ಉಪವಾಸವಿದ್ದುಕೊಂಡೇ ಮಂಜುನಾಥನ ದರ್ಶನ ಪಡೆದ ಮೋದಿ

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 29 : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಧರ್ಮಸ್ಥಳ ದೇವಾಲಯದ ಭೇಟಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಇಬ್ಬರ ಭೇಟಿ ಚಿತ್ರಗಳನ್ನು ಟ್ರೋಲ್ ಮಾಡಿ ಹರಿಬಿಡಲಾಗುತ್ತಿದೆ.

'ಮಾಂಸ ತಿಂದು ಹೋಗಲಿ ಅಥವಾ ಕೊರಳಿಗೆ ನೇತು ಹಾಕಿಕೊಂಡು ಹೋಗಲಿ'

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು. ನಂತರ ಉಜಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರನ್ನು ಉದ್ದೇಶಿಸಿ ಮಾತನಾಡಿದ್ದರು. ಅಕ್ಟೋಬರ್ 23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು.

ವೀರೇಂದ್ರ ಹೆಗ್ಗಡೆ ಕಾರ್ಯಗಳನ್ನು ಕೊಂಡಾಡಿದ ಪ್ರಧಾನಿ ಮೋದಿ

ಸಾಮಾಜಿಕ ಜಾಲತಾಣದಲ್ಲಿ ಮೋದಿ ಮತ್ತು ಸಿದ್ದರಾಮಯ್ಯ ಭೇಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಇತರ ಸಂಪುಟ ಸಹೋದ್ಯೋಗಿಗಳು ಮಾಂಸಾಹಾರ ಸೇವಿಸಿದ ಬಳಿಕ ಧರ್ಮಸ್ಥಳ ದೇವಸ್ಥಾನ ಪ್ರವೇಶ ಮಾಡಿದ್ದರು. ಇದು ಚರ್ಚೆ ಮತ್ತು ಟ್ರಾಲ್‌ಗೆ ಕಾರಣವಾಗಿದೆ.

ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇಗುಲ ಪ್ರವೇಶ ಮಾಡಿದ್ದು ತಪ್ಪೆ?

ಸಿದ್ದರಾಮಯ್ಯ ಭೇಟಿ ನೀಡಿದ ಬಳಿಕ ಉಂಟಾಗಿದ್ದ ಗೊಂದಲಗಳಿಗೆ ದೇವಾಲಯವೇ ತೆರೆ ಎಳೆದಿತ್ತು. 'ಮಾಂಸ ಸೇವಿಸಿ ಧರ್ಮಸ್ಥಳ ದೇವಸ್ಥಾನಕ್ಕೆ ಪ್ರವೇಶಿಸಬಾರದು ಎಂಬ ನಿಯಮ ರೂಪಿಸಿಲ್ಲ' ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಸ್ಪಷ್ಟಪಡಿಸಿದ್ದರು.

ಬಿಜೆಪಿಯ ಟೀಕೆಗೆ ವಚನದ ಮೂಲಕ ಉತ್ತರ ನೀಡಿದ ಸಿದ್ದರಾಮಯ್ಯ

ಏಕೆ ಚರ್ಚೆ ಆರಂಭವಾಗಿದೆ?

ಏಕೆ ಚರ್ಚೆ ಆರಂಭವಾಗಿದೆ?

ನರೇಂದ್ರ ಮೋದಿಯವರು ಪೂಜೆ ಮುಗಿಯುವ ತನಕ ಉಪವಾಸವಿದ್ದರು. ಅಲ್ಲದೇ ಪೂಜೆಯ ವೇಳೆ ಪಂಚೆ, ಶಲ್ಯ ಧರಿಸಿದ್ದರು. ಪೂಜೆಯ ಬಳಿಕ ಫಲಹಾರ ಸೇವಿಸಿ ಅಲ್ಲಿಂದ ಉಜಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಭೇಟಿ ಬಗ್ಗೆ ಪರ-ವಿರೋಧ ಚರ್ಚೆ ಆರಂಭವಾಗಿದೆ.

ಮೀನು ಊಟ, ಉಪವಾಸ

ಮೀನು ಊಟ, ಉಪವಾಸ

ಮೋದಿ ಹಾಗೂ ಸಿದ್ದರಾಮಯ್ಯ ದೇವಸ್ಥಾನಕ್ಕೆ ಭೇಟಿ ನೀಡಿರುವ ರೀತಿಯ ಕುರಿತು ತೀವ್ರ ಚರ್ಚೆ ನಡೆಯುತ್ತಿದೆ. ಉಪವಾಸ ವಿದ್ದು ದರ್ಶನ ಪಡೆದ ಮೋದಿ ಹಾಗು ಮೀನು ತಿಂದು ದೇವಾಲಯದೊಳಗೆ ಪ್ರವೇಸಿದ ಸಿಎಂ, ಇವರಲ್ಲಿ ಯಾರು ಸಂಸ್ಕಾರವಂತರು? ಎಂಬ ಪ್ರಶ್ನೆ ಎದ್ದಿದೆ.

 ಟ್ರಾಲ್‌ಗಳಿಗೆ ಆಹಾರ

ಟ್ರಾಲ್‌ಗಳಿಗೆ ಆಹಾರ

ಈ ವಿಚಾರ ಇಟ್ಟುಕೊಂಡು ಹಲವಾರು ಟ್ರಾಲ್‌ಗಳನ್ನು ಮಾಡಲಾಗುತ್ತಿದೆ. ಸಿದ್ದರಾಮಯ್ಯ ಭೇಟಿಯಲ್ಲಿ ಯಾವುದೇ ತಪ್ಪಿಲ್ಲ ಎಂದು ದೇವಾಲಯವೇ ಹೇಳಿದ್ದರೂ ಟ್ರಾಲ್‌ ಪೇಜ್‌ಗಳಲ್ಲಿ ಮೀನು ಊಟದ ಫೋಟೋ ಹರಿದಾಡುತ್ತಿದೆ.

ಮೋದಿ ಉಪಹಾರ ಸೇವಿಸಿರಲಿಲ್ಲ

ಮೋದಿ ಉಪಹಾರ ಸೇವಿಸಿರಲಿಲ್ಲ

ಬೆಳಗ್ಗೆ 11 ಗಂಟೆಗೆ ಮೋದಿ ಧರ್ಮಸ್ಥಳಕ್ಕೆ ಆಗಮಿಸಿದರು. ಆದರೆ, ಅವರು ಬೆಳಗ್ಗೆ ಉಪಹಾರವನ್ನೂ ಸೇವಿಸಿರಲಿಲ್ಲ. ಮಂಜುನಾಥನ ದರ್ಶನಕ್ಕಾಗಿ ದೆಹಲಿಯಿಂದಲೇ ಏನೂ ತಿನ್ನದೆ ಉಪವಾಸ ಬಂದಿದ್ದರು ಎಂಬುದು ಚರ್ಚೆಗೆ ಮೂಲವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi visited Dharmasthala, Manjunatha temple on Sunday, October 29, 2017. Modi and Siddaramaiah visit to temple troll goes viral.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