ನೀವು ಧೀರರು. ಸದನಕ್ಕೆ ಬನ್ನಿ ಚರ್ಚೆ ಮಾಡೋಣ: ಡಿ ಕೆ ಶಿವಕುಮಾರ್ ವಿರುದ್ಧ ಅಶ್ವತ್ಥ್ ನಾರಾಯಣ ವಾಗ್ದಾಳಿ
ಬೆಂಗಳೂರು, ಅಕ್ಟೋಬರ್ 28: ಹೆಸರು ಬದಲಾವಣೆಯ ವೀರ ಅಂದರೆ ಅದು ಡಿ.ಕೆ.ಶಿವಕುಮಾರ್. ನೀವು ಎಂಟು ಬಾರಿ ಕನಕಪುರ ಕ್ಷೇತ್ರ ಪ್ರತಿನಿಧಿಸಿದ್ರು, ಆ ಕ್ಷೇತ್ರ ಇಂದಿಗೂ ಹಿಂದುಳಿದ ಕ್ಷೇತ್ರ ಆಗಿದೆ.
ಒಂದುವರೆ ಸಾವಿರ ಕೋಟಿ ಘೋಷಣೆ ಆಗಿದೆ. ನಿಮ್ಮ ಯಶಸ್ಸು, ಎಲ್ಲಿಂದ ಹೇಗೆ ಬಂದ್ರಿ, ನೀವು ಇಷ್ಟು ವರ್ಷ ಇಲ್ಲದ ಪರಿಜ್ಞಾನ, ಜ್ಞಾನೋದಯ ಆಗಿದೆ. ಸದನಕ್ಕೆ ಬನ್ನಿ ಚರ್ಚೆ ಮಾಡೋಣ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೆಂಗಲ್ ಹನುಮಂತಯ್ಯ ರಾಮನಗರ ಅಂತ ಹೆಸರಿಟ್ಟವರು.ಅನೇಕರು ರಾಮಮಂದಿರ ಅಭಿವೃದ್ಧಿ ಮಾಡಿದ್ದಾರೆ, ಹಾಗಾಗಿ ರಾಮನಗರ ಅಂತ ಹೆಸರಿಡಲಾಗಿದೆ.ಆದರೆ, ನೀವು ಒಂದೇ ಒಂದು ಕಲ್ಲಿಟ್ಟಿಲ್ಲ. ಸ್ವಾರ್ಥಕ್ಕಾಗಿ ಕಲ್ಲು ಗಣಿಗಾರಿಕೆ, ಅದಿರು ಲೂಟಿ ಮಾಡಿದ್ದೀರಿ. ನಮ್ಮ ನೆಚ್ಚಿನ ಪ್ರಧಾನಿ ಮೋದಿ ಹೆದ್ದರಿ ಅಭಿವೃದ್ಧಿ ಮಾಡಿದ್ದಾರೆ. ಶಿವಕುಮಾರ್ ಒಂದೇ ಒಂದು ಅಭಿವೃದ್ಧಿ ಮಾಡಿದ್ದೀರಾ.? ಎಂದು ಪ್ರಶ್ನಿಸಿದ್ದಾರೆ.

ಸುಮ್ಮನೇ ಟನಲ್ ಅಂತೀರಾ.ಅದರ ಬಗ್ಗೆ ನಿಮಗೆ ಏನಾದ್ರೂ ಮಾಹಿತಿ ಇದೆಯಾ.? ಜಲಜೀವನ್ ಮಿಷನ್ ಮೂಲಕ ನೀರು ಕೊಟ್ಟಿದ್ದು ನಾವು. ಮೆಡಿಕಲ್ ಕಾಲೇಜನ್ನು ಕಳ್ಳತನ ಮಾಡಿಕೊಂಡಿ ಹೋದ್ರಿ. ಡೆಪಾಸಿಟ್ ಇಲ್ಲದ ಬಿಜೆಪಿ ನಾವು ಮೆಡಿಕಲ್ ಕಾಲೇಜು ಕೊಟ್ಟೆವು. ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಬಂದಿರೋ ಐಟಿ ರೇಡ್ ಮುಚ್ಚಿಹಾಕಿಕೊಳ್ಳಲು ಹೀಗೆ ಹೇಳಿಕೆ ಕೊಟ್ಟಿದ್ದೀರಿ.
