ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಔಷಧ ಸಂಗ್ರಹ ಎಷ್ಟಿದೆ: ಸಚಿವರ ಹಠಾತ್‌ ತಪಾಸಣೆ

By Nayana
|
Google Oneindia Kannada News

ಬೆಂಗಳೂರು, ಜೂನ್ 23: ಆರೋಗ್ಯ ಸಚಿವರಾದ ಶಿವಾನಂದ ಪಾಟೀಲ್‌ ಅವರು ಹುಬ್ಬಳ್ಳಿಯ ಔಷಧ ನಿಯಂತ್ರಕರ ಕಚೇರಿಗೆ ಹಠಾತ್‌ ಭೇಟಿ ನೀಡಿದ್ದಾರೆ. ಸಮಯದಲ್ಲಿ ಡ್ರಗ್ಸ್‌ ಟೆಸ್ಟಿಂಗ್‌ ಲ್ಯಾಬೊರೇಟರಿ, ಎಚ್‌ಪಿಎಲ್‌ಸಿ ಲ್ಯಾಬೊರೇಟರಿ, ಆಂಟಿಬಯೋಟಿಕ್, ಸ್ಟೆರಿಲಿಟಿ ಟೆಸ್ಟಿಂಗ್ ಲ್ಯಾಬೊರೇಟರಿಗೆ ಭೇಟಿ ನೀಡಿದ್ದಾರೆ.

ಬೆಂಗಳೂರು, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಡ್ರಗ್ಸ್‌ ಟೆಸ್ಟಿಂಗ್ ಲ್ಯಾಬೊರೇಟರಿಗಳಿದ್ದು ಹುಬ್ಬಳ್ಳಿ ಮತ್ತು ಬಳ್ಳಾರಿಯ ಲ್ಯಾಬೊರೇಟರಿಗಳಲ್ಲಿ ಸ್ಟೆರಿಲಿಟಿ ಟೆಸ್ಟಿಂಗ್ ಫೆಸಿಲಿಟಿ ಲಭ್ಯವಿಲ್ಲವೆಂದು, ಈ ರೀತಿಯ ಟೆಸ್ಟಿಂಗ್‌ಗೆ ಎಲ್ಲಾ ಸ್ಯಾಂಪಲ್‌ಗಳನ್ನು ಬೆಂಗಳೂರಿಗೆ ತರಬೇಕೆಂದು ತಿಳಿಸಲಾಯಿತು. ಹುಬ್ಬಳ್ಳಿ ಮತ್ತು ಬಳ್ಳಾರಿಯ ಡ್ರಗ್‌ ಟೆಸ್ಟಿಂಗ್ ಲ್ಯಾಬೊರೇಟರಿಗಳನ್ನು ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸಲು ಅಗತ್ಯ ಆಯವ್ಯಯ ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಿದೆ.

ಬೆಂಗಳೂರಲ್ಲಿ 3 ಜನೌಷಧ ಕೇಂದ್ರ ಆರಂಭಕ್ಕೆ ನೆರವು: ಅನಂತಕುಮಾರ್ಬೆಂಗಳೂರಲ್ಲಿ 3 ಜನೌಷಧ ಕೇಂದ್ರ ಆರಂಭಕ್ಕೆ ನೆರವು: ಅನಂತಕುಮಾರ್

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದೊಂದಿಗೆ ಒಡಂಬಡಿಕೆಯ ಅನ್ವಯ ನಿರ್ಮಿಸಿರುವ ಕಟ್ಟಡವನ್ನು ಕೂಡಲೇ ಪೂರ್ಣವಾಗಿ ಸಜ್ಜುಗೊಳಿಸಲು ಕ್ರಮ ಕೈಗೊಳ್ಳಬೇಕು, ಕೇಂದ್ರ ಸರ್ಕಾರದ ಔಷಧ ಪರಿವೀಖ್ಷಣಾಲಯಕ್ಕೆ ಒಂದು ಕೊಠಡಿಯನ್ನು ಔಷಧ ನಿಯಂತ್ರಕರ ಕಚೇರಿಯಲ್ಲಿ ನೀಡಿದ್ದು, ಅದರ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚಿನ ಸ್ಥಳಾವಕಾಶ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಸಚಿವರು ತಿಳಿಸಿದ್ದಾರೆ.

Minister surprise visit to drug controller ware house

ರಾಜ್ಯ ಔಷಧ ನಿಯಂತ್ರಕರ ಕಚೇರಿಗೆ ಐಎಸ್‌ಓ 9001/2015 ಸರ್ಟಿಫಿಕೇಷನ್ ಮತ್ತು ಎನ್‌ಎಬಿಎಲ್‌ ಸರ್ಟಿಫಿಕೇಟ್‌ ಪಡೆಯಲು ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಿ ಈಎಸ್‌ಓ ಸರ್ಟಿಫಿಕೇಟ್‌ ಪಡೆಯಲು ಕ್ರಮ ಕೈಗೊಳ್ಳಲು ಸೂಚಿಸಿದೆ. ಬಯೋಲಾಜಿಕಲ್ ವೇಸ್ಟ್‌ ಡಿಸ್ಪೋಸಲ್‌ ಬಗ್ಗೆ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

English summary
Health minister Shivanand Patil has made surprise visit to drug controller ware house in Hubballi to check out the status of drugs supply of state government's hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X