ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮತ್ತೆ ರವಿ ಪೂಜಾರಿ ಕರೆ

ಉಡುಪಿ, ಮೇ 28 : ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕರೆ ಮಾಡಿದ್ದ ಭೂಗತ ಪಾತಕಿ ರವಿ ಪೂಜಾರಿ 10 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ, ಬುಧವಾರ ಕರೆ ಮಾಡಿದ್ದ ಆತ ನೀವು ಹಣ ನೀಡುವುದು ಬೇಡ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾನೆ.

'ರವಿ ಪೂಜಾರಿ ಎರಡು ದಿನ ಹಣ ಕೊಡುವಂತೆ ಬೆದರಿಕೆ ಹಾಕಿದ್ದ. ಆದರೆ, ಬುಧವಾರ ಸಂಜೆ ಕರೆ ಮಾಡಿ ತುಳುವಿನಲ್ಲಿ ಮಾತನಾಡಿ ನಿಮ್ಮಿಂದ ನನಗೆ ಒಂದು ರೂಪಾಯಿ ಕೂಡಾ ಬೇಡ ಎಂದು ಹೇಳಿದ್ದಾನೆ'. ಎಂದು ಶಾಸಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ. [ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ರವಿ ಪೂಜಾರಿ ಕರೆ]

halady srinivas shetty

'ನನಗೆ ಹಲವಾರು ಜನರು ಫೋನ್ ಮಾಡಿ ನೀವು ಜನೋಪಕಾರಿ ಎನ್ನುವುದನ್ನು ತಿಳಿಸಿದ್ದಾರೆ. ಇನ್ನು ಮುಂದೆ ನಿಮ್ಮಿಂದ ಹಣ ಕೇಳುವುದಿಲ್ಲ'. ಎಂದು ಬುಧವಾರ ಕರೆ ಮಾಡಿದಾಗ ರವಿ ಪೂಜಾರಿ ಹೇಳಿದ್ದಾನೆ ಎಂದು ಶಾಸಕರು ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ 12.30ರಿಂದ 1.30ರ ತನಕ ಮೂರು ಬಾರಿ ಶಾಸಕರಿಗೆ ಕರೆ ಮಾಡಿದ್ದ ಭೂಗತ ಪಾತಕಿ ರವಿ ಪೂಜಾರಿ 10 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಮಂಗಳವಾರ ಮತ್ತೆ ಕರೆ ಮಾಡಿ ಹಣ ನೀಡುವಂತೆ ಹೇಳಿದ್ದ. ಆದರೆ, ಬುಧವಾರ ಕರೆ ಮಾಡಿ ಹಣ ಬೇಡ ಎಂದು ಹೇಳಿದ್ದಾನೆ.

ರವಿ ಪೂಜಾರಿ ಕರೆ ಮಾಡಿರುವ ಕುರಿತು ಶಾಸಕ ಶ್ರೀನಿವಾಸ ಶೆಟ್ಟಿ ಅವರು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಾಸಕರ ಮನೆಗೆ ಅಗತ್ಯ ಪೊಲೀಸ್ ಭದ್ರತೆಯನ್ನು ಪೊಲೀಸರು ಒದಗಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+