ನೀವು ಭಾರತದ ಹೆಸರನ್ನೇ ವಿರೋಧ ಮಾಡ್ತಿದ್ದಿರಿ. ಭಾರತದ ಹೆಸರಲ್ಲೇ ಪೂಜೆ ಆರಂಭವಾಗುತ್ತೆ. ನೀವು ಗುಣ ಮಟ್ಟದ ಶಿಕ್ಷಣ ಕೊಡಿ, ನಿಮಗೆ ಹೇಗೆ ಗುಣಮಟ್ಟದ ಶಿಕ್ಷಣ ಸಿಕ್ಕಿದೆ, ಅದೇ ರೀತಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ಕೊಡಿ.ಅದು ಬಿಟ್ಟು ರಾಮನಗರ ಹೆಸರನ್ನ ತೆಗೆಯಲು ಹೊರಟಿದ್ದಿರಿ ಎಂದರು.

ರಾಮನಗರ ಉಸ್ತುವಾರಿ ಸಚಿವರಾಗದೆ ಬೆಂಗಳೂರಿಗೆ ಬಂದಿದ್ದೀರಿ. ಜನರಿಗೆ ಒಳ್ಳೆಯದು ಮಾಡಲ್ಲ, ಆದ್ರೆ ಕೆಟ್ಟದ್ದನ್ನಂತೂ ಮಾಡಬೇಡಿ. ಮಂತ್ರಿ ಆಗಿ ಎಷ್ಟು ಕೆಡಿಪಿ ಸಭೆಗಳನ್ನು ಮಾಡಿದ್ದೀರಿ.
ದಿಂಡಿಗಲ್ ಕಾಮಗಾರಿ ಅರ್ಧಕ್ಕೆ ನಿಂತಿದೆ.ಜನರ ಭಾವನೆಗೆ ಧಕ್ಕೆ ತರಬೇಡಿ. ಈ ಕಲ್ಪನೆಯಿಂದ ಹೊರ ಬನ್ನಿ ಎಂದು ಹೇಳಿದರು.
ರಾಮನಗರ ಜಿಲ್ಲೆ ತೆಗೆಯಲು ಹೋಗ್ತಿದೀರಿ. ರಾಮನಗರಕ್ಕೆ ಹಲವರ ಕೊಡುಗೆ ಇದೆ, ನೀವು ರಾಮದೇವರ ಬೆಟ್ಟಕ್ಕೆ ಒಂದು ಕಲ್ಲೂ ಎತ್ತಿಟ್ಟಿಲ್ಲ. ನಿಮ್ಮ ಕೊಡುಗೆ ರಾಮನಗರಕ್ಕೆ ಏನೂ ಇಲ್ಲ
ಭೂಮಿ, ಹಣ ಅಂತ ನಿಮ್ಮ ಸ್ವಂತ ಅಭಿವೃದ್ಧಿ ಆಗಿದೀರಿ, ಮೋದಿಯವ್ರು ರಾಮನಗರಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ನೀವು ಅದೇ ಜಿಲ್ಲೆ ಆಗಿ ನಿಮ್ಮಿಂದ ಏನೂ ಆಗಿಲ್ಲ. ರಾಮನಗರಕ್ಕೆ ಕೊಟ್ಟ ಮೆಡಿಕಲ್ ಕಾಲೇಜು ಕನಕಪುರಕ್ಕೆ ಕದ್ದು ತಗೊಂಡ್ ಹೋದ್ರಿ ಎಂದು ವಾಗ್ದಾಳಿ ನಡೆಸಿದರು.
ವೈಜ್ಞಾನಿಕವಾಗಿ ವ್ಯವಸಾಯ ಮಾಡಲು, ಶಿಕ್ಷಣ ಪಡೆಯಲು, ಪ್ರವಾಸೋದ್ಯಮ ಬೆಳೆಯಲು ಏನಾದ್ರೂ ಮಾಡಿದ್ದೀರಾ.ಆರೋಗ್ಯ ವ್ಯವಸ್ಥೆಗೆ ಏನು ಕೊಡುಗೆ, ಮಂತ್ರಿಯಾಗಿದ್ರಿ ಸಾತನೂರಿಗೆ ಏನಾದ್ರೂ ಕೊಟ್ರಾ. ಮಂತ್ರಿಯಾದವರು ತಮ್ಮ ಕ್ಷೇತ್ರ ಅಭಿವೃದ್ಧಿ ಮಾಡ್ತಾರೆ. ಇವರು ಏನು ಮಾಡಿದ್ದಾರೆ.ಪ್ರತಿಯೊಬ್ಬರಿಗೂ ಮನೆ ಕಟ್ಟಲು ಸಾಧ್ಯವಿಲ್ಲವಾ.? ಟೊಯೋಟಾ ಕಂಪನಿಗೆ ಎಷ್ಟು ಕಿರುಕುಳ ಕೊಟ್ಟಿದ್ದಾರೆ.
