ಯಡಿಯೂರಪ್ಪಗೆ ಯಡಿಯೂರಪ್ಪನೇ ಸರಿಸಾಟಿ,‌ ಎಲ್ಲವೂ ಸುಖಾಂತ್ಯವಾಗಿದೆ: ವಿ.ಸೋಮಣ್ಣ ಹೇಳಿದ್ದೇನು?

ವಿಜಯೇಂದ್ರಗೆ ಯಡಿಯೂರಪ್ಪ ಅಪ್ಪ. ಅವರೊಬ್ಬರಿಗೆ ಮಾತ್ರ ಯಡಿಯೂರಪ್ಪ ನಾಯಕ ಅಲ್ಲ ಎಂದು ವಿ ಸೋಮಣ್ಣ ಹೇಳಿದರು.

ಬೆಂಗಳೂರು, ಮಾರ್ಚ್16:‌ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಬ್ಬರ ಪ್ರಚಾರ ನಡೆಸುತ್ತಿದ್ದ ಬಿಜೆಪಿ ನಾಯಕರ ವಿರುದ್ದ ಅಸಮಾಧಾನಗೊಂಡಿದ್ದ ಸಚಿವ ವಿ ಸೋಮಣ್ಣ ಚುನಾವಣಾ ಹೊತ್ತಲಿ ಕಾಂಗ್ರೆಸ್‌ ಪಕ್ಷವನ್ನ ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆ ಜೋರಾಗಿತ್ತು.

ಇತ್ತ ಸೋಮಣ್ಣ ಅವರ ಜೊತೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಮಾತನಾಡಿ, ಅಸಮಾಧಾನ ಶಮನಕ್ಕೆ ಮುಂದಾಗಿದ್ರು. ಈ ನಡುವೆ ಸಚಿವ ವಿ ಸೋಮಣ್ಣ ಬುಧವಾರ ದೆಹಲಿಗೆ ತೆರಳಿ ಅಮಿತ್‌ ಶಾ ಅವರ ಮುಂದೆ ಪಕ್ಷದ ನಾಯಕರ ವಿರುದ್ದವಾಗಿ ಅಸಮಾಧಾನ ಹೊರಹಾಕಿದ್ದು, ಅಮಿತ್‌ ಶಾ ಸಮಸ್ಯೆಗಳನ್ನ ಬಗೆಹರಿಸುವ ಸೂಚನೆ ನೀಡಿ ಕಳುಹಿಸಿದ್ದರು.

 Minister V Somanna Praises Former CM BS Yediyurappa

ಈ ಕುರಿತು ಸಚಿವ ವಿ ಸೋಮಣ್ಣ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರಿಗೆ ಅವರೇ ಸರಿಸಾಟಿ. ಸದ್ಯ ಎಲ್ಲಾ ಗೊಂದಲವೂ ಸುಖಾಂತ್ಯವಾಗಿದೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಯಡಿಯೂರಪ್ಪ ಯಡಿಯೂರಪ್ಪಾನೇ, ಅವರ ಬಗ್ಗೆ ಮಾತಾಡಿದರೆ ನಮ್ಮ ಮುಖವನ್ನು ಮೇಲೆ ಮಾಡಿ ನಾವು ಉಗಿದಂತೆ. ಅದು ನಮಗೆ ಬಂದು ಬೀಳಲಿದೆ ಎಂದು ಮಾರ್ಮಿಕವಾಗಿ ಹೇಳಿದ ಅವರು, ಯಡಿಯೂರಪ್ಪ ಅವರ ರೀತಿಯಲ್ಲಿ ಹೋರಾಟ ಮಾಡಲು ಯಾರಿಗೂ ಆಗುವುದಿಲ್ಲ. ವಿಜಯೇಂದ್ರಗೆ ಯಡಿಯೂರಪ್ಪ ಅಪ್ಪ. ಅವರೊಬ್ಬರಿಗೆ ಮಾತ್ರ ಯಡಿಯೂರಪ್ಪ ನಾಯಕ ಅಲ್ಲ ಬದಲಾಗಿ ನಮಗೂ ಯಡಿಯೂರಪ್ಪ ನಾಯಕ ಎಂದರು.

