ಮಂತ್ರಾಲಯ ಪ್ರಭುಗಳ ಸಾನಿಧ್ಯದಲ್ಲಿ ಜಗ್ಗೇಶ್‌

Posted By:
Subscribe to Oneindia Kannada

ರಾಯಚೂರು, ಆಗಸ್ಟ್ 09 : ಮಂತ್ರಾಲಯ ಗುರು ಶ್ರೀರಾಘವೇಂದ್ರ ಸ್ವಾಮೀಜಿಗಳ 346ನೇ ಆರಾಧಾನಾ ಮಹೋತ್ಸವದ ಅಂಗವಾಗಿ ಆಗಸ್ಟ್ 09ರಂದು ಮದ್ಯಾರಾಧನೆ ಜರುಗುತ್ತಿದೆ.

ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಲು ನಟ, ಬಿಜೆಪಿ ಶಾಸಕ ಜಗ್ಗೇಶ್ ಅವರು ಮಂತ್ರಾಲಯ ದೇಗುಲಕ್ಕೆ ಆಗಮಿಸಿದ್ದಾರೆ.

MLC Jaggesh and family visit to Sri Mantralaya Raghavendra swamy Mutt

ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಅವರು ಮಂತ್ರಾಲಯದ ರಾಘವೇಂದ್ರ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

ರಾಯರ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜಗ್ಗೇಶ್‌, ತಮಗೂ ಹಾಗೂ ರಾಯರ ಮಠಕ್ಕೂ ಇರುವ ಅವಿನಾಭಾವ ಸಂಬಂಧದ ಕುರಿತು ಮೆಲಕು ಹಾಕಿದರು.

ತಮ್ಮ ಪ್ರೇಮಕ್ಕೆ ಎದುರಾಗಿದ್ದ ಸಂಕಷ್ಟಗಳನ್ನ ರಾಯರೇ ಪರಿಹರಿಸಿದ್ದರು, ದಾಂಪತ್ಯ ಜೀವನಕ್ಕೆ ಕಾಲಿಡಲು ರಾಯರೇ ಕಾರಣ. 33 ವರ್ಷಗಳಿಂದ ರಾಯರ ದರ್ಶನ ಪಡೆಯುತ್ತಿದ್ದೇನೆ ಎಂದು ಜಗ್ಗೇಶ್‌ ಹೇಳಿದರು.

ಅಗಸ್ಟ್ 10ರಂದು ಉತ್ತರ ಆರಾಧನೆ ನಂತರ ರಾಘವೇಂದ್ರ ಸ್ವಾಮೀಜಗಳ ಆರಾಧಾನಾ ಮಹೋತ್ಸವ ಸಂಪನ್ನಗೊಳ್ಳಲಿದೆ. ಜಗ್ಗೇಶ್ ಅವರು ಮಂತ್ರಾಲಯದ ಯತಿಗಳನ್ನು ಕೂಡಾ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ಮಂತ್ರಾಲಯಕ್ಕೆ ಹೋಗುವ ಹಾದಿ, ಮಂತ್ರಾಲಯ ಸಾನಿಧ್ಯದಲ್ಲಿ ಎಂದು ಜಗ್ಗೇಶ್ ಅವರು ಟ್ವೀಟ್ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Raichur: MLC Jaggesh, his wife Parimala, producer Rokline Venkatesh, ator Doddanna today (August 09) visited Sri Raghavendra swamy Mutt, Mantralaya. 346th Aradhana of Raghavendra swamiji is being held between Aug 8 and Aug 10.
Please Wait while comments are loading...