ಕಾವೇರಿ ವಾದಕ್ಕೆ ಮೋಹನ್ ಕಾತರಕಿ ಗುಡ್ ಬೈ

ಬೆಂಗಳೂರು, ಜನವರಿ 23: ಕಾವೇರಿ ಜಲ ವಿವಾದದಲ್ಲಿ ವಾದ ಮಂಡಿಸುತ್ತಿದ್ದ ಕರ್ನಾಟಕ ರಾಜ್ಯ ವಕೀಲರ ತಂಡದಿಂದ ಸುಪ್ರಿಂ ಕೊರ್ಟ್ ನ ಹಿರಿಯ ವಕೀಲ ಮೋಹನ್ ಕಾತರಕಿ ಹೊರ ನಡೆದಿದ್ದಾರೆ.

ಫಾಲಿ ಎಸ್ ನಾರಿಮನ್ ಮುಖ್ಯಸ್ಥರಾಗಿರುವ ಕರ್ನಾಟಕ ವಕೀಲರ ತಂಡದಲ್ಲಿ ಮೋಹನ್ ಕಾತರಕಿ ಕೂಡಾ ಒಬ್ಬರಾಗಿದ್ದರು. ಅವರ ರಾಜೀನಾಮೆಗೆ ಜಲಸಂಪನ್ಮೂಲ ಮಂತ್ರಿ ಎಂ.ಬಿ ಪಾಟೀಲ್ ಅವರ ನಡವಳಿಕೆಯೇ ಕಾರಣ ಎನ್ನಲಾಗಿದೆ.[ಚುನಾವಣೆ ಹಿನ್ನಲೆ, ಬಜೆಟ್ ಮುಂದೂಡಿಕೆಗೆ ಸುಪ್ರಿಂ ನಕಾರ]

 Mohan Katarki resigned for Cauvery legal team

ಶನಿವಾರ ದೆಹಲಿಯಲ್ಲಿ ಕರ್ನಾಟಕ ವಕೀಲರ ತಂಡದ ಸಭೆ ನಡೆದಿತ್ತು. ಈ ಸಭೆಗೆ ಕಾತರಕಿಯವರಿಗೆ ಎಂ.ಬಿ ಪಾಟೀಲ್ ಆಹ್ವಾನಿಸದೆ ಕಡೆಗಣಿಸಿದ್ದರು. ಇದರಿಂದ ಕಾತರಕಿ ಬೇಸರಗೊಂಡಿದ್ದು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 7ರಿಂದ ಸುಪ್ರಿಂ ಕೋರ್ಟ್ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ವಿಚಾರಣೆ ಆರಂಭಿಸಲಿದ್ದು ಅದಕ್ಕೂ ಮೊದಲು ಕಾತರಕಿ ರಾಜೀನಾಮೆ ನೀಡಿದ್ದಾರೆ.

[ಚಿತ್ರ ಕೃಪೆ: ಟ್ವಿಟ್ಟರ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+