ಬ್ಲೂ ಜೀನ್ಸ್ ಧರಿಸಿ ಆ ಹುಡುಗಿ ಬಂದಿದ್ಳು: ಹನಿಟ್ರ್ಯಾಪ್‌ ಹಿಂದಿನ ಕಹಾನಿ ಬಿಚ್ಚಿಟ್ಟ ಕೆಎನ್‌ ರಾಜಣ್ಣ

ತುಮಕೂರು, ಮಾರ್ಚ್‌ 25: ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಚರ್ಚೆಯಾಗುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಹನಿಟ್ರ್ಯಾಪ್‌ ಪ್ರಕರಣದ ಹಿಂದ ಮಹಾನಾಯಕನ ಕೈ ವಾಡವಿದೆ ಎಂದು ರಮೇಶ್‌ ಜಾರಕಿಹೊಳಿ ಅವರು ಬಹಿರಂಗವಾಗಿಯೇ ಆರೋಪ ಮಾಡಿದ್ದರು. ಇದೀಗ ವಿಧಾನಸಭೆಯಲ್ಲಿ ರಾಜಣ್ಣ ಅವರ ಹನಿಟ್ರ್ಯಾಪ್‌ ಪ್ರಕರಣ ಭಾರೀ ಸದ್ದು ಮಾಡಿದ್ದು, ಇದೀಗ ಹನಿಟ್ರ್ಯಾಪ್‌ ಹಿಂದಿನ ಕಹಾನಿಯನ್ನ ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ಬಿಚ್ಚಿಟ್ಟಿದ್ದಾರೆ.

ಈ ಕುರಿತು ಮಂಗಳವಾರ ತುಮಕೂರಿನಲ್ಲಿ ಮಾಧ್ಯಮಗಳ ಜೊತೆಗೆ ಕೆ ಎನ್‌ ರಾಜಣ್ಣ ಅವರು ಮಾತನಾಡಿ, ಎರಡು ಬಾರಿ ಒಬ್ಬ ಹುಡುಗ ಬಂದಿದ್ದ. ಬ್ಲೂ ಜೀನ್ಸ್ ಹಾಕಿಕೊಂಡಿದ್ದ ಒಬ್ಬಳು ಹುಡುಗಿ ಎರಡು ಸಲ ಬಂದಿದ್ದಳು. ಮೊದಲ ಬಾರಿ ಬಂದಾಗ ಯಾರು ಎಂದು ಹೇಳಿರಲಿಲ್ಲ. ಸರ್, ನಿಮ್ಮತ್ರ ಬಹಳ ಪರ್ಸನಲ್ಲಾಗಿ ಗುಟ್ಟಾಗಿ ಮಾತನಾಡಬೇಕು ಎಂದಿದ್ದಳು. ಎರಡನೇ ಸಲ ಬಂದಾಗ ಹೈಕೋರ್ಟ್ ವಕೀಲೆ ಎಂದು ಹೇಳಿಕೊಂಡಿದ್ದಳು ಎಂದು ಸಚಿವ ರಾಜಣ್ಣ ಸ್ಫೋಟಕ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.

Minister KN Rajanna Reveals The Secret Behind The Honey Trap Plot

ಎರಡು ಬಾರಿಯೂ ಬಂದಿದ್ದು ಬೇರೆ ಬೇರೆ ಹುಡುಗಿಯರು. ಮೊದಲ ಬಾರಿ ತಾನು ಲಾಯರ್ ಎಂದು ಹೇಳಿರಲಿಲ್ಲ. ಎರಡನೇ ಬಾರಿ ಬಂದವಳು ತಾನು ಹೈಕೋರ್ಟ್ ಲಾಯರ್ ಎಂದು ಹೇಳಿಕೊಂಡು ಬಂದಿದ್ದಳು ಎಂದು ತಿಳಿಸಿದ್ದಾರೆ. ತಾನು ಲಾಯರ್ ನಿಮ್ಮ ಬಳಿ ಪರ್ಸನಲ್ ಆಗಿ ಮಾತನಾಡಬೇಕು ಎಂದು ಹೇಳಿ ಬಂದಿದ್ದಳು. ಹನಿಟ್ರ್ಯಾಪ್ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಗಬೇಕು ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಹುಡುಕಿಕೊಂಡು ದೂರು ನೀಡುತ್ತೇನೆ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದ್ದರು.

ದೂರು ಇವತ್ತು ದಾಖಲಿಸುತ್ತೇನೆ. ಗೃಹ ಸಚಿವರಿಗೆ ದೂರು ಕೊಡ್ತೀನಿ, ಇಷ್ಟು ದಿನ ಬರೆಯಲಾಗಿರಲಿಲ್ಲ. ನಿರಂತರ ಕಾರ್ಯಕ್ರಮವಿದ್ದ ಕಾರಣ ದೂರು ಕೊಡಲು ಆಗಲಿಲ್ಲ. ನಾನೇ ಇವತ್ತು ಕುಳಿತು ದೂರು ರೆಡಿ ಮಾಡಿದ್ದೇನೆ.
ಪರಮೇಶ್ವರ್ ಹುಡಕಿಕೊಂಡು ಹೋಗಿ ದೂರು ಕೊಡುತ್ತಿದ್ದೇನೆ. ಏನು ದಾಖಲೆಯಿಲ್ಲ, ದೂರು ಕೊಡ್ತಿದ್ದೀನಿ. ಮೂರು ಪೇಜ್ ದೂರು ಕೊಡ್ತಿದ್ದೀನಿ. ಬೆಂಗಳೂರು ಮನೆಯಲ್ಲಿ ಸಿಸಿಟಿವಿ ಇರಲಿಲ್ಲ.ಹಾಗಾಗಿ ಸಿಸಿಟಿವಿ ವೀಡಿಯೋ ಇಲ್ಲ ಎಂದರು.

ಯಾರು ಬಂದು ಹೋಗಿರ್ತಾರೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದೇನೆ. ಅಪರಿಚಿತರು ಅಂತ ದೂರಿನಲ್ಲಿ ದಾಖಲಿಸಿದ್ದೇನೆ. ಎರಡು ಸಲ ಒಬ್ಬನೇ ಹುಡುಗ ಇದ್ದ. ಆದರೆ ಬೇರೆ ಹುಡುಗಿಯರಿದ್ದರು. ಮೊದಲ ಸಲ ಹೈಕೋರ್ಟ್ ಲಾಯರ್ ಅಂತಾ ಬಂದರು. ಎರಡನೇ ಸಲ ಲಾಯರ್ ಅಂತ ಪರಿಚಯ ಮಾಡ್ಕೊಂಡ್ರು. ಪೋಟೋ ತೋರಿಸಿದ್ರೆ ಗುರುತು ಹಿಡಿಯುತ್ತೇನೆ ಎಂದು ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+