Sumalatha: ಏಪ್ರಿಲ್ 3ರಂದು ನಾನು ನನ್ನ ನಿರ್ಧಾರ ತಿಳಿಸುತ್ತೇನೆಂದ ಸಂಸದೆ ಸುಮಲತಾ..
ಬೆಂಗಳೂರು ಮಾರ್ಚ್ 31: ಏಪ್ರಿಲ್ 3ರಂದು ಸಭೆ ಮಾಡಿ ನನ್ನ ನಿರ್ಧಾರ ಮಂಡ್ಯದಲ್ಲೇ ತಿಳಿಸುತ್ತೇನೆ ಎಂದು ಸಂಸದೆ ಸುಮಲತಾ ಬೆಂಗಳೂರಿನ ಜೆಪಿ ನಗರದ ನಿವಾಸದ ಮುಂದೆ ಬೆಂಬಲಿಗರನ್ನುದ್ದೇಶಿಸಿ ಮಾತನಾಡುವ ವೇಳೆ ತಿಳಿಸಿದರು.
ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಂತೆ ಸಂಸದೆ ಸುಮಲತಾ ಅಂಬರೀಶ್ ಅವರ ನಡೆ ನಿಗೂಢವಾಗಿತ್ತು. ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಾರೆ, ಎಚ್‌ಡಿ ಕುಮಾರಸ್ವಾಮಿಗೆ ಬೆಂಬಲ ನೀಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಇಂತೆಲ್ಲಾ ಗೊಂದಲಗಳಿಗೆ ಸುಮಲತಾ ಅವರು ತೆರೆ ಎಳೆದಿದ್ದಾರೆ.

ಬೆಂಗಳೂರಿನ ಜೆಪಿ ನಗರದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರ ನಿವಾಸದಲ್ಲಿ ಇಂದು ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಭಾಗವಹಿಸಲು ನಾಲ್ಕು ಬಸ್‌ಗಳಲ್ಲಿ ಮಂಡ್ಯ, ಮಳವಳ್ಳಿ, ಮದ್ದೂರು ಸೇರಿದಂತೆ ವಿವಿಧ ಭಾಗಗಳಿಂದ ಬೆಂಬಲಿಗರು ಆಗಮಿಸಿದ್ದರು. ಸುಮಾರು 500ಕ್ಕೂ ಹೆಚ್ಚು ಸುಮಲತಾ ಬೆಂಬಲಿಗರು, ಅಂಬರೀಶ್ ಅಭಿಮಾನಿ ಬಳಗದವರು ಜಮಾಯಿಸಿದ್ದರು. ಅಂಬರೀಶ್ ಭಾವಚಿತ್ರ ಹಿಡಿದು ಜೈಕಾರವನ್ನು ಕೂಗಿದರು. ಮನೆಯಿಂದ ಹೊರಗೆ ಒಂದು ಸಾವಿರಕ್ಕೂ ಹೆಚ್ಚು ಜನ ಜಮಾಯಿಸಿದ್ದರು.
ಸಭೆ ಬಳಿಕ ತೆರೆದ ವಾಹನದಲ್ಲಿ ಜೆಪಿ ನಗರದ ಅವರ ನಿವಾಸದ ಮುಂದೆ ಸುಮಲತಾ ಅವರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ''ಅಂಬರೀಶ್ ಅವರ ಮೇಲಿನ ಅಭಿಮಾನದಿಂದ ಇಷ್ಟು ದೂರ ಬಂದಿದ್ದಕ್ಕೆ ನನ್ನ ಕೃತಜ್ಞತೆಗಳು. ಮಂಡ್ಯದ ಎಲ್ಲಾ ನನ್ನ ಮುಖಂಡರು ಅವತ್ತು ಬೆಂಬಲ ನೀಡಿದ್ದರು. ಇವತ್ತಿಗೂ ಅವರು ನನ್ನ ಜೊತೆಗೆ ನಿಂತಿದ್ದಾರೆ. ನಿಮ್ಮ ಹಾಗೂ ಅವರ ಬೆಂಬಲವೇ ನನಗೆ ಶಕ್ತಿ. ಏನೇ ಆದರೂ ಮಂಡ್ಯದ ಜನ ನಮ್ಮನ್ನು ಬಿಟ್ಟುಕೊಟ್ಟಿಲ್ಲ. ಅದಕ್ಕೆ ನಾನು ಋಣಿ ಆಗಿದ್ದೇನೆ'' ಎಂದರು.
