ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಸೈಕಲ್ ಸವಾರಿ ಮಾಡಿದ ಸಚಿವರು

ಮೈಸೂರು ಡಿಸೆಂಬರ್ 8: ಸಮಾಜದಲ್ಲಿ ಕ್ರೀಡೆ ಮತ್ತು ಫಿಟ್‌ನೆಸ್ ಅನ್ನು ಉತ್ತೇಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡೈನಾಮಿಕ್ ಮತ್ತು ಸ್ಪೂರ್ತಿದಾಯಕ ನಾಯಕ ಕೃಷ್ಣ ಬೈರೇಗೌಡ ಅವರು, ಸ್ವತಃ ಈಜುವ ಮೂಲಕ ಕೆಂಪಾಪುರದಲ್ಲಿ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟಿಸಿದ ಅವರೀಗ ಸೈಕ್ಲಿಂಗ್ ಮಾಡುವ ಮೂಲಕ ಮೈಸೂರಿನಲ್ಲಿ ಟೂರ್ ಆಫ್ ನೀಲಗಿರಿ 2024 ಮ್ಯಾರಥಾನ್‌ಗೆ ಚಾಲನೆ ನೀಡಿದ್ದಾರೆ.

ರಾಜ್ಯದ ರಾಜಕಾರಣಿಗಳಲ್ಲಿ ಫಿಟ್‌ ಆಂಡ್ ಸ್ಟ್ರಾಂಗ್ ಎಂದು ಕರೆಸಿಕೊಂಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಇಂದು ಸೈಕಲ್ ಸವಾರಿ ಮಾಡುವ ಮೂಲಕ ವಾರಾಂತ್ಯವನ್ನು ಆನಂದಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಷ್ಠಿತ ಬೀದಿಗಳಲ್ಲಿ ಕೃಷ್ಣಬೈರೇಗೌಡರು ಇಂದು ಸೈಕಲ್ ಸವಾರಿ ಮಾಡಿದ್ದು ಕಂಡು ಬಂದಿದೆ. ತಲೆಗೆ ಹೆಲ್ಮೆಟ್ ಹಾಕಿ, ಸೈಕಲ್ ಸೂಟ್‌ನಲ್ಲಿ ಸೈಕಲಿಂಗ್ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Minister krishna byre gowda cycling in mysuru today early morning

ಇಂದು ಭಾನುವಾರವಾಗಿದ್ದರಿಂದ ಸಚಿವ ಕೃಷ್ಣ ಬೈರೇಗೌಡ ಅವರು ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಮೈಸೂರಿನಲ್ಲಿ ಇಂದು ಬೆಳಗಿನ ವಾರಾವರಣ ಹಿತವಾಗಿದ್ದರಿಂದ ಸೈಕಲ್ ಸವಾರಿ ಮಾಡುವ ಮೂಲಕ ಎಲ್ಲಾ ಒತ್ತಡದಿಂದ ಕೊಂಚ ರಿಲೀಫ್ ಆಗಿದ್ದಾರೆ.

ಆರೋಗ್ಯವಂತ ಯುವಸಮಾಜವನ್ನು ನಿರ್ಮಿಸಲು ಕ್ರೀಡೆ ತುಂಬಾ ಮುಖ್ಯ. ಆದರೆ ಇಂದಿನ ಮಕ್ಕಳು ಎಲ್ಲಾ ಕ್ರೀಡೆಗಳನ್ನು ಮೊಬೈಲ್‌ ಫೋನ್‌ನಲ್ಲೇ ಆಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ದೈಹಿಕ ಆರೋಗ್ಯದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಗೀಳಿನಿಂದ ಯುವಪೀಳಿಗೆಯನ್ನು ಹೊರತಂದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.

