ಮೋದಿ, ಅಮಿತ್ ಶಾ ಬೀದಿ ಬೀದಿ ಓಡಾಡಿದ್ರು ರಾಜ್ಯದಲ್ಲಿ 66 ಸೀಟ್ ದಾಟಲಿಲ್ಲ: ಸಚಿವ ಶಿವರಾಜ್ ತಂಗಡಗಿ
ಹುಬ್ಬಳ್ಳಿ, ಆಗಸ್ಟ್ 22: ರಾಜ್ಯ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ದೇಶದ ಪ್ರಧಾನ ಮಂತ್ರಿ ಮಂತ್ರಿ, ಗೃಹ ಮಂತ್ರಿ ಬೀದಿ ಬೀದಿ ಓಡಾಡಿದ್ರು 66 ಸೀಟ್ ದಾಟಲಿಲ್ಲ ಎಂದು ಕನ್ನಡ ಮತ್ತು ಸಾಂಸ್ಕೃತಿಕ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ 66 ಸೀಟ್ ಗೆಲ್ಲಲ್ಲಿ ಇದು ಭಾರತೀಯ ಜನತಾ ಪಕ್ಷದ ಕಥೆ ಎಂದ ಅವರು ನಾವು ಮೂರು ತಿಂಗಳಲ್ಲಿ ಗ್ಯಾರೆಂಟಿ 3 ಈಡೇರಿಸಿದ್ದೇವೆ 4ನೇಯ ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡ್ತಾ ಇದ್ದಿವಿ ಮುಂದಿನ ದಿನಗಲ್ಲಿ ಜನರು ಬಿಜೆಪಿಯನ್ನು ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದು ಕೇಂದ್ರ ಸರ್ಕಾರದದವರು ನೀರು ಬಿಡೋದು ಸುಪ್ರೀಂ ಕೋರ್ಟ್ ಆದೇಶ. ನಾವು ಮಾತು ಕೇಳಬೇಕು. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರ ಕುರಿತು ಆ 23 ಕ್ಕೆ ಸಭೆಯನ್ನು ಕರೆದಿದ್ದಾರೆ. ನೀರು ಬಿಡುವುದಕ್ಕೂ ಕನ್ನಡಕ್ಕೂ ವ್ಯತ್ಯಾಸ ಇದೆ. ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಮಾಡ್ತೇವೆ ಎಂದರು.
ಬಾಂಬೆ ಬಾಯ್ಸ್ ವಿಚಾರವಾಗಿ ಮಾತನಾಡಿ, ನಾವು ಅವರನ್ನ ಕರ್ಕೋತೀವಿ ಅಂದ್ರೆ ಬಿಜೆಪಿ ಜೆಡಿಎಸ್ ನಲ್ಲಿ ಯಾರು ಇರುವುದಿಲ್ಲ ಎಂದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ವಿಚಾರದಲ್ಲಿ
ದ್ವೇಷ ರಾಜಕಾರಣ ಮಾಡಿದ್ದು ಭಾರತೀಯ ಜನತಾ ಪಕ್ಷದವರು. 9 ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದೆ, ಅವರು ಬಡವರ ಪರವಾಗಿರುವ ಒಂದೇ ಒಂದು ಯೋಜನೆ ಹೇಳಿ. ಸಮಾಜದಲ್ಲಿ ವಿಷ ಬೀಜ ಬಿತ್ತಿ ಅಧಿಕಾರ ನಡೆಸುತ್ತಾ ಬಂದಿದ್ದಾರೆ.
ನಮ್ಮ ಪಕ್ಷಕ್ಕೆ ಬರ್ತೀವಿ ಎನ್ನುವವರನ್ನ ಪಕ್ಷ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಇನ್ನೊಬ್ಬರನ್ನು ಕರ್ಕೊಂಡು ಸರ್ಕಾರ ಮಾಡೋದು ನಮಗೆ ಅವಶ್ಯಕತೆ ಇಲ್ಲ. ಆದರೆ, ಅವರು ನಮ್ಮ ಅಭಿವೃದ್ಧಿ ನೋಡಿ ಬರ್ತಾ ಇದ್ದಾರೆ. ಅವರ ರಾಜಕೀಯ ಬೆಳವಣಿಗೆಗಾಗಿ ಬರ್ತಾ ಇದ್ದಾರೆ, ನಮ್ಮ ಗ್ಯಾರೆಂಟಿಗಳಿಂದ ಯಾವ ಉತ್ಸವವನ್ನು ನಿಲ್ಲಿಸಲ್ಲ ಎಲ್ಲಾ ನಡೆಸುತ್ತೇವೆ ಎಂದರು.