ಕುಮಾರಸ್ವಾಮಿ ಆಮರಣಾಂತ ಉಪವಾಸ ವಿಚಾರವಾಗಿ ಮಾತನಾಡಿ, ಆಮರಣಾಂತ ಉಪವಾಸ ಮಾಡುವ ಅವಶ್ಯಕತೆ ಉದ್ಬವ ಆಗಲ್ಲ. ಕುಮಾರಸ್ವಾಮಿ ಅವರಿಗೆ ನಮ್ಮ ಪಕ್ಷದಿಂದಲೂ ಬೆಂಬಲ ಕೊಡುತ್ತೇವೆ, ಎಲ್ಲಾ ರೀತಿ ಸಹಕಾರ ಕೊಡುತ್ತೇವೆ. ಇವರು ಬೆಂಗಳೂರಿನ ಗುಂಡಿ ಮುಚ್ಚಲು ಆಗಿಲ್ಲ. ಸಮಸ್ಯೆ ಬಗೆಹರಿಸಲಾಗಿಲ್ಲ. ಕಾಂಗ್ರೆಸ್ ಅಂದ್ರೆ ಸುಳ್ಳು ಸರ್ಕಾರ.ಕರೆಂಟ್ ಕೊಡಲಾಗಿಲ್ಲ.
ರೈತರ ಆತ್ಮಹತ್ಯೆ, ಬರ, ಕಾನೂನು ಸುವ್ಯವಸ್ಥೆಯಲ್ಲಿ ವಿಫಲ ಆಗಿದ್ದಾರೆ.
ಐಟಿ ರೇಡ್‌ನಲ್ಲಿ ದುಡ್ಡು ಸಿಕ್ಕಿದೆ. ಅವರಿಗೂ ಸುಪ್ರೀಂ ಕೋರ್ಟ್ ನೋಟೀಸ್ ನೀಡಿದೆ, ಅವೆಲ್ಲವನ್ನು ಮರೆಸಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿ ಜನರ ಕೈ ಹಿಡಿಯೋದು ಬಿಟ್ಟು.ಜನರ ಕೈ ಬಿಡುವ ಕೆಲಸ ಮಾಡಿದ್ದಾರೆ, ಕಾಂಗ್ರೆಸ್ ಅಂದ್ರೆ ಲೂಟಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಡ್ಯ ಶಾಸಕ ಗಣಿಗ ರವಿ ಆಪರೇಷನ್ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿ, ಆ ರೀತಿ ಆಗೋಕೆ ಸಾಧ್ಯವಾ.? ಅವರವರೇ ಆಪರೇಷನ್ ಮಾಡಿಕೊಳ್ತಿದ್ದಾರೆ. ಟನಲ್‌ಗೆ ಇಷ್ಟೋಂದು ಕಾಂಪಿಟೇಷನ್ ಇದೆ. ಗಾಳಿಯಲ್ಲಿರೋ ವಿಚಾರಕ್ಕೆ ಇಷ್ಟೋಂದು ಕಾಂಪಿಟೇಷನ್ ಇದೆ. ಕಾರ್ಯರೂಪಕ್ಕೆ ಬಂದ್ರೆ ಇನ್ನೆಷ್ಟು ಕಾಂಪಿಟೇಷನ್ ಇರಬಹುದು. 135 ಶಾಸಕರಿದ್ದಾರೆ ಎಲ್ಲರೂ ನಿಮ್ಮವರೆ.
ನೀವೆಲ್ಲರೂ ಒಗ್ಗಟ್ಟಾಗಿ ಹೋಗಿ, ನಮ್ಮ ಮೇಲೆ ಯಾಕೆ ಆಪರೇಷನ್ ಆರೋಪ ಮಾಡ್ತಿದ್ದೀರಾ.? ಎಂದು ಪ್ರಶ್ನಿಸಿದರು.












Click it and Unblock the Notifications