ಅಪಾರ್ಟ್‌ಮೆಂಟ್ ನಿವಾಸಿಗಳು ಬಹುತೇಕ ಐಟಿ-ಬಿಟಿ ಉದ್ಯಮದ ಭಾಗವಾಗಿದ್ದಾರೆ. ಈ ಪೈಕಿ ಹಲವರು ಹೊರ ಪ್ರಪಂಚದ ವಿದ್ಯಮಾನಗಳ ಅರಿವೇ ಇಲ್ಲದೆ ತಮ್ಮ ಕೆಲಸಗಳಲ್ಲಿ ತಲ್ಲೀನರಾಗಿರುತ್ತಾರೆ. ಸಾಮಾಜಿಕ ಮತ್ತು ಸಾಮೂಹಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ. ಅಂತಹವರನ್ನು ಅಪಾರ್ಟ್‌ಮೆಂಟ್‌ಗಳಿಂದ ಹೊರತಂದು ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವಂತೆ ಮಾಡಬೇಕಿದೆ. ಹೀಗಾಗಿ ಕ್ರಿಕೆಟ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಈಜು, ಫುಟ್‌ಬಾಲ್, ಬ್ಯಾಸ್ಕೆಟ್ ಬಾಲ್, ಕೇರಮ್ ಇಂತಹ ಆಟಗಳಲ್ಲಿ ಯುವ ಪೀಳಿಗೆ ತೊಡಗಿಸಿಕೊಳ್ಳುವುದರ ಅರಿವನ್ನು ಸಚಿವರು ಆಗಾಗ ಮೂಡಿಸುತ್ತಲೇ ಇರುತ್ತಾರೆ.

minister krishna byre gowda cycling in mysore today early morning

ಬ್ಯಾಡ್ಮಿಂಟನ್ ಆಡಿದ ಕೃಷ್ಣ ಬೈರೇಗೌಡ

ಈ ಹಿಂದೆ ಕೃಷ್ಣ ಬೈರೇಗೌಡ ಅವರು ಬ್ಯಾಡ್ಮಿಂಟನ್ ಕೂಡ ಆಡಿದ್ದರು. ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಶೆಟಲ್ ಕಾಕ್ ಆಡುವ ಮೂಲಕ ಅವರು ಎಲ್ಲರನ್ನೂ ಬೆರಗುಗೊಳಿಸಿದ್ದರು. ಇದಲ್ಲದೆ ಹಿಂದೊಮ್ಮೆ ಸುಮಾರು ಬಾರಿ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಕೂಡ ಆಡಿದ್ದಾರೆ.

ರಸ್ತೆ ಬದಿ ತಿಂಡಿ ಸವಿದಿದ್ದ ಸಚಿವರು

ಕೃಷ್ಣ ಬೈರೇಗೌಡ ಅವರು ಸಚಿವರಾದರೂ ಸರಳ ಜೀವನ ನಡೆಸಲು ಬಯಸುತ್ತಾರೆ. ಅವರು ಜನಸಾಮಾನ್ಯರು ಹೋಗುವ ಹೋಟೆಲ್‌ಗಳಿಗೆ ಹೋಗಿ ತಿಂಡಿ ತಿನ್ನಲು, ಊಟ ಮಾಡಲು ಹಿಂಜರಿಯುವುದಿಲ್ಲ. ಕಳೆದ ಬಾರಿ ಅವರು ರಸ್ತೆ ಬದಿಯ ಪುಟ್ಟ ಅಂಗಡಿಯಲ್ಲಿ ಇಡ್ಲಿ ತಿನ್ನುತ್ತಿರುವ ಫೋಟೋ ಭಾರೀ ವೈರಲ್ ಆಗಿತ್ತು.

ಹೀಗೆ ಕೃಷ್ಣ ಬೈರೇಗೌಡ ಅವರು ರಾಜ್ಯದಲ್ಲಿ ಸಚಿವರಾದರೂ ಸರಳವಾದ ಜೀವನ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಕೂಡ ತಮಗಾಗಿ ತಾವು ಕೊಮಚ ಸಮಯವನ್ನು ನೀಡುತ್ತಾರೆ. ತಮ್ಮ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ಬೇಕಾದ ವ್ಯಾಯಾಮವನ್ನು ಮಾಡುತ್ತಾರೆ. ಮಿತ ಆಹಾರ, ಸರಳವಾದ ಜೀವನ ಶೈಲಿ ಅವರದ್ದಾಗಿದೆ.

ಅಲ್ಲದೆ ಅವರ ಕಾರ್ಯವೈಖರಿಗಳೂ ಕೂಡ ಜನಸಾಮಾನ್ಯರ ನಡುವೆ ನಡೆಯುತ್ತವೆ. ಗ್ರಾಮಗಳಿಗೆ ತೆರಳಿ ಸಾರ್ವಜನಿಕರೊಂದಿಗೆ ಇದ್ದು ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ. ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಅಧಿಕಾರಿಗಳಿಗೆ ಪಾಠ ಕಳಿಸಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಸಾಕಷ್ಟು ಉತ್ತಮ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+