ಸೋಲಿಗರೊಂದಿಗೆ ಸಚಿವ ಆಂಜನೇಯ ಹೊಸವರ್ಷಾಚರಣೆ

ಬೆಂಗಳೂರು, ಡಿ. 26 : ಸೋಲಿಗರ ಹಾಡಿಯಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ 2015ರ ಹೊಸ ವರ್ಷವನ್ನು ಆಚರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಘೋಷಿಸಿದ್ದಾರೆ.

ಗುರುವಾರ ಡಿ.ದೇವರಾಜ ಅರಸು ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್.ಆಂಜನೇಯ ಅವರು, ಡಿಸೆಂಬರ್ 31 ರಂದು ಚಾಮಾರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಡಟ್ಟ ಕಾಡುಗಳ ಮಧ್ಯೆ ಇರುವ ಗೊಂಬೆಗಲ್ಲು ಎಂಬ ಅರಣ್ಯ ಪ್ರದೇಶದಲ್ಲಿ ಸೋಲಿಗರೊಂದಿಗೆ ವಾಸ್ತವ್ಯ ಹೂಡಿ ಅಲ್ಲಿನ ಜನರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು. [ಭಿಕ್ಷುಕರೊಡನೆ ಹೋಳಿಗೆ ಸವಿದ ಸಚಿವ ಆಂಜನೇಯ]

H.Anjaneya

ಗೊಂಬೆಗಲ್ಲು ಪ್ರದೇಶದಲ್ಲಿ ಸೋಲಿಗರು ಹೆಚ್ಚಾಗಿ ವಾಸಿಸುತ್ತಿದ್ದು. ಈ ಹಾಡಿಯಲ್ಲಿ ಸುಮಾರು 30 ಕಟುಂಬಗಳಿವೆ. 250 ಜನರು ಇಲ್ಲಿ ವಾಸಿಸುತ್ತಿದ್ದು, ಈ ಪ್ರದೇಶದಲ್ಲಿ ವಾಸ್ತವ್ಯ ಹೂಡಿ ಅವರ ಸಮಸ್ಯೆಗಳನ್ನು ಅರಿತು ಮೂಲಭೂತ ಸೌಕರ್ಯ ಹಾಗೂ ಫಲಾನುಭವಿಗಳನ್ನು ಗುರುತಿಸಿ ಸ್ಥಳದಲ್ಲಿಯೇ ಸವಲತ್ತುಗಳನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು. ['ದೈವ ಭಕ್ತರಾಗದಿದ್ದರೆ ಕೋತಿ ಎಂಬ ಹೆಸರಿರುತ್ತಿತ್ತು']

ಸೋಲಿಗರ ಹಾಡಿಗೆ ಸರಿಯಾದ ರಸ್ತೆ, ಕುಡಿಯುವ ನೀರು ಹಾಗೂ ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲ, ಶಿಕ್ಷಣದಿಂದಲೂ ಇಲ್ಲಿನ ಮಕ್ಕಳು ವಂಚಿತರಾಗುತ್ತಿದ್ದಾರೆ. ಇವರಿಗೆ ಉತ್ತಮ ಸೌಲಭ್ಯಗಳನ್ನು ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿ ಮಾಡಲು ವಾಸ್ತವ್ಯ ಹೂಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಸಮಾಜಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಹಾಗೂ ಚಾಮರಾಜನಗರದ ಜಿಲ್ಲಾಡಳಿತದ ಎಲ್ಲಾ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ವಾಸ್ತವ್ಯದಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 31 ರಂದು ವಾಸ್ತವ್ಯ ಹೂಡಿ ಜನವರಿ 1, 2015 ಹೊಸ ವರ್ಷದ ದಿನದಂದು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗುವುದು ಎಂದರು.

ಜನವರಿಯಿಂದ ಪ್ರತಿ ತಿಂಗಳು ಕೊನೆಯ ದಿನದಂದು ರಾಜ್ಯದ ವಿವಿಧ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಗಿರಿಜನ ಸಮುದಾಯದ ಹಾಡಿಗಳಲ್ಲಿ ಹಾಗೂ ಸಣ್ಣಪುಟ್ಟ ಸಮುದಾಯದವರೇ ವಾಸವಾಗಿರುವ ಗ್ರಾಮಗಳಲ್ಲಿ ವಾಸ್ತವ್ಯ ಹೂಡಲಾಗುವುದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+