ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಭೆಗಳಲ್ಲಿ ಮೊಬೈಲ್ ನಿಷೇಧ

By Sachhidananda Acharya
|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಸಭೆಗಳಲ್ಲಿ ಇನ್ಮುಂದೆ ಮೊಬೈಲ್ ಬಳಸುವಂತಿಲ್ಲ | Oneindia Kannada

ಬೆಂಗಳೂರು, ಜೂನ್ 1: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಸಭೆಗಳಿಗೆ ಸಂಬಂಧಿಸಿದಂತೆ ಪ್ರಮುಖ ತೀರ್ಮಾನವೊಂದನ್ನು ತೆಗೆದುಕೊಂಡಿದ್ದಾರೆ. ಸಭೆಗಳಲ್ಲಿ ವಿಷಯಗಳ ಮೇಲಿನ ಪ್ರಾಮುಖ್ಯತೆ ಕಡಿಮೆಯಾಗುವುದನ್ನು ಗಮನಿಸಿ ಅವರು ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಈ ಸಂಬಂಧ ಸುತ್ತೋಲೆಯನ್ನು ಮುಖ್ಯಮಂತ್ರಿಗಳು ಹೊರಡಿಸಿದ್ದು ತಮ್ಮ ಸಭೆಗಳಿಗೆ ಮೊಬೈಲ್ ತರಬಾರದು ಎಂದು ಆದೇಶಿಸಿದ್ದಾರೆ.
"ಇತ್ತೀಚಿನ ದಿನಗಳಲ್ಲಿ ಸಭೆಗಳಲ್ಲಿ ಮೊಬೈಲ್ ದೂರವಾಣಿ ಉಪಯೋಗಿಸುವುದನ್ನು ಗಮನಿಸಿದೆ. ಇದರಿಂದ ಕೆಲವೊಮ್ಮೆ ಚರ್ಚೆಯಾಗುತ್ತಿರುವ ವಿಷಯಗಳ ಪ್ರಾಮುಖ್ಯತೆ ಕಡಿಮೆಯಾಗುವುದು, ವಿಷಯಾಂತರವಾಗುವುದು ನಡೆಯುತ್ತದೆ," ಎಂದು ಕುಮಾರಸ್ವಾಮಿ ಮೊಬೈಲ್ ನಿಷೇಧಕ್ಕೆ ಕಾರಣ ನೀಡಿದ್ದಾರೆ.

Mobile ban in CM Kumaraswamy’s meetings

ಆದ್ದರಿಂದ ಮುಖ್ಯಮಂತ್ರಿಯವರೊಂದಿಗಿನ ನಿಗದಿತ ಸಭೆಗಳಲ್ಲಿ ಭಾಗವಹಿಸುವವರ ಸಭೆಗೆ ಮೊಬೈಲ್ ಫೋನ್ ಗಳನ್ನು ತರಬಾರದು. ಒಂದೊಮ್ಮೆ ಮೊಬೈಲ್ ಫೋನ್ ತಂದವರು ಸಭೆಯ ಸಮನ್ವಯಾಧಿಕಾರಿಗಳ ಬಳಿ ನೀಡಿ ಸಭೆ ಮುಗಿದ ಬಳಿಕ ಮತ್ತೆ ಮೊಬೈಲ್ ಫೋನ್ ಪಡೆದುಕೊಳ್ಳಬಹುದು ಎಂದು ಅಧಿಕೃತ ಪ್ರಕಟಣೆಯಲ್ಲಿ ಹೇಳಲಾಗಿದೆ.

ಇದರಿಂದ ಪ್ರಾಮುಖ್ಯವಾದ ವಿಷಯಗಳ ಬಗ್ಗೆ ಉತ್ತಮ ನಿರ್ಣಯ ಕೈಗೊಳ್ಳಲು ಅನುವಾಗುತ್ತದೆ ಎಂದು ಕುಮಾರಸ್ವಾಮಿ ಸಮಜಾಯಿಷಿ ನೀಡಿದ್ದಾರೆ.

English summary
Chief Minister HD Kumaraswamy has ordered a ban on mobile phones in his meetings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X