''ನನ್ನ ತೀರ್ಮಾನ ನನಗೋಸ್ಕರ ಅಲ್ಲ. ನಾನು ಮೊದಲ ದಿನ ಯಾವ ಮಾತು ಹೇಳಿದ್ದಿನೋ ಅದೇ ಮಾತನ್ನ ನಾನು ಇವತ್ತು ಉಳಿಸಿಕೊಂಡು ಬಂದಿದ್ದೇನೆ. ಇದು ನಿಜವೋ ಇಲ್ಲವೋ ನೀವೇ ಹೇಳಿ? ಎಂದು ಜನಸಾಮಾಣ್ಯರನ್ನು ಕೇಳಿದರು. 'ನುಡಿದಂತೆ ನಾನು ನಡೆದುಕೊಂಡು ಬಂದಿದ್ದೇನೆ. ಮಂಡ್ಯದಲ್ಲಿ ಏನೇನು ಮಾಡಬೇಕು ಪ್ರಾಮಾಣಿಕತೆಯಿಂದ ಅದನ್ನು ಮಾಡಿದ್ದೇನೆ. ಪಾರ್ಲಿಮೆಂಟ್‌ನಲ್ಲಿ ಮಂಡ್ಯದ ಘನತೆಯನ್ನು ಎತ್ತಿಹಿಡಿದ್ದೇನೆ' ಎಂದು ಹೇಳಿದರು.
''ಮಂಡ್ಯ ಬಿಟ್ಟರೆ ನನಗೆ ಬೇರೆ ಕ್ಷೇತ್ರದಿಂದ ರಾಜಕಾರಣ ಬೇಡ. ಮಂಡ್ಯದಲ್ಲಿ ರಾಜಕಾರಣ ಮಾಡುವುದು ಒಂದೇ ಇಲ್ಲ. ಅಲ್ಲಿ ಪ್ರೀತಿ ಇದೆ. ವಿಶ್ವಾಸ ಇದೆ. ನಂಬಿಕೆ ಇದೆ. ಹೀಗಾಗಿ ನಾನು ಬೇರೆ ಕ್ಷೇತ್ರಕ್ಕೆ ಹೋಗಿಲ್ಲ' ಎಂದರು. 'ಆದರೆ ಈಗ ಮಂಡ್ಯದಲ್ಲಿ ನಾವು ಈ ಹಿಂದೆ ಶ್ರಮಿಸಿದ್ದಕ್ಕಿಂತ ಹೆಚ್ಚಿನ ಸವಾಲು ಇದೆ. ಅಧಿಕಾರ, ರಾಜಕೀಯ ಬರುತ್ತೆ ಹೋಗುತ್ತೆ. ಆದರೆ ಮಂಡ್ಯದ ಜನದೊಂದಿಗೆ ಅವರೊಂದಿಗೇ ನಾನು ಇರುತ್ತೇನೆ' ಎಂದರು.

'ನಾನು ಇವತ್ತು ನಿಮ್ಮನ್ನು ನೋಯಿಸುವಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ ನಾನು ಕೆಲ ದಿನಗಳ ಸಮಯ ತೆಗೆದುಕೊಂಡು, ಮಂಡ್ಯದಲ್ಲಿ ಇದೇ ಏಪ್ರಿಲ್ 3 ತಾರೀಖು ಬಂದು ಸಭೆ ಮಾಡಿ ತೀರ್ಮಾನ ಅಲ್ಲೇ ಹೇಳುತ್ತೇನೆ. ನಿಮ್ಮನ್ನು ಬಿಟ್ಟು ನಾನು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ನನಗೆ ಸಮಯಾವಕಾಶ ಕೊಡಿ' ಎಂದು ಸುಮಲತಾ ಹೇಳಿದರು.
