
ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ ; ಸಿದ್ದುಗೆ ಪ್ರಭು ಚವ್ಹಾನ್ ಸವಾಲು
ಬೆಂಗಳೂರು: ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ, ನಿಮ್ಮನ್ನು ಒಳಗಡೆ ಹಾಕಿಸ್ತೀನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸವಾಲು ಹಾಕಿದರು.
ವಿಕಾಸಸೌಧದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದರೆ ಗೋ ಹತ್ಯೆ ನಿಷೇಧ ಕಾಯ್ದೆ ತೆಗೆದು ಹಾಕುವ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, ನೀನು ಯಾರಪ್ಪಾ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಪಡಿಸುತ್ತೇನೆ ಅನ್ನೋಕೆ ? ನನ್ನ ಮುಂದೆ ಹಂದಿ ತಿಂತೀನಿ, ಹಸು ಮಾಂಸ ತಿನ್ನುತ್ತೇನೆ ಅಂತೀರಲ್ಲಾ, ತಾಕತ್ ಇದ್ರೆ ನನ್ನ ಎದುರುಗಡೆ ಗೋಮಾಂಸ ತಿನ್ನಿ, ನಿಮ್ಮನ್ನು ಒಳಗಡೆ ಹಾಕಿಸ್ತೀನಿ ಎಂದರು.
ಕಾಂಗ್ರೆಸ್ ನಾಯಕರು ನನ್ನ ಇಲಾಖೆ ಬಗ್ಗೆ ಸುಳ್ಳು ಆರೋಪ
ಕಾಂಗ್ರೆಸ್ ನಾಯಕರು ನನ್ನ ಇಲಾಖೆ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ, ಕಾಂಗ್ರೆಸ್ ನಾಯಕರ ಆರೋಪಕ್ಕೆ ನಾನು ಖಂಡಿಸುತ್ತೇನೆ. ಪಶುಸಂಗೋಪನೆ ಇಲಾಖೆ ಬಗ್ಗೆ ಇಲ್ಲಸಲ್ಲದ ಆರೋಪ ಕಾಂಗ್ರೆಸ್ ನಾಯಕರು ಮಾಡ್ತಿದ್ದಾರೆ. ಈ ಗೋ ಹತ್ಯೆ ನಿಷೇಧ ಕಾಯ್ದೆ 1964 ರಲ್ಲಿ ಮಾಡಲಾಗಿದೆ. ಎಸ್. ನಿಜಲಿಂಗಪ್ಪ ನವರು ಇದ್ದಾಗ ಗೋ ಹತ್ಯೆ ಕಾನೂನು ಇತ್ತು. 1964 ರಲ್ಲಿ ಯಾರ ಸರ್ಕಾರ ಇತ್ತು? ಎಂದು ಪ್ರಶ್ನಿಸಿದರು.
ಹಿಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು, ಹಿಂದೆ ಈ ಕಾಯ್ದೆ ಮಾಡಿದ್ರು. ಗೋ ಹತ್ಯೆ ಮಾಡಿದವರಿಗೆ 1964 ರಲ್ಲಿ 1000 ದಂಡ ಆರು ತಿಂಗಳು ಜೈಲು ಶಿಕ್ಷೆ ಇತ್ತು. ಈಗ ಈ ಕಾಯ್ದೆಗೆ ನಾವು ಜೀವ ತುಂಬಿ. ಕಾಯ್ದೆ ಬಿಗಿಯಾಗಿ ಮಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತಷ್ಟು ಬಿಗಿ ಮಾಡಿದ್ದೇವೆ. ಈಗ ಸದ್ಯ ಗೋ ಹತ್ಯೆ ಮಾಡಿದ್ರೆ 3-7 ವರ್ಷ ಜೈಲು ಶಿಕ್ಷೆ 50-1 ಲಕ್ಷ ದಂಡ ಹಾಕ್ತಿದೇವೆ. ಮೂರುವರೆ ವರ್ಷದಿಂದ ಸೇವಕ,ಗೋರಕ್ಷಕನಾಗಿ ಕೆಲಸ ಮಾಡಿದ್ದೆನೆ. ಒಳ್ಳೆಯ ಕೆಲಸ ಮಾಡಲು ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳು ಎಂದರು.
ದೇಶದಲ್ಲೇ ಮೊದಲಬಾರಿಗೆ ಪಶು ಅಂಬುಲೆನ್ಸ್ ಗೆ ಚಾಲನೆ ಮಾಡಿದ್ದೆವೆ
ಪಶುಸಂಗೋಪನೆ ಇಲಾಖೆಯಲ್ಲಿ ನಾನು ಒಬ್ಬ ಸೇವಕನಾಗಿ ಕೆಲಸ ಮಾಡ್ತಿದ್ದೇನೆ. ಪಶುಸಂಗೋಪನೆ ಇಲಾಖೆಯಲ್ಲಿ ಪ್ರಪ್ರಥಮಬಾರಿಗೆ ಅಂಬ್ಯುಲೆನ್ಸ್ ಸೇವೆ ಪ್ರಾರಂಭ ಮಾಡಿದ್ದೇನೆ.