ಬಿಜೆಪಿಯವರು ಕೋಳಿ ಕಾಲು‌ ಮುರಿದರೂ, ಅದರ ತನಿಖೆ CBIಗೆ ಕೊಡಿ ಅಂತಾರೆ: ದಿನೇಶ್‌ ಗುಂಡೂರಾವ್‌

ಬೆಂಗಳೂರು, ಜುಲೈ 14: BJPಯವರು ಜೈನಮುನಿ ಹಾಗೂ ವೇಣುಗೋಪಾಲ್ ಹತ್ಯೆಯನ್ನು 'ಹೆಣದ ರಾಜಕೀಯ' ಮಾಡಲು ಸಂಚು ಮಾಡಿದ್ದರು. ಈಗ ಕೋಳಿ ಕಾಲು‌ ಮುರಿದರೂ, ಅದರ ತನಿಖೆ CBIಗೆ ಕೊಡಿ ಎನ್ನುತ್ತಾರೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಬಿಜೆಪಿ ವಿರುದ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ಜೈನ ಮುನಿಗಳಾದ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹಾಗೂ ತಿ.ನರಸೀಪುರದ ವೇಣುಗೋಪಾಲ್ ಹತ್ಯೆ ಸಂಬಂಧ ಈಗಾಗಲೇ ನಮ್ಮ‌ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ‌. ಕೊಲೆಗೆ ಕಾರಣವಾದ ಅಂಶವನ್ನು ಭೇದಿಸಿದ್ದಾರೆ. ಹೀಗಿರುವಾಗ ಈ ಪ್ರಕರಣ CBIಗೆ ವಹಿಸುವಂತೆ ಬಿಜೆಪಿ ಯವರ ಒತ್ತಾಯವೇಕೆ? ಎಂದು ಪ್ರಶ್ನಸಿದ ಅವರು, ಬಿಜೆಪಿ ಯವರಿಗೆ ನಮ್ಮ ರಾಜ್ಯದ ಪೊಲೀಸರ ಸಾಮರ್ಥ್ಯದ ಮೇಲೆ ನಂಬಿಕೆಯಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Minister Dinesh Gundu Rao Outrage Against BJP

ಬಿಜೆಪಿ ಯವರು ಜೈನಮುನಿ ಹಾಗೂ ವೇಣುಗೋಪಾಲ್ ಹತ್ಯೆಯನ್ನು 'ಹೆಣದ ರಾಜಕೀಯ' ಮಾಡಲು ಸಂಚು ಮಾಡಿದ್ದರು. ಕೊಲೆ ಮಾಡಿದ ಆರೋಪಿಗಳ ಧರ್ಮ ಹುಡುಕಿ ಈ ಪ್ರಕರಣಗಳಿಗೆ ಕೋಮುಬಣ್ಣ ತುಂಬುವ ಹಂಚಿಕೆ ಹಾಕಿಕೊಂಡಿದ್ದರು. ಆದರೆ ಕೊಲೆ ಮಾಡಿದ ಆರೋಪಿಗಳು ಯಾರು ಎಂಬ ಸತ್ಯ ತಿಳಿದ ಮೇಲೆ ಬಿಜೆಪಿ ಯವರು ಗಲಿಬಿಲಿಗೊಂಡಿದ್ದಾರೆ. ಯಾಕೆ ಈ ಹೆಣದ ರಾಜಕೀಯ ಬಿಜೆಪಿಯವರೆ.? ಎಂದು ವಾಗ್ದಾಳಿ ನಡೆಸಿದ್ದಾರೆ.

ಜೈನಮುನಿ ಹಾಗೂ ವೇಣುಗೋಪಾಲ್ ಹತ್ಯೆಯ ಸತ್ಯಾಸತ್ಯತೆ ತಿಳಿಯಲು ರಾಜ್ಯ ಬಿಜೆಪಿ,ಕಟೀಲ್ ಹಾಗೂ C.T.ರವಿ ನೇತೃತ್ವದಲ್ಲಿ ತನಿಖಾ ತಂಡವನ್ನು ಕೂಡ ರಚನೆ ಮಾಡಿತ್ತು.‌ ಈ ಕಟೀಲು ‌ಮತ್ತು ರವಿ, ಷರ್ಲಾಕ್‌ ಹೋಮ್ಸ್ ಮತ್ತು ಆತನ ಸಹಚರ ವಾಟ್ಸನ್ ಅಪರಾವತಾರದಂತೆ ಸ್ಥಳಕ್ಕೆ ಹೋಗಿ ತನಿಖೆ ಮಾಡಿದ್ದರು. ಅಷ್ಟಕ್ಕೂ ಈ ಪ್ರಕರಣದಲ್ಲಿ ಅವರು ಕಂಡುಕೊಂಡ ಸತ್ಯವೇನು? ಎಂದು ಕೇಳಿದ್ದಾರೆ.

CBI ಎಂದರೆ Congress bureau of investigation ಎಂದು ಬಿಜೆಪಿಯವರು ಆರೋಪಿಸುತ್ತಿದ್ದರು‌. ಈಗ ಕೋಳಿ ಕಾಲು‌ ಮುರಿದರೂ, ಅದರ ತನಿಖೆ CBIಗೆ ಕೊಡಿ ಎನ್ನುತ್ತಾರೆ. ಈ ಹಿಂದೆ ಪರೇಶ್ ಮೇಸ್ತಾ ಹಾಗೂ D.K.ರವಿ ಪ್ರಕರಣ CBIಗೆ ವಹಿಸಿದ್ದೆವು. ಈ ಪ್ರಕರಣದ ಬಗ್ಗೆ CBI ಸಲ್ಲಿಸಿದ ಅಂತಿಮ ವರದಿಯ ಬಗ್ಗೆ ಇಲ್ಲಿಯವರೆಗೂ ಬಿಜೆಪಿ ಯವರು ಬಾಯಿ ಬಿಟ್ಟಿದಾರೆಯೇ? ಎಂದು ಪ್ರಶ್ನಿಸಿದ್ದಾರೆ.

Minister Dinesh Gundu Rao Outrage Against BJP

ಜೈನ ಮುನಿಗಳಾದ ಶ್ರೀ ಕಾಮಕುಮಾರ ನಂದಿ ಮಹಾರಾಜ ಹಾಗೂ ತಿ.ನರಸೀಪುರದ ವೇಣುಗೋಪಾಲ್ ಹತ್ಯೆ ಸಂಬಂಧ ನಮ್ಮ ಪೊಲೀಸರು ಸರಿಯಾದ ದಿಕ್ಕಿನಲ್ಲೇ ತನಿಖೆ ನಡೆಸುತ್ತಿದ್ದಾರೆ. ನಮ್ಮ ರಾಜ್ಯದ ಪೊಲೀಸರ ತನಿಖಾ ಸಾಮರ್ಥ್ಯದ ಮೇಲೆ ನಮಗೆ ನಂಬಿಕೆಯಿದೆ. ಬಿಜೆಪಿ ಯವರು ಒತ್ತಾಯಿಸಿದರು ಎಂಬ ಕಾರಣಕ್ಕೆ ಈ ಪ್ರಕರಣ CBIಗೆ ವಹಿಸಲು ಸಾಧ್ಯವಿಲ್ಲ ಎಂದು ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+