ಶಾಸಕ ಸ್ಥಾನಕ್ಕೆ 'ರೆಬೆಲ್ ಸ್ಟಾರ್' ಅಂಬರೀಶ್ ರಾಜೀನಾಮೆ

Posted By:
Subscribe to Oneindia Kannada

ಬೆಂಗಳೂರು, ಜೂನ್ 20 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪುನಾರಚನೆಯಿಂದ ಅಸಮಾಧಾನಗೊಂಡಿರುವ ಅಂಬರೀಶ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಂಪುಟ ಪುನಾರಚನೆ ವೇಳೆ ಅಂಬರೀಶ್ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು.

ಸೋಮವಾರ ಮಧ್ಯಾಹ್ನ ವಿಧಾನಸೌಧಕ್ಕೆ ಆಗಮಿಸಿದ ಅಂಬರೀಶ್ ಅವರ ಆಪ್ತ ಸಹಾಯಕ ಶ್ರೀನಿವಾಸ್ ಅವರು ಉಪ ಸಭಾಪತಿ ಶಿವಶಂಕರ ರೆಡ್ಡಿ ಅವರಿಗೆ ರಾಜೀನಾಮೆಯನ್ನು ಸಲ್ಲಿಸಿದರು. ಆದರೆ, ಖುದ್ದಾಗಿ ಅವರೇ ಬಂದು ರಾಜೀನಾಮೆ ನೀಡಬೇಕು ಎಂದು ಶ್ರೀನಿವಾಸ್ ಅವರನ್ನು ಶಿವಶಂಕರ ರೆಡ್ಡಿ ಅವರು ವಾಪಸ್ ಕಳಿಸಿದರು.[ಅಂಬಿಗೆ ಜೆಡಿಎಸ್ ಆಫರ್]

ambareesh

'ಮಂಡ್ಯ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ' ಎಂಬ ಒಂದು ಸಾಲಿನ ರಾಜೀನಾಮೆ ಪತ್ರವನ್ನು ಅಂಬರೀಶ್ ಅವರು ಶ್ರೀನಿವಾಸ್ ಅವರ ಮೂಲಕ ಕಳುಹಿಸಿದ್ದರು. ಆದರೆ, ಅದನ್ನು ಪಡೆಯದೇ ಶ್ರೀನಿವಾಸ್ ಅವರನ್ನು ವಾಪಸ್ ಕಳಿಸಲಾಗಿದೆ. [ಮಾಲೀಕಯ್ಯ ಗುತ್ತೇದಾರ್ ರಾಜೀನಾಮೆ]

ರಾಜೀನಾಮೆ ಕುರಿತು ವಿವರಣೆ ನೀಡಲು ಜೂನ್ 21ರ ಮಂಗಳವಾರ ಬೆಳಗ್ಗೆ 10.30ಕ್ಕೆ ಅಂಬರೀಶ್ ಅವರು ಬೆಂಗಳೂರಿನ ಜೆ.ಪಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀನಿವಾಸ್ ಅವರು, 'ರಾಜೀನಾಮೆ ಪತ್ರವನ್ನು ನೀಡಲು ಹೇಳಿದರು. ಅದನ್ನು ನೀಡಲು ಬಂದೆ. ಆದರೆ, ಸ್ವೀಕರಿಸುವುದಿಲ್ಲ ಎಂದು ವಾಪಸ್ ಕಳಿಸಿದ್ದಾರೆ. ಈ ಬಗ್ಗೆ ಅಂಬರೀಶ್ ಅವರಿಗೆ ಮಾಹಿತಿ ನೀಡುತ್ತೇನೆ' ಎಂದು ಹೇಳಿದರು. [ಕ್ಯಾಬಿನೆಟ್ ನಿಂದ ಅಂಬರೀಶ್ ಡ್ರಾಪ್: ಗುಡುಗಿದ ಪತ್ನಿ ಸುಮಲತಾ]

ವಸತಿ ಖಾತೆ ನಿರ್ವಹಣೆ ಮಾಡುತ್ತಿದ್ದ ಅಂಬರೀಶ್ ಅವರನ್ನು ಸಂಪುಟ ಪುನಾರಚನೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈ ಬಿಟ್ಟಿದ್ದರು. ಸುಮಲತಾ ಅಂಬರೀಶ್ ಅವರು ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದರು. [ಮೊದಲ ಬಾರಿ ಸಚಿವರಾದ 7 ಶಾಸಕರ ಪರಿಚಯ]

ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿದ್ದ ನಿರ್ಮಾಪಕರು, ನಟರು ಅಂಬರೀಶ್ ಅವರನ್ನು ಸಂಪುಟದಲ್ಲಿ ಮುಂದುವರೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದ್ದರು.

ಮುಂದೇನು ? : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಂಬರೀಶ್ ಅವರ ಮುಂದೆ ಎರಡು ದಾರಿಗಳಿವೆ.

1. ಉಪ ಸಭಾಪತಿ ಶಿವಶಂಕರ ರೆಡ್ಡಿ ಅವರು ರಾಜೀನಾಮೆಯನ್ನು ಸ್ವೀಕರಿಸಿಲ್ಲ. ಆದ್ದರಿಂದ, ಅಂಬರೀಶ್ ಅವರು ಖುದ್ದಾಗಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಬಹುದು.

2. ನಾನು ರಾಜೀನಾಮೆ ನೀಡಿದ್ದೇನೆ. ಸ್ವೀಕಾರ ಮಾಡುವುದು ನಿಮಗೆ ಬಿಟ್ಟ ವಿಚಾರ ಎಂದು ತಟಸ್ಥ ನಿಲುಲು ತಾಳಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Upset over Chief minister Siddaramaiah cabinet reshuffle, actor Ambareesh resigned for Mandya MLA post On June 20, 2016. Siddaramaiah dropped Ambareesh from cabinet during reshuffle.
Please Wait while comments are loading...