ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ರಾಪ್ತೆ ಕಾರಣಕ್ಕೆ ಮದುವೆ ರದ್ದಾಗದು; ಕರ್ನಾಟಕ ಹೈಕೋರ್ಟ್

By ಎಸ್‌ಎಸ್‌ಎಸ್
|
Google Oneindia Kannada News

ಬೆಂಗಳೂರು, ಜನವರಿ 24; ಅಪ್ರಾಪ್ತೆ ಎಂಬ ಒಂದೇ ಕಾರಣಕ್ಕೆ ಹಿಂದೂ ವಿವಾಹ ಕಾಯಿದೆಯನ್ವಯ ಜರುಗಿರುವ ವಿವಾಹವನ್ನು ರದ್ದುಗೊಳಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯಪೀಠ ಈ ತೀರ್ಪು ನೀಡಿದೆ.

ಸಲಿಂಗ ವಿವಾಹ: ಕಾನೂನು ಮಾನ್ಯತೆ ಕೋರಿದ್ದ ಎಲ್ಲಾ ಮನವಿಗಳನ್ನು ತನಗೆ ವರ್ಗಾಯಿಸಿಕೊಂಡ ಸುಪ್ರೀಂಸಲಿಂಗ ವಿವಾಹ: ಕಾನೂನು ಮಾನ್ಯತೆ ಕೋರಿದ್ದ ಎಲ್ಲಾ ಮನವಿಗಳನ್ನು ತನಗೆ ವರ್ಗಾಯಿಸಿಕೊಂಡ ಸುಪ್ರೀಂ

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, ವಿವಾಹದ ಸಂದರ್ಭದಲ್ಲಿ ಯುವತಿ ಅಪ್ರಾಪ್ತಳಾಗಿದ್ದಳೆಂಬ ಕಾರಣಕ್ಕೆ ಮದುವೆಯನ್ನು ರದ್ದುಗೊಳಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಮಹತ್ವದ ಆದೇಶ ನೀಡಿದೆ.

ಮದುವೆ ಸೀಸನ್: 40 ದಿನಗಳಲ್ಲಿ 32 ಲಕ್ಷ ಜೋಡಿಗೆ ವಿವಾಹ, 3.75 ಲಕ್ಷ ಕೋಟಿ ಖರ್ಚು! ಮದುವೆ ಸೀಸನ್: 40 ದಿನಗಳಲ್ಲಿ 32 ಲಕ್ಷ ಜೋಡಿಗೆ ವಿವಾಹ, 3.75 ಲಕ್ಷ ಕೋಟಿ ಖರ್ಚು!

Minor Is Not A Reason To Annul The Marriage Ruled Karnataka High Court

ನ್ಯಾಯಾಲಯ 'ಹಿಂದೂ ವಿವಾಹ ಕಾಯಿದೆಯ ಸೆಕ್ಷನ್‌ 11ರಡಿ ಅಪ್ರಾಪ್ತೆ ಎಂಬ ಒಂದೇ ಕಾರಣಕ್ಕೆ ವಿವಾಹ ಅನೂರ್ಜಿತವಾಗುವುದಿಲ್ಲ. ಅಪ್ರಾಪ್ತೆಯೊಂದಿನ ವಿವಾಹವನ್ನು ಸೆಕ್ಷನ್‌ 11ರ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಅದರಲ್ಲಿ ಮದುವೆಗೆ ಇಷ್ಟೇ ವಯಸ್ಸಾಗಿರಬೇಕೆಂಬ ಷರತ್ತು ಇಲ್ಲ. ಹಾಗಾಗಿ ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ವಿವಾಹ ರದ್ದಾಗದು' ಎಂದು ಆದೇಶಿಸಿದೆ.

ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಎರಡನೇ ಮದುವೆ ಕನಸಿಗೆ ತಣ್ಣೀರೆರೆಚಿದ ಹೈಕೋರ್ಟ್‌ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಎರಡನೇ ಮದುವೆ ಕನಸಿಗೆ ತಣ್ಣೀರೆರೆಚಿದ ಹೈಕೋರ್ಟ್‌

ಮದುವೆ ಅನೂರ್ಜಿತವಾಗದು ನ್ಯಾಯಪೀಠ ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 5(3) ಉಲ್ಲೇಖಿಸಿ ಅದರ ಪ್ರಕಾರ ಮದುವೆ ಸಂದರ್ಭದಲ್ಲಿ ವರನ ವಯಸ್ಸು 21 ಮತ್ತು ವಧುವಿನ ವಯಸ್ಸು 18 ಇರಬೇಕೆಂಬ ನಿಯಮವಿದೆ. ಆದರೆ ಸೆಕ್ಷನ್‌ 11ರ ಪ್ರಕಾರ ಒಮ್ಮೆ ಮದುವೆ ಆದರೆ ಅದನ್ನು ಅನೂರ್ಜಿತಗೊಳಿಸಲಾಗದು ಎಂದೂ ಸಹ ಹೇಳಿದೆ.

ಏನಿದು ಪ್ರಕರಣ?; ಅರ್ಜಿದಾರ ಪತಿ 2012ರ ಜೂ.15ರಂದು ಹಿಂದೂ ವಿವಾಹ ಕಾಯ್ದೆ ಪ್ರಕಾರ ಯುವತಿಯನ್ನು ಮದುವೆಯಾಗಿದ್ದರು. ಆನಂತರ ಅವರಿಗೆ ತಮ್ಮ ಪತ್ನಿ, ಮದುವೆಯಾಗುವ ಮುನ್ನ ಅಪ್ರಾಪ್ತೆಯಾಗಿದ್ದರು, ಆದ್ದರಿಂದ ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 11 ರ ಪ್ರಕಾರ ಮದುವೆ ಸಮಯದಲ್ಲಿ ಪತ್ನಿ ಅಪ್ರಾಪ್ತೆಯಾಗಿದ್ದರಿಂದ ಮದುವೆಯನ್ನು ರದ್ದು ಅಥವಾ ಅಸಿಂಧುಗೊಳಿಸಬೇಕೆಂದು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ಕೌಟುಂಬಿಕ ನ್ಯಾಯಾಲಯ ಮದುವೆ ಸಮಯದಲ್ಲಿ ಪತ್ನಿಗೆ 16 ವರ್ಷ 11 ತಿಂಗಳು 8 ದಿನ ಆಗಿತ್ತು, ಅವರಿಗೆ ಸೆಕ್ಷನ್‌ 5(3)ರಂತೆ ಮದುವೆಗೆ 18 ವರ್ಷ ಆಗಿರಲಿಲ್ಲ, ಅಪ್ತಾಪ್ತರಾಗಿದ್ದರು. ಆ ಕಾರಣಕ್ಕೆ ಸೆಕ್ಷನ್‌ 11ರ ಪ್ರಕಾರ ಮದುವೆ ಊರ್ಜಿತವಾಗುವುದಲ್ಲ, ಅನೂರ್ಜಿತ ಗೊಳಿಸಲಾಗುವುದು ಎಂದು ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

English summary
Minor is not a reason to annul the marriage ruled Karnataka high court. Court cancelled the order of the family court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X