ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗೆ ಎಸ್ ಡಿ‌ಪಿ ಐ ಚುನಾವಣೆಗೆ ಟಿಕೆಟ್; ಆರ್ ಅಶೋಕ್ ಆಕ್ರೋಶ

ಎಸ್ ಡಿ ಪಿ ಐ ಕೂಡ ಬ್ಯಾನ್ ಆಗಬೇಕು. ಇದೊಂದು ದೇಶ ವಿರೋಧಿ ಚಟುವಟಿಕೆಯ ಅಂಗ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರು,ಫೆಬ್ರವರಿ13: ಎಸ್ ಡಿಪಿ ಐ ನ ಪ್ರವೀಣ್‌ ನೆಟ್ಟಾರ್ ಹತ್ಯೆಯಲ್ಲಿ ಭಾಗಿಯಾದವನು ಚುನಾವಣೆಗೆ ಸ್ಪರ್ಧಿಸ್ತಿದ್ದಾನೆ. ದೇಶದಲ್ಲಿ‌ ಈಗಾಗಲೇ ಪಿಎಫ್‌ಐ ಬ್ಯಾನ್ ಆಗಿದೆ, ಎಸ್ ಡಿ‌ಪಿ ಐ ಕೂಡ ಬ್ಯಾನ್ ಮಾಡಬೇಕು ಎಂದು ಕಂದಾಯ ಸಚಿವ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗೆ ಎಸ್ ಡಿ‌ಪಿ ಐ ಟಿಕೆಟ್ ನೀಡಿದೆ. ಅವರು ಟೆರರಿಸ್ಟ್ ಗಳನ್ನ ಕರೆದುಕೊಂಡು ಬಂದು ಟಿಕೆಟ್ ಕೊಡುತ್ತಾರೆ. ಆಗ ಅವರಿಗೂ ಭದ್ರತೆ ಕೊಡಬೇಕಾಗುತ್ತೆ. ನಂತರ ಅವರನ್ನ ಬಿಡುಗಡೆ ಮಾಡಿ ಅಂತಾ ಕೋರ್ಟ್ ಗೆ ಹೋಗುತ್ತಾರೆ.

ಈ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುತ್ತೇನೆ. ಎಸ್ ಡಿ ಪಿ ಐ ಕೂಡ ಬ್ಯಾನ್ ಆಗಬೇಕು. ಇದೊಂದು ದೇಶ ವಿರೋಧಿ ಚಟುವಟಿಕೆಯ ಅಂಗ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.

Minister R Ashok Outraged On About SDPI Ticket To Shafi Bellare

ಬಿಜೆಪಿಯ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಶಫಿ ಬೆಳ್ಳಾರೆ ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಂಭಾವ್ಯ ಅಭ್ಯರ್ಥಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಹೇಳಿದೆ. ಇನ್ನೂ ಎಸ್ ಡಿ ಪಿ ಐ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನ ಫೆಬ್ರವರಿ ಕೊನೆಯ ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಇನ್ನೂ ಕಳೆದ ವರ್ಷ ಪ್ರವೀಣ್ ನೆಟ್ಟಾರು ಅವರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಪೊಲೀಸರು ಹಲವರನ್ನ ಬಂಧಿಸಿದ್ದರು. ನಂತರ ಈ ಒಂದು ಪ್ರಕರಣವನ್ನು ಎನ್ ಐ ಎ ಗೆ ಹಸ್ತಾಂತರಿಸಲಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) 14 ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ 14 ಜನರ ಪೈಕಿ ಶಫಿ ಬೆಳ್ಳಾರೆ ಕೂಡ ಒಬ್ಬರಾಗಿದ್ದು, ಚುನಾವಣೆಗೆ ಪುತ್ತೂರಿನಿಂದ ಶಫಿ ಬೆಳ್ಳಾರೆಯನ್ನ ಅಭ್ಯರ್ಥಿಯನ್ನಾಗಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+