ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುನ್ಸಿಪಲ್ ಆಫೀಸಿನಲ್ಲಿ ಮೊಬೈಲ್ ಕದ್ದ ಪತ್ರಕರ್ತ

By Srinath
|
Google Oneindia Kannada News

Mobile Phone theft in Puttur TMC Office Mangalore Journalist Arrested
ಪುತ್ತೂರು, ಅ.30: ಪತ್ರಕರ್ತನೆಂದು ಹೇಳಿಕೊಂಡು ಇಲ್ಲಿನ ಪುರಸಭೆ ಕಚೇರಿಗೆ ಬಂದಿದ್ದ ವ್ಯಕ್ತಿ ಮಹಿಳಾ ಅಧಿಕಾರಿಯ ಗಮನವನ್ನು ಬೇರೆಡೆ ಸೆಳೆದು ದುಬಾರಿ ಬೆಲೆಯ ಮೊಬೈಲ್ ಫೋನನ್ನು ಎಗರಿಸಿದ್ದಾನೆ.

ಮೊಹಮದ್ ಇಕ್ಬಾಲ್ ಎಂಬುವವನೇ ಈ ಆರೋಪಿ ಪತ್ರಕರ್ತ. ಆದರೆ ತಾನು ಮಂಗಳೂರಿನಲ್ಲಿ ಪ್ರಕಟವಾಗುವ ಪಾಕ್ಷಿಕ ಪತ್ರಿಕೆಯ ಪತ್ರಕರ್ತನೆಂದು ಹೇಳಿಕೊಂಡು ಬಂದಿದ್ದ ಮುನ್ಸಿಪಲ್ ಆಫೀಸಿಗೆ (TMC) ಬಂದಿದ್ದ ಈತ ತನ್ನನ್ನು ಜಾನ್ಸನ್ ಎಂದು ಪರಿಚಯಿಸಿಕೊಂಡಿದ್ದ.

ಮುನ್ಸಿಪಲ್ ಆಫೀಸಿನಲ್ಲಿ ಸಹಾಯಕ ಇಂಜಿನಿಯರ್ ಉದಯ ಕುಮಾರಿ ಅವರನ್ನು ಭೇಟಿ ಮಾಡಿದ 'ಜಾನ್ಸನ್' ತನ್ನ ಪತ್ರಿಕೆಗೆ ಜಾಹೀರಾತು ಕೇಳಲು ಬಂದಿದ್ದಾನೆ. ಆದರೆ ಮಾತಿನ ಮಧ್ಯೆ, ಉದಯ ಕುಮಾರಿ ಅವರ ಗಮನ ಬೇರೆಡೆ ತಿರುಗುತ್ತಿದ್ದಂತೆ ಸಮಯ ಸಾಧಿಸಿ ಟೇಬಲ್ ಮೇಲಿದ್ದ ಬೆಲೆಬಾಳುವ ಫೋನನ್ನು ಕದ್ದಿದ್ದಾನೆ. ನಂತರ ಕೆಲವೇ ಸೆಕೆಂಡುಗಳಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಆದರೆ TMC ಕಚೇರಿಗೆ CCTV ಅಳವಡಿಸಿರುವುದನ್ನು 'ಪತ್ರಕರ್ತ ಜಾನ್ಸನ್' ಗಮನಿಸಿಲ್ಲ. ಜಾನ್ಸನ್ ಇಡೀ ಕೈಚಳಕ CCTVಯಲ್ಲಿ ದಾಖಲಾಗಿತ್ತು. ಹಾಗಾಗಿ ಪೊಲೀಸರು ಮೊಬೈಲ್ ಕದ್ದ ವೀರನನ್ನು ಸಲೀಸಾಗಿ ಗುರುತಿದ್ದಾರೆ.

ಒಂದಷ್ಟು ವಿಚಾರಣೆಯ ಬಳಿಕ ಆಸಾಮಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪೊಲೀಸರು ಆರೋಪಿ 'ಪತ್ರಕರ್ತ ಜಾನ್ಸನ್'ನನ್ನು ಕೋರ್ಟಿನಲ್ಲಿ ಹಾಜರುಪಡಿಸಲಾಗಿ, ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

English summary
Mobile Phone theft in Puttur TMC Office Mangalore Journalist Arrested. Mohammed Iqbal, who claimed to represent a fortnightly published from Mangalore, had visited the town municipal council on the pretext of collecting advertisements. He gave his name as Johnson and met TMC assistant engineer Udaya Kumari. When her attention was elsewhere, he had lifted her mobile set and vanished from the place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X