ಈ ವೇಳೆ ಮಾತನಾಡಿದ ಅಭಿಷೇಕ್ ಅಂಬರೀಶ್, 'ನಾವಂತೂ ಮಂಡ್ಯ ಬಿಟ್ಟು ಹೋಗುವುದಿಲ್ಲ. ಕರ್ನಾಟಕದಲ್ಲಿ ಎಲ್ಲೇ ಹೋದರೂ ಮಂಡ್ಯದ ಗಂಡು ಅಂತ ನನ್ನನ್ನು ಗುರುತು ಹಿಡಿಯುತ್ತಾರೆ. ಅಷ್ಟು ಸಾಕು ನನಗೆ. ನಿಮ್ಮ ಅಭಿಪ್ರಾಯ ತೆಗೆದುಕೊಂಡೇ ಅಮ್ಮ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅದಕ್ಕೆ ನಾವೆಲ್ಲಾ ಬದ್ಧ' ಎಂದರು.
ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದಾಗ ಸಹಜವಾಗಿ ಬೆಂಬಲಿಗರಿಗೆ ಬೇಸರವಾಗಿದೆ. ಜೊತೆಗೆ ಸುಮಲತಾ ಅವರನ್ನು ನಡೆಸಿಕೊಂಡ ರೀತಿ ಕೂಡ ಸರಿಯಾಗಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಸುಮಲತಾ ಅವರ ಮುಂದಿನ ನಡೆ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಸುಮಲತಾ ಅವರ ನಿರ್ಧಾರವನ್ನು ಕೇಳಲೆಂದು ಇವತ್ತು ಮಂಡ್ಯ ಜನ ಸುಮಲತಾ ಅವರ ಮನೆ ಬಾಗಿಲಿಗೆ ಬಂದಿದ್ದರು.
ಈ ವೇಳೆ ಕೆಲವರು ಸುಮಲತಾ ಅವರಿಗೆ ರಾಜ್ಯಸಭೆಯ ಸ್ಥಾನಮಾನ ಕೊಡಬೇಕು ಎಂದು ಒತ್ತಾಯಿಸಿದರೆ, ಇನ್ನೂ ಕೆಲವರು ಸುಮಲತಾ ಬಿಜೆಪಿ ಸೇರ್ಪಡೆ ಆಗಬೇಕು ಎಂದರು. ಇನ್ನೂ ಕೆಲ ಜನ ಎಚ್‌ಡಿ ಕುಮಾರಸ್ವಾಮಿಗೆ ಬೆಂಬಲ ಕೊಡಬೇಡಿ, ನೀವು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬೇಕು ಎನ್ನುವ ಮೂಲಕ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇವೆಲ್ಲವನ್ನು ಆಲಿಸಿದ ಸುಮಲತಾ ತಮ್ಮ ನಿರ್ಧಾರವನ್ನು ಬಹಿರಂಗಗೊಳಿಸಿದ್ದಾರೆ.
ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಬಿಜೆಪಿ ಟಿಕೆಟ್ ವಂಚಿತ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಮನವೊಲಿಕೆ ಕಾರ್ಯ ಕಳೆದ ದಿನ ನಡೆದಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶುಕ್ರವಾರ ಜೆಪಿ ನಗರದಲ್ಲಿರುವ ಸುಮಲತಾ ಅವರ ನಿವಾಸಕ್ಕೆ ತೆರಳಿ ಸುಮಾರು ಒಂದು ಗಂಟೆ ಮಾತನಾಡಿದ್ದರು. ಈ ಮೂಲಕ ಅವರ ಮುನಿಸು ಶಮನಗೊಳಿಸಲು ಪ್ರಯತ್ನ ಮಾಡಿದ್ದರು. ಆದರೆ ಸುಮಲತಾ ಅವರು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿಇ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ವಿಜಯೇಂದ್ರ ಮುಂದೆ ಹೇಳಿದ್ದರು. ಅದರಂತೆ ಇಂದು ಅವರು ಸಭೆ ನಡೆಸಿ ತಮ್ಮ ಮುಂದಿನ ನಡೆ ಬಗ್ಗೆ ಸ್ಪಷ್ಟಪಡಿಸಿದರು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ












Click it and Unblock the Notifications