ನಮ್ಮ ಎಲ್ಲಾ ಯೋಜನೆಗಳಿಂದ ಬಿಜೆಪಿ ಅವರಿಗೆ ನಡುಕ ಶುರುವಾಗಿದೆ. ಹಣದ ಕೊರತೆ ಇದೆ ಅಂತ ಯಾರು ಅಂದ್ರು? ಇದು ಸರಿಯೇ? 13 ಬಾರಿ ಬಜೆಟ್ ನೀಡಿದವರು ನಮ್ಮ ಮುಖ್ಯಮಂತ್ರಿಗಳಿದ್ದಾರೆ ಇದು ನಮ್ಮ ಹೆಮ್ಮೆ ಎಂದು ತಿಳಿಸಿದರು. ಶಾಸಕ ಬಸವರಾಜ ರಾಯರೆಡ್ಡಿ ಪತ್ರದ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಸಿದ ಅವರು, ಬಿಜೆಪಿಯಲ್ಲಿ ಭ್ರಷ್ಟಾಚಾರ ಆಗಿತ್ತು ಅದನ್ನ ಮುಂದುವರೆಸದಂತೆ ಆಡಳಿತ ಮಾಡುವಂತೆ ಸಲಹೆ ನೀಡಿದ್ದಾರೆ.
ಇನ್ನೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ ಅವರು, ಕುಮಾರಸ್ವಾಮಿ ಅವರು ಹತಾಶಾರಾಗಿದ್ದಾರೆ. ಪೆನ್ ಡ್ರೈವ್ ಎಲ್ಲಾರ ಹತ್ತಿವೂ ಇದೆ. ಅದರಲ್ಲಿ ಏನು ಇಲ್ಲ, ಬುಟ್ಟಿಯಲ್ಲಿ ಹಾವು ಇದೆ ಅಂತಾರೆ ಆದರೆ, ಅದರಲ್ಲಿ ಹಾವೇ ಇರಲ್ಲ ಎನ್ನುವಂತಾಗಿದೆ ಎಂದು ಕಿಡಿ ಕಾರಿದರು.
ಭಾರತೀಯ ಜನತಾ ಪಕ್ಷ ಹಾಗೂ ಜೆಡಿಎಸ್ ಅವರಿಗೆ ಒಂದು ಮಾತು ಹೇಳ್ತಿನಿ ಒಂದೆರಡು ವರ್ಷ ಆಡಳಿತ ಮಾಡೋಕೆ ಬಿಟ್ಟು ನೋಡಿ. ನಮ್ಮ ಆಡಳಿತನಾದ್ರೂ ನೋಡ್ರಿ, ವರ್ಗಾವಣೆ ಯಾವಾಗ ಆಗಿಲ್ಲ. ಕುಮಾರಸ್ವಾಮಿ ಅವರ ಕಾಲದಲ್ಲಿ ವರ್ಗಾವಣೆ ಆಗಿಲ್ವಾ? ಹರಾಜು ಪ್ರಕ್ರಿಯೆ ಆಗಿದೆ ಅಂದ್ರೆ ದಾಖಲೆ ಕೊಡಿ. ಅವರು ಹೇಳೋದು ಹಿಟ್ ಅಂಡ್ ರನ್ ಅಷ್ಟೇ ಎಲ್ಲಾ ಸರ್ಕಾರದಲ್ಲೂ ವರ್ಗಾವಣೆ ಆಗುತ್ತೆ. ಸಮಾಧಾನದಿಂದ ಇರ್ರಿ ಆಮೇಲೆ ನಮ್ಮ ಆಡಳಿತ ನೋಡಿ ಎಂದರು.












Click it and Unblock the Notifications