ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ : ಬಾಲಕಿಗೆ ಹಿಂಸೆ ನೀಡಿದ್ದ ಮೌಲ್ವಿ ಬಂಧನ

|
Google Oneindia Kannada News

ಮಂಡ್ಯ, ಜೂ. 11 : ಬಾಲಕಿಗೆ ದೆವ್ವ ಬಿಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಮೌಲ್ವಿ ಸೈಯದ್ ಮಜೀರ್ ನನ್ನು ರಾಮನಗರ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ. ರಾಮನಗರದ ಹೊಸಹಳ್ಳಿ ಬಳಿ ತಲೆಮರಿಸಿಕೊಂಡಿದ್ದ ಮೌಲ್ವಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆತನ ವಿಚಾರಣೆ ಮುಂದುವರೆದಿದೆ.

ಮೌಲ್ವಿಯಿಂದ ಚಿತ್ರಹಿಂಸೆ ಅನುಭವಿಸಿದ ಬಾಲಕಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಮೌಲ್ವಿ ಎದರು ಬಂದರೆ ಆತನ ಗುರುತು ಹಿಡಿಯುವುದಾಗಿ ಹೇಳಿದ್ದಾಳೆ. ಅಲ್ಲದೆ ತನಗೆ ಚಿತ್ರಹಿಂಸೆ ನೀಡಿದ ದೃಶ್ಯಾವಳಿಗಳನ್ನು ಆತ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ ಎಂದು ಬಾಲಕಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾಳೆ.

ಹಿಂದಿನ ಸುದ್ದಿ : ಬಾಲಕಿಗೆ ಹಿಡಿದ ದೆವ್ವ ಬಿಡಿಸುವ ನೆಪದಲ್ಲಿ ಮೌಲ್ವಿಯೊಬ್ಬರು ಆಕೆಯ ಮೇಲೆ ದೌರ್ಜನ್ಯವೆಸಗಿದ ಅಮಾನುಷ ಘಟನೆ ಮಂಡ್ಯದಲ್ಲಿ ನಡೆದಿದೆ. ದೌರ್ಜನ್ಯಕ್ಕೊಳಗಾದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಮೌಲ್ವಿ ಪರಾರಿಯಾಗಿದ್ದಾನೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿಯ 14 ವರ್ಷದ ಬಾಲಕಿ ಮೌಲ್ವಿಯಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದಾಳೆ. ಬಾಲಕಿಗೆ ಆಗಾಗ ಜ್ವರ ಬಾಧಿಸುತ್ತಿತ್ತು. ಹಲವಾರು ಆಸ್ಪತ್ರೆಗಳಲ್ಲಿ ತೋರಿಸಿದರೂ ಉಪಯೋಗವಾಗಲಿಲ್ಲ. ಆದ್ದರಿಂದ ಬಾಲಕಿಗೆ ದೆವ್ವ ಹಿಡಿದಿರಬಹುದು ಎಂದು ಪೋಷಕರು ರಾಮನಗರದ ಮಸೀದಿಯ ಮೌಲ್ವಿಯೊಬ್ಬರ ಬಳಿ ಕರೆದುಕೊಂಡು ಹೋಗಿದ್ದರು.

Mandya

ಬಾಲಕಿಗೆ ದೆವ್ವ ಹಿಡಿದಿದೆ, ಅದನ್ನು ಬಿಡಿಸುತ್ತೇನೆ ಎಂದು ಫೋಷಕರಿಗೆ ಹೇಳಿದ ಮೌಲ್ವಿ, ನಿಂಬೆಹಣ್ಣು ಮಂತ್ರಿಸಿಕೊಟ್ಟಿದ್ದಾನೆ. ಮಾರನೇ ದಿನ 6 ಸಾವಿರ ರೂ.ಹಣ ತೆಗೆದುಕೊಂಡು ಬರುವಂತೆ ತಿಳಿಸಿದ್ದಾನೆ. ಹಣ ಪಡೆದು ಬಾಲಕಿಯನ್ನು ಮನೆಯೊಳಗೆ ಕರೆದುಕೊಂಡು ಹೋದ ಮೌಲ್ವಿ, ಬಾಲಕಿಯ ಗುಪ್ತಾಂಗಕ್ಕೆ ಸರಳು ಹಾಕಿದ್ದಾನೆ.

ಮೌಲ್ವಿ ದೌರ್ಜನ್ಯದಿಂದಾಗಿ ಬಾಲಕಿ ಚೀರಿಕೊಂಡು ಮನೆಯಿಂದ ಹೊರಗೆ ಓಡಿಬಂದಿದ್ದಾಳೆ. ಇದಾದನಂತರ ಬಾಲಕಿಗೆ ಗುಪ್ತಾಂಗದಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ರಕ್ತಸ್ರಾವವಾಗುತ್ತಿದೆ. ಸದ್ಯ ಬಾಲಕಿಯನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. [ರಾಮನಗರದಲ್ಲಿ ಹರಿದಾಡುತ್ತಿದೆ ಅಶ್ಲೀಲ ಎಂಎಂಎಸ್]

ಈ ಘಟನೆಯ ನಂತರ ಮೌಲ್ವಿ ಪರಾರಿಯಾಗಿದ್ದಾನೆ. ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೌಲ್ವಿಗಾಗಿ ಪೊಲೀಸರು ಹಡುಕಾಟ ಆರಂಭಿಸಿದ್ದಾರೆ.

English summary
Priests for Muslims mouli harassed minor girl in Ramanagara district of Karnataka in the name of traditional ritual. Girl admitted to Mandya VIMS Hospital. Ramanagara police arrested mouli in Hosahalli village of Ramanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X