 Minister V Somanna Praises Former CM BS Yediyurappa

ಯಡಿಯೂರಪ್ಪರ ಬಗ್ಗೆ ಒಳ್ಳೆಯ ಮಾತುಗಳನ್ನು ನಾವು ಹೇಳಿದ್ರೆ ಚೆನ್ನಾಗಿ ಇರತ್ತೆದೆ. ನಾನು ಯಡಿಯೂರಪ್ಪಾಜಿ ಜೊತೆ ಕಳೆದ ಸಮಯ ಕಡಿಮೆ. ಸ್ವಲ್ಪ ದಿನ ಅವರ ಗರಡಿಯಲ್ಲಿ ಇದ್ದೆ. ನಾನು ಜೆ ಎಚ್ ಪಟೇಲ್, ಎಚ್ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ ಗರಡಿಯಲ್ಲಿ ಪಳಗಿದವ. ಆದರೂ ಯಡಿಯೂರಪ್ಪಗೆ ಯಡಿಯೂರಪ್ಪ ಸಾಟಿ. ಅವರ ಬಗ್ಗೆ ನಮಗೆ ಗೌರವ ಇದೆ ಎಂದರು.

ವಿಜಯೇಂದ್ರ ರಾಜಕೀಯ ಕನಸು ನನಸಾಗಬೇಕು ಅಂದ್ರೆ ಅವರದ್ದೇ ಹಾದಿಯಲ್ಲಿ ಹೋಗಬೇಕು ಎಂದ ಅವರು, ಕೇಂದ್ರ ಸಚಿವ ಅಮಿತ್ ಶಾ ಜೊತೆಗೆ ಸಚಿವ ಸೋಮಣ್ಣ ಭೇಟಿ ವಿಚಾರವಾಗಿ ಮಾತನಾಡಿ, ನಮಗೆ ಏನು ಏನು ಆಗಬೇಕೋ ಅದೆಲ್ಲವೂ ಆಗಿದೆ. ಚುನಾವಣೆ ಇರುವ ಕಾರಣ ಗೊಂದಲ ನಿವಾರಣೆ ಮಾಡಿದ್ದಾರೆ. ಎಲ್ಲವೂ ಸುಖಾಂತ್ಯವಾಗಿದೆ ಎಂದು ಹೇಳಿದರು.

ವಿಜಯೇಂದ್ರ ಮಾತಾಡಿರೋದು ನನಗೆ ಸಂಬಂಧ ಇಲ್ಲದೆ ಇರುವುದು. ಯಡಿಯೂರಪ್ಪ ಈ ರಾಜ್ಯದ ನಾಯಕರು. ಅನೇಕ ಗಣ್ಯರ ಸಾಲಿನಲ್ಲಿ ಯಡಿಯೂರಪ್ಪ ಕೂಡ ಒಬ್ಬರು‌. ನಾನು ಕೂಡ ಅವರ ಗರಡಿಯಲ್ಲಿ ಬೆಳೆದಿದ್ದೇನೆ.ನಾನು ಏನು ಮಾಡಬೇಕೋ ಅದರ ಕಡೆ ಅಷ್ಟೇ ಗಮನ ಕೊಟ್ಟಿದ್ದೇನೆ. ವಿಜಯೇಂದ್ರ ಕೂಡ ಏನೋ ಮಾಡಬೇಕೋ ಅದರ ಕಡೆ ಗಮನ ಕೊಡಲಿ.‌ ನಾನು ಅವರಿಗೆ ಏನು ಹೇಳೋಕೆ ತಯಾರು ಇಲ್ಲ ಎಂದರು.

ಯಡಿಯೂರಪ್ಪ ಅವರು ನಮಗೂ ನಾಯಕರು, ಅವರು ನನಗೆ ತಂದೆ ಸಮಾನರು. ವಿಜಯೇಂದ್ರ ಯುವಕರು, ಅವರು ಬೆಳೆಯೋದಕ್ಕೆ ಅವಕಾಶ ಇದೆ. ಅದರ ಕಡೆ ಅವ್ರು ಗಮನ ಕೊಟ್ರೆ ಅವರೂ ಬೆಳೆಯಬಹುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+