ಹವ್ಯಕರ ಸಭೆಯಲ್ಲಿ ಮಾರಾಮಾರಿ, ಪ್ರಕರಣ ದಾಖಲು

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಸಾಗರ, ಜೂನ್ , 07: ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಪೀಠ ತ್ಯಾಗ ಮಾಡಲು ಆಗ್ರಹಿಸಿ ಹಮ್ಮಿಕೊಂಡಿದ್ದ ಸಭೆ ಘರ್ಷಣೆಗೆ ಕಾರಣವಾಗಿದೆ. ಸಾಗರದಲ್ಲಿ ಭಾನುವಾರ ಅಖಿಲ ಹವ್ಯಕ ಒಕ್ಕೂಟ ರಾಘವೇಶ್ವರ ಸ್ವಾಮೀಜಿ ಪೀಠ ತ್ಯಾಗಕ್ಕೆ ಆಗ್ರಹಿಸಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾರಾಮಾರಿ ನಡೆದ ಪ್ರಕರಣ ದಾಖಲಾಗಿದೆ.

ಮಠದ ಭಕ್ತರು ಎಂದು ಹೇಳಿಕೊಂಡು ಬಂದವರು ಸಭೆ ನಡೆಸುತ್ತಿದ್ದವರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಾಗರ ಠಾಣೆಯಲ್ಲಿ ಉದಯ್ ಕುಮಾರ್ ಎಂಬುವರು ದೂರು ದಾಖಲು ಮಾಡಿದ್ದಾರೆ. ಘಟನೆಯಲ್ಲಿ ಟಿ ಟಿ ಹೆಗಡೆ ಎಂಬುವರು ಗಾಯಗೊಂಡು ಸಾಗರದ ಆಸ್