ಕೆಎಂಎಫ್‌ನಿಂದ ಗರ್ಭಿಣಿಯರಿಗೆ ಹಾಲು, ತುಪ್ಪದ ಭಾಗ್ಯ?
ಬೆಂಗಳೂರು, ನವೆಂಬರ್ 08 : 'ಕರ್ನಾಟಕ ಹಾಲು ಮಹಾಮಂಡಳದ ವತಿಯಿಂದ ಗರ್ಭಿಣಿಯರಿಗೆ ಉಚಿತವಾಗಿ ಹಾಲು ಮತ್ತು ತುಪ್ಪ ಒದಗಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ' ಎಂದು ಪಶುಸಂಗೋಪನಾ ಸಚಿವ ಎ.ಮಂಜು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಎ.ಮಂಜು ಅವರು, 'ಗರ್ಭಿಣಿಯರಿಗೆ ವಾರದಲ್ಲಿ 3 ದಿನ ಉಚಿತವಾಗಿ ಹಾಲು ಮತ್ತು ಪ್ರತಿ ತಿಂಗಳು 2 ಕೆಜಿ ತುಪ್ಪ ನೀಡುವ ಪ್ರಸ್ತಾವನೆ ಸರ್ಕಾರದ ಮಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದರು ಹೇಳಿದರು. [ಕುರಿ ಮಾಂಸ ಪ್ರಿಯರಿಗೆ ಸುದ್ದಿ: ಜಿಲ್ಲೆ ಜಿಲ್ಲೆಗಳಲ್ಲಿ ಮಟನ್ ಕೇಂದ್ರ!]

ಮೊಸರಿನ ದರ ಇಳಿಕೆ : ಗ್ರಾಹಕರ ಸಲಹೆಯಂತೆ ಕೆಎಂಎಫ್ 8 ರೂ.ಗಳ ಪ್ಯಾಕೆಟ್‌ನಲ್ಲಿಯೇ ಮೊಸರನ್ನು ಸರಬರಾಜು ಮಾಡಲು ಒಪ್ಪಿಗೆ ನೀಡಿದೆ. ಅಕ್ಟೋಬರ್ 21ರಿಂದ ಹೊಸ ವಿನ್ಯಾದ ಪ್ಯಾಕೆಟ್‌ನಲ್ಲಿ 200ರ ಬದಲು 250 ಎಂಎಲ್ ಮೊಸರನ್ನು ಕೆಎಂಎಫ್ ಒದಗಿಸುತ್ತಿತ್ತು. [ಕ್ಷೀರಭಾಗ್ಯ ಯೋಜನೆ ಐದು ದಿನಗಳಿಗೆ ವಿಸ್ತರಣೆ]
250 ಎಂಎಲ್ ಮೊಸರಿಗೆ 10 ರೂ. ದರ ಪಡೆಯಲಾಗುತ್ತಿತ್ತು. ಆದರೆ, ಗ್ರಾಹಕರು ಹಳೆ ಪ್ಯಾಕೆಟ್‌ಗಳಲ್ಲಿಯೇ ಮೊಸರನ್ನು ನೀಡುವಂತೆ ಕೆಎಂಎಫ್‌ಗೆ ಸಲಹೆ ನೀಡಿದ್ದರು. ಇದಕ್ಕೆ ಕೆಎಂಎಫ್ ಒಪ್ಪಿಗೆ ನೀಡಿದ್ದು, ಮೊಸರಿನ ದರ ಪುನಃ 8 ರೂ.ಗಳಾಗಲಿದೆ. [ನಂದಿನಿ ತುಪ್ಪದ ಘಮಲು ಕಳೆದುಕೊಂಡ ತಿರುಪತಿ ಲಡ್ಡು!]
ಹೊಸ ವಿನ್ಯಾಸದ ಪ್ಯಾಕೆಟ್‌ನಲ್ಲಿ ಬದಲಾವಣೆ ತರುವಂತೆ ಗ್ರಾಹಕರು ನೀಡಿದ ಸಲಹೆಯನ್ನು ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೆಎಂಎಫ್ ನಿರ್ದೇಶಕ (ಮಾರುಕಟ್ಟೆ) ರವಿ ಕುಮಾರ್ ಕಾಕಡೆ ತಿಳಿಸಿದ್ದಾರೆ.












Click it and Unblock the Notifications