ಹಾಳಾದವರು 17 ಜನರು,ಸುಖ ಪಟ್ಟವರು ಅವರು; ಈಶ್ವರಪ್ಪ ವಿರುದ್ದ ಹೆಚ್ ವಿಶ್ವನಾಥ್ ಕಿಡಿ
ಮೈಸೂರು, ಜುಲೈ 08: ಕಾಂಗ್ರೆಸ್ ನಿಂದ ಬಂದವರಿಂದ ಪಕ್ಷ ಹಾಳಾಗಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿರುವ ಹೇಳಿಕೆಯನ್ನ ಹಿಂಪಡೆದ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಾಳಾದವರು 17 ಜನರು,ಸುಖ ಪಟ್ಟವರು ಅವರು, ಈಶ್ವರಪ್ಪ ಲೂಟಿ ಮಾಡಿ ಮಂತ್ರಿ ಗಿರಿ ಕಳೆದುಕೊಂಡರು ಎಂದು ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪೆನ್ ಡ್ರೈವ್ ಆರೋಪದ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಒಬ್ಬ ಹಿರಿಯ ನಾಯಕ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಹಾಗೂ ಮಾಜಿ ಪ್ರಧಾನಿಗಳ ಮಗ. ಕುಮಾರಸ್ವಾಮಿ ಅವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ.ಇದ್ದರೆ ತೋರಿಸಲಿ ಇದು ಒಂತರ ಬ್ಲಾಕ್ ಮೇಲಿಂಗ್. ಪೆನ್ ಡ್ರೈವ್ ತೋರಿಸಿ ಜೇಬಿನಲ್ಲಿ ಇಟ್ಟುಕೊಳ್ಳುವುದು ಶೋಭೆ ತರುವುದಿಲ್ಲ. ಇದು ಒಂತರ ಮಿಮಿಕ್ರಿ ಎಂದು ಹೇಳಿದರು.
ಜೆಡಿಎಸ್ ಬಿಜೆಪಿ ಲೋಕಸಭೆ ಚುನಾವಣೆಗೆ ಮೈತ್ರಿ ವಿಚಾರವಾಗಿ ಮಾತನಾಡಿ, ಈಗಾಗಲೇ ಯಡಿಯೂರಪ್ಪನವರು ಶಹಬ್ಬಾಸ್ ಕುಮಾರಸ್ವಾಮಿ ಎಂದು ಹೇಳಾಗಿದೆ. ಮುಂದಿನ ಲೋಕಸಭೆ ಚುನಾವಣೆಯನ್ನ ಎರಡು ಪಕ್ಷಗಳು ಒಟ್ಟಾಗಿ ಎದುರಿಸುತ್ತವೆ.ಇದರಲ್ಲಿ ಯಾವುದೇ ಸಂಶಯವಿಲ್ಲ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಇನ್ನೂ ಸಿದ್ದರಾಮಯ್ಯ ಬಜೆಟ್ ಕುರಿತು ಮಾತನಾಡಿದ ಅವರು, ಇದು ಸರ್ವ ಜನ ಸಮ ಸ್ಪರ್ಷಿ ಬಜೆಟ್. ಸುಸಂಸ್ಕೃತ ಸಮಾಜ ಕ್ಕೆ ಉತ್ತಮ ಬಜೆಟ್, ಅಕ್ಷರ ಅನ್ನ ಅರೋಗ್ಯ ಕ್ಕೆ ಒತ್ತು ನೀಡಿದ್ದಾರೆ..
ಇದರ ಜೊತೆ ಸಮಾಜ ಕಲ್ಯಾಣ ಮಹಿಳೆಯರ ಸ್ವಲಂಭನೆಗೆ ಒತ್ತು ನೀಡಲಾಗಿದೆ. ಶಿಕ್ಷಣ ಕ್ಷೇತ್ರಕ್ಕೂ ಅನುದಾನ ನೀಡಲಾಗಿದೆ. ಸಾಮಾನ್ಯ ಜನಕ್ಕೆ ಮೂಲಭೂತ ಸೌಕರ್ಯ ನೀಡಿದೆ, ಎಲ್ಲ ಜಾತಿ ಜನಾಂಗ ಭಾಷೀಕರಿಗೆ ಬೇಸಿಕ್ ಬ್ರೆಡ್ ನೀಡಿದೆ. ಕನ್ನಡ ಪುಸ್ತಕ ಖರೀದಿ ಗೆ ಅನುದಾನ ನೀಡಿದೆ, ಇದು ತಾಜಾ ಅಪ್ಪಟ ಕನ್ನಡ ಸರ್ಕಾರ ಆಗಿದೆ. ಅಲ್ಲದೇ ಅಲೆಮಾರಿ ಜನಾಂಗದ ವರಿಗೆ 100 ಕೋಟಿ ಅನುದಾನ ನೀಡಿದೆ. ಟ್ರೈಬಲ್ ಸೇಕ್ಟರ್ನ 13 ಪಗಂಡಗಳಿಗೂ ಹಣ ನೀಡಲಾಗಿದೆ ಎಂದರು.
ರಾಜ್ಯ ಸರ್ಕಾರ ಐದು ಗ್ಯಾರೆಂಟಿ ಯೋಜನೆನೀಡಿದ್ದಾರೆ. ಐದು ಗ್ಯಾರೆಂಟಿ ಗೆ ಜಾತಿ ಇಲ್ಲ ಧರ್ಮ ಇಲ್ಲ ರಾಜಕೀಯ ಇಲ್ಲ, ಉಳ್ಳವರು ಈ ಯೋಜನೆಯನ್ನು ನಿರಾಕರಿಸಿ. ಆದರೆ, ನಮ್ಮಲ್ಲಿ ಕೋಟ್ಯಾಂತರ ದುಡ್ಡು ಇದ್ದರೂ..ಸಾರಥಿ ಸಾಲಿನಲ್ಲಿ ನಿಂತಿಕೊಳ್ಳುತ್ತಾರೆ. ಈ ಬಜೆಟ್ ಇಮಪ್ಲಿಮೆಂಟೇಷನ್ ಮುಖ್ಯ. ಪಂಚಾಯತ್ ಗಳಲ್ಲಿ ಮಂತ್ರಿಗಳು ಕುತ್ತಿಕೊಳ್ಳಬೇಕು. ಅನುಷ್ಠಾನ ಕೂಡ ಒಂದು ರೀತಿಯ ಸವಾಲು ಎಂದರು.
ಸಂವಿಧಾನದ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ನಾಯಕರು ಇಲ್ಲದೆಡ ಇರುವುದು ದುರಂತ. ಮೇಲ್ಮನೆಯಲ್ಲಿಯೂ ಇಲ್ಲ ಕೆಳ ಮನೆಯಲ್ಲಿಯೂ ಇಲ್ಲ. ಈಗ ವಿರೋಧ ಪಕ್ಷದ ನಾಯಕರು ಈಗ
ನಮಗೆ ಯೋಗ್ಯತೆ ಇಲ್ಲ ಕುಮಾರಸ್ವಾಮಿಗೆ ಬಿಟ್ಟು ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ವರ್ಗಾವಣೆ ದಂಧೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ರವರು ಹಿರಿಯ ನಾಯಕರು. ಏನಾದರೂ ಇದ್ರೆ ತೋರಿಸಲಿ, ಸುಮ್ಮನೆ ಬ್ಲಾಕ್ ಮೇಲ್ ಮಾಡುವುದು ಅಲ್ಲ ಎಂದರು.












Click it and Unblock the Notifications