Rain Alert: ಮುಂಗಾರು ಮಳೆ.. ಮುಂದಿನ 48 ಗಂಟೆ ರಣಮಳೆ ಎಚ್ಚರಿಕೆ!

ಮಳೆ ಎಲ್ಲೆಲ್ಲೂ ಆರ್ಭಟಿಸುತ್ತಿದೆ, ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಎಲ್ಲವೂ ಈಗ ಅಲ್ಲೋಲ & ಕಲ್ಲೋಲ ಎಬ್ಬಿಸುತ್ತಿದೆ. ಅದರಲ್ಲೂ ಕಳೆದ ಕೆಲವು ವಾರಗಳಿಂದ ಹೀಗೆ ನಿರಂತರವಾಗಿ ಮಳೆ ಬೀಳುತ್ತಿರುವುದು ಜನರ ಚಿಂತೆಗೂ ಕಾರಣ ಆಗಿತ್ತು. ಹೀಗಿದ್ದಾಗ ಮಳೆ ಆರ್ಭಟ ಕಡಿಮೆ ಆಗಲಿದೆ ಎನ್ನಲಾಗಿತ್ತು. ಆದರೆ, ಈಗ ಹವಾಮಾನ ಇಲಾಖೆ ಈ ಜಿಲ್ಲೆಗಳಲ್ಲಿ ಇನ್ನೂ 168 ಗಂಟೆ ಕಾಲ ಅಂದ್ರೆ ಮುಂದಿನ 1 ವಾರ ಮಳೆ ನಿಲ್ಲುವುದಿಲ್ಲ ಎಂದಿದೆ! ಹೀಗೆ ಮುಂದಿನ 48 ಗಂಟೆ ರಣಮಳೆ ಸುರಿಯುವ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದ್ದು ಹೀಗಾಗಿಯೇ ಎಲ್ಲೆಲ್ಲೂ ಭಾರಿ ಮಳೆ ಬೀಳುತ್ತಿದೆ. ಕರಾವಳಿ & ಮಲೆನಾಡು ಕರ್ನಾಟಕದಲ್ಲಿ ಮಾತ್ರ ಅಲ್ಲ ಉತ್ತರ ಕರ್ನಾಟಕ & ದಕ್ಷಿಣ ಕರ್ನಾಟಕ ಭಾಗದಲ್ಲಿ ಕೂಡ ಮಳೆರಾಯ ಅಬ್ಬರಿಸಿದ್ದು ಎಲ್ಲೆಲ್ಲೂ ನೀರೆ ಕಾಣುತ್ತಿದೆ ಈ ರೀತಿ ಪರಿಸ್ಥಿತಿ ಇದ್ದಾಗ ಮುಂದಿನ 48 ಗಂಟೆ ಕಾಲ ಅಂದ್ರೆ 2 ದಿನಗಳ ಕಾಲ ಮತ್ತಷ್ಟು ರಣಭೀಕರ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಹಾಗಾದ್ರೆ ಹೀಗೆ ಭಾರಿ ಮಳೆ ಬೀಳಲಿರುವ ಜಿಲ್ಲೆಗಳು ಯಾವುವು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Monsoon Rain Will Be Hit In These Places Of Karnataka For Next 168 Hours

2 ದಿನ ಭಾರಿ ಭರ್ಜರಿ ಮಳೆ!

ಮುಂಗಾರು ಮಳೆ ಶುರುವಾಗಿ ಭರ್ಜರಿ 1 ತಿಂಗಳು ಕಳೆದಿದ್ದು, ಕರ್ನಾಟಕದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಧ್ಯದಲ್ಲಿ ಮುಂಗಾರು ಮಳೆ ಒಂದಷ್ಟು ಬ್ರೇಕ್ ಪಡೆದರೂ, ಅದರ ಆರ್ಭಟಕ್ಕೆ ಸಮಸ್ಯೆ ಏನೂ ಆಗಿಲ್ಲ. ಅದರಲ್ಲೂ ಕಳೆದ 2 ವಾರಗಳಿಂದ ನಿರಂತರ ಈ ಮಳೆ ಅಬ್ಬರಿಸುತ್ತಿದೆ. ಈಗ ಮುಂದಿನ ಕೆಲವು ವಾರಗಳ ಕಾಲ ಪರಿಸ್ಥಿತಿ ಹೀಗೆ ಇರಲಿದ್ದು, ಜನರು ಅಲರ್ಟ್ ಆಗಿರೋಕೆ ಮುನ್ಸೂಚನೆ ನೀಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿ ಬೆಳಗಾವಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರಿ ಮಳೆ ಬೀಳಲಿದೆ.

ಎಚ್ಚರಿಕೆ ವಹಿಸಲು ಮನವಿ

ಇದರ ಜೊತೆಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ದಾವಣಗೆರೆ ಸೇರಿ ಮೈಸೂರು, ಮಂಡ್ಯ, ಚಿತ್ರದುರ್ಗ, ತುಮಕೂರು, ಕಲಬುರಗಿ, ಬೀದರ್‌, ಕೋಲಾರದಲ್ಲೂ ಮಳೆ ಅಬ್ಬರ ಗ್ಯಾರಂಟಿ ಆಗಿದೆ. ಬೆಂಗಳೂರಲ್ಲಿ, 3-4 ದಿನ ಕಾಲ ಮೋಡ ಕವಿದ ವಾತವರಣ ಇರಲಿದ್ದು. ಜುಲೈ 11, 12 ಹಾಗೂ 13 ರಂದು ಬಿರುಗಾಳಿ ಸಹಿತ ಭಾರಿ ಮಳೆ ಬೀಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಎಚ್ಚರಿಕೆ ವಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+