ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಹೋಂ ಕ್ವಾರಂಟೈನ್‌ ಉಲ್ಲಂಘನೆ ಮಾಡಿದವರ ಲೆಕ್ಕ!

|
Google Oneindia Kannada News

ಬೆಂಗಳೂರು, ಜೂನ್ 22 : ಕೊರೊನಾ ವೈರಸ್ ಸೋಂಕು ಹರಡದಂತೆ ಸಾಂಸ್ಥಿಕ ಮತ್ತು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಹಲವಾರು ಜನರು ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಹೊರಗೆ ಸುತ್ತಾಡಲು ಬಂದಿದ್ದಾರೆ.

Recommended Video

ಜನ ನಿಮ್ಮನ್ನು ನೋಡುತ್ತಿರುತ್ತಾರೆ ಹುಷಾರ್ | Manmohan Singh | Narendra Modi | Oneindia Kannada

ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಕರ್ನಾಟಕದಲ್ಲಿ 1,31,130 ಜನರು ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಸರ್ಕಾರದ ಮಾಹಿತಿಯಂತೆ ಬೆಂಗಳೂರು ನಗರದಲ್ಲಿಯೇ ಶೇ 44ರಷ್ಟು ಉಲ್ಲಂಘನೆ ನಡೆದಿದೆ.

Inside Story: ದೇವನಹಳ್ಳಿಯ ಕೊರೊನಾ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಗಳ ಆಗರInside Story: ದೇವನಹಳ್ಳಿಯ ಕೊರೊನಾ ಕ್ವಾರಂಟೈನ್ ಕೇಂದ್ರ ಅವ್ಯವಸ್ಥೆಗಳ ಆಗರ

ಸರ್ಕಾರ ಮತ್ತು ಸ್ಥಳೀಯ ಆಡಳಿತದ ಎಚ್ಚರಿಕೆಯ ಬಳಿಕವೂ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಕೈ ಮೇಲೆ ಹೋಂ ಕ್ವಾರಂಟೈನ್ ಸೀಲ್ ಇದ್ದವರು ಮಾರುಕಟ್ಟೆಯಲ್ಲಿ, ಬಸ್‌ನಲ್ಲಿ ಕಾಣಿಸಿಕೊಂಡ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಬೆಂಗಳೂರು; ಕ್ವಾರಂಟೈನ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ, ವ್ಯಕ್ತಿ ಬಂಧನ ಬೆಂಗಳೂರು; ಕ್ವಾರಂಟೈನ್ ಕೇಂದ್ರದಲ್ಲಿ ಲೈಂಗಿಕ ಕಿರುಕುಳ, ವ್ಯಕ್ತಿ ಬಂಧನ

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಮೊದಲ ಮೂರು ಸ್ಥಾನದಲ್ಲಿವೆ. ಕರ್ನಾಟಕದಲ್ಲಿಯೆ ಕೊರೊನಾ ವೈರಸ್‌ನಿಂದ ಮೊದಲ ಸಾವು ಕಲಬುರಗಿಯಲ್ಲಿ ದಾಖಲಾಗಿತ್ತು. ಆದರೂ ಸಹ ಜನರು ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ತಿರುಗಾಟ ನಡೆಸಿದ್ದಾರೆ.

ಬೆಂಗಳೂರು; ಮಾರತಹಳ್ಳಿ ಠಾಣೆಯ ಸಿಬ್ಬಂದಿಗೆ ಕ್ವಾರಂಟೈನ್ ಬೆಂಗಳೂರು; ಮಾರತಹಳ್ಳಿ ಠಾಣೆಯ ಸಿಬ್ಬಂದಿಗೆ ಕ್ವಾರಂಟೈನ್

ಬೆಂಗಳೂರು ನಗರದಲ್ಲೇ ಅಧಿಕ

ಬೆಂಗಳೂರು ನಗರದಲ್ಲೇ ಅಧಿಕ

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆಯಲ್ಲಿ ಬೆಂಗಳೂರು ನಗರವೇ ಪ್ರಥಮ ಸ್ಥಾನದಲ್ಲಿದೆ. ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ಬೆಂಗಳೂರಿನಲ್ಲಿ 58,832 ಜನರು ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. 15,157 ಜನರಿಗೆ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ. ಕೆಲವು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಬೆಂಗಳೂರು ಬಳಿಕ ಮೈಸೂರು

ಬೆಂಗಳೂರು ಬಳಿಕ ಮೈಸೂರು

ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದ್ದರೆ ಮೈಸೂರಿನಲ್ಲಿ 11,307 ಜನರು ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. 3951 ಜನರಿಗೆ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ. ಶನಿವಾರ ಒಂದೇ ದಿನ ನಗರದಲ್ಲಿ 2270 ಜನರು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳಿವೆ.

ಉಳಿದ ಜಿಲ್ಲೆಗಳಲ್ಲಿ ಎಷ್ಟು?

ಉಳಿದ ಜಿಲ್ಲೆಗಳಲ್ಲಿ ಎಷ್ಟು?

ಕಲಬುರಗಿಯಲ್ಲಿ 10,385, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8256 ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಅಚ್ಚರಿಯ ಸಂಗತಿ ಎಂದರೆ ವಾರಂತ್ಯದಲ್ಲಿ ಅಂದರೆ ಶನಿವಾರವೇ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿ ಜನರು ಹೊರಗೆ ಸುತ್ತಾಡಲು ಬಂದಿದ್ದು ಹೆಚ್ಚು.

ಯಾರಿಗೆ ಕ್ವಾರಂಟೈನ್?

ಯಾರಿಗೆ ಕ್ವಾರಂಟೈನ್?

ವಿದೇಶದಿಂದ ಕರ್ನಾಟಕಕ್ಕೆ ಆಗಮಿಸಿದವರು, ಅಂತರರಾಜ್ಯದಿಂದ ಆಗಮಿಸಿದವರಿಗೆ ಹೋಂ ಕ್ವಾರಂಟೈನ್ ಕಡ್ಡಾಯವಾಗಿತ್ತು. ಈಗಲೂ ತಮಿಳುನಾಡು, ದೆಹಲಿಯಿಂದ ಬಂದರೆ ಮೂರು ದಿನದ ಸಾಂಸ್ಥಿಕ ಕ್ವಾರಂಟೈನ್, 11 ದಿನದ ಹೋಂ ಕ್ವಾರಂಟೈನ್ ನಿಯಮ ಜಾರಿಯಲ್ಲಿದೆ. ಮಹಾರಾಷ್ಟ್ರದಿಂದ ಬಂದರೆ 7 ದಿನದ ಸಾಂಸ್ಥಿಕ ಮತ್ತು 7 ದಿನದ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು.

English summary
After the lock down announcement 58,832 home quarantine violations were reported in Bengaluru city. The total number of violations in Karnataka 1,31,130.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X