು ನಗರಸಭಾ ಗದ್ದುಗೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಜ್ವಲ್ ರೇವಣ್ಣ ಯಶಸ್ವಿಯಾಗಿದ್ದಾರೆ. ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಈ ಚುನಾವಣೆಯಲ್ಲಿ ಜೆಡಿಎಸ್ ಗೆ ಬೆಂಬಲಿಸಿದ್ದರು.

Kodagu -Mysuru MP Pratap Simha on fake news about him joining hands with other parties

ಹೆದ್ದಾರಿಯಲ್ಲಿ ಗೋವುಗಳ ರಕ್ಷಣೆ ಮಾಡಿ ಸುದ್ದಿಯಾಗಿದ್ದ ಪ್ರತಾಪ್ ಅವರು ಮೈಸೂರಿಗೆ ಬಂದ ತಕ್ಷಣ ಎದುರಿಗೆ ಮಾಜಿ ಸಂಸದ ಅಡಗೂರು ಎಚ್ ವಿಶ್ವನಾಥ್ ಸಿಕ್ಕಿದ್ದಾರೆ. ಹಿರಿಯ ನಾಯಕರಿಗೆ ಮರ್ಯಾದೆ ನೀಡುವ ಸಲುವಾಗಿ ಅವರಿಗೆ ನಮಸ್ಕರಿಸಿದ್ದಾರೆ. ಇಬ್ಬರ ಫೋಟೋ ಸಾಮಾಜಿಕ ಜಾಲ ತಾಣಗಳನ್ನು ಸೇರಿದೆ.. ಹುಣಸೂರು ನಗರಸಭೆ ಫಲಿತಾಂಶ, ಪ್ರತಾಪ್ ಸಿಂಹ ಹಾಗೂ ವಿಶ್ವನಾಥ್ ಭೇಟಿ ಇಟ್ಟುಕೊಂಡು ಸುಳ್ಳು ಸುದ್ದಿ ಹಬ್ಬಿಸಿದ ಕೆಲವರು ಪ್ರತಾಪ್ ಅವರು ಜೆಡಿಎಸ್ ಸೇರುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿ, ವಿವರಿಸಿದ್ದು ಹೀಗೆ:

ಕಾಂಗ್ರೆಸ್ ಪಕ್ಷದಿಂದ ಸರಸ್ವತಿಪುರಂನ ಸೌರಭ ಸಿದ್ದರಾಜು ಮತ್ತು ರಂಗನಾಥ ಬಡಾವಣೆಯ ಜಾ.ದಳ ಬೆಂಬಲಿತ ಅಭ್ಯರ್ಥಿ ಎಂ.ಶಿವಕುಮಾರ್ ನಡುವೆ ಸ್ಪರ್ಧೆ ನಡೆಯಿತು. ಅಂತಿಮವಾಗಿ ಜೆಡಿಎಸ್ ನ ಶಿವಕುಮಾರ್ ಅವರು ಹುಣಸೂರು ಮುನ್ಸಿಪಾಲ್ ಕಾರ್ಪೊರೇಷನ್ ಅಧ್ಯಕ್ಷರಾದರು.

English summary
Kodagu -Mysuru MP Pratap Simha through his Facebook post clarified that fake news is spreading about him joining hands with other parties. He said obedient to Vishweshwara Bhat an PM Modi till his last breath. JD(S) candidate Sivakumar is the new president of Hunsur Municipal Corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X