Gruha Lakshmi Scheme: ಮಹಿಳೆಯರಿಗೆ ಮಾತ್ರವಲ್ಲ..ಗಂಡಸರಿಗೂ 2 ಸಾವಿರ ರೂಪಾಯಿ ಕೊಡಿ: ವಾಟಾಳ್ ನಾಗರಾಜ್ ಒತ್ತಾಯ
ಬೆಂಗಳೂರು, ಜುಲೈ 17: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2000 ಹಣ ನೀಡುವ ವಿಚಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗೊಂದಲಗಳಿಗೆ ಕಾರಣವಾಗಿದ್ದು, ಇದೀಗ ಮಹಿಳೆಯವರಿಗೆ ಮಾತ್ರ 2000 ಕೊಡುವುದಲ್ಲ, ಪುರುಷರಿಗೂ ಕೊಡಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.
ಈ ಕುರಿತು ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮನೆ ಯಜಮಾನಿಗೆ 2000 ರೂಪಾಯಿ ಸರ್ಕಾರ ನೀಡುವ ಮೂಲಕ ಯಜಮಾನ ಯಜಮಾನಿಗೆ ಜಗಳ ತಂದಿಡೋದು ಸರಿಯಲ್ಲ. ಪುರುಷರಿಗೂ ಗೃಹಲಕ್ಷ್ಮೀ ಕೊಡಬೇಕು ಅಂತ ಹೇಳಿದ್ದಾರೆ.

ಗೌರವಯುತವಾಗಿ ಕೇಳ್ತೀನಿ ಯಜಮಾನನಿಗೂ ಕೊಡಬೇಕು, ಅವರನ್ನೂ ಕಡೆಗಣಿಸಲು ಸಾಧ್ಯವಿಲ್ಲ. ಯಜಮಾನಿಗೆ 2 ಸಾವಿರ ಬಂದರೆ ಯಜಮಾನನ ಕಥೆ ಏನು ಎಂದು ಪ್ರಶ್ನಿಸಿದ ಅವರು, ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವಾಗ ಯಜಮಾನ, ಯಜಮಾನಿ ಇಬ್ಬರಿಗೂ ಎರಡೆರಡು ಸಾವಿರ ಕೊಡಬೇಕು. ಬಸ್ನಲ್ಲೂ ಉಚಿತ ಪ್ರಯಾಣ ಕೊಟ್ಟಿದ್ದೀರ, ಇದನ್ನ ನೋಡಿದರೆ ಪುರುಷರ ಮೇಲೆ ಏನೋ ದ್ವೇಷ ಇದ್ದಂತಿದೆ ಎಂದು ಹೇಳಿದ್ದಾರೆ.
ಶಾಸನ ಸಭೆಯಲ್ಲಿ ಅನೇಕರು ಪುರುಷರಿದ್ದರೂ ಈ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪದವೀಧರ ಯುವಕರಿಗೆ ಯುವ ನಿಧಿ ಕೊಡುತ್ತಿರಾ. ಆದರೆ ಹಳ್ಳಿಯಲ್ಲಿ ಎಮ್ಮೆ ಕಾಯೋ, ಕುರಿ ದನ ಕಾಯೋ ಹುಡುಗರ ಕಥೆ ಏನಾಗಬೇಕು. ಕುರಿ. ದನ ಎಮ್ಮೆ ಕಾಯೋ ಯುವಕರಿಗೆ ಕನಿಷ್ಟ ಒಂದು ಸಾವಿರ ಆದರೂ ಕೊಡಬೇಕು ಎಂದು ಆಗ್ರಹಿಸಿದರು.
ರೈತರ ಆತ್ಮಹತ್ಯೆ ಸಂಖ್ಯೆ ಕಡಿಮೆಯಾಗಿದೆ: ಎನ್.ಚೆಲುವರಾಯಸ್ವಾಮಿ
ಕಳೆದ ಬಾರಿಗಿಂತ ಈ ಬಾರಿ ರೈತರ ಆತ್ಮಹತ್ಯೆ ಸಂಖ್ಯೆ ಕಡಿಮೆಯಾಗಿದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ವಿಧಾನಸಭೆಯಲ್ಲಿ ಹೇಳಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 6 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 18 ಮಂದಿ ಹಾವೇರಿ ಜಿಲ್ಲೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸುಳ್ಳು, ಇದು ಅಧಿಕಾರಿಗಳು, ಪೊಲೀಸ್ ವರದಿಗಳಿಂದ ಬಂದಿರುವ ಮಾಹಿತಿಯಾಗಿದ್ದು, 2018 -19 ರಲ್ಲಿ 1085 ಮಂದಿ, 190-20 ರಲ್ಲಿ ,1091 ಮಂದಿ, 20-21 ರಲ್ಲಿ 855 ಮಂದಿ , 21-22 ರಲ್ಲಿ 915 ಮಂದಿ, 22-23 ರಲ್ಲಿ 755 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಈ ಬಾರಿ ಏಪ್ರಿಲ್ 1 ರಿಂದ ಇಲ್ಲಿಯವರೆಗೆ 96 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ, ಐದು ಗ್ಯಾರೆಂಟಿಗಳು ರೈತರ ಆತ್ಮಹತ್ಯೆಯನ್ನ ತಡೆಯಲಿವೆ. ಹಾವೇರಿ ಜಿಲ್ಲೆಯಲ್ಲಿ ಶೇ 80% ರಷ್ಟು ಬಿತ್ತನೆ ಆಗಿದೆ, ಹಾವೇರಿಯಲ್ಲಿ ಮಳೆಯೂ ಜಾಸ್ತಿ ಆಗಿದೆ. ರಸಗೊಬ್ಬರ ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ,ಅಲ್ಲಿ ಘರ್ಷಣೆ ಆಗಿಲ್ಲ
ಒಬ್ಬ ರೈತನ ಸಾವಿಗೂ ಬೆಲೆ ಇದೆ, ಎಲ್ಲರ ಜೀವಕ್ಕೂ ಬೆಲೆ ಇದೆ.
ರೈತರ ಆತ್ಮಹತ್ಯೆ ಪ್ರಕರಣಗಳಿಗೆ ರಾಜಕಾರಣ ಬೆರೆಸುವುದು ಒಳ್ಳೆಯದಲ್ಲ. ಪಕ್ಷಾತೀತವಾಗಿ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನ ಬೊಮ್ಮಾಯಿಯೂ ಮಾಡಬೇಕು, ಕುಮಾರಸ್ವಾಮಿಯೂ ಮಾಡಬೇಕು. ರೈತರ ಆತ್ಮಹತ್ಯೆ ಪ್ರಕರಣಗಳ ಅಂಕಿ ಅಂಶ ಬಿಡುಗಡೆ ಮೂಲಕ ಕುಮಾರಸ್ವಾಮಿಗೆ ಸಚಿವ ಚೆಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.












Click it and Unblock the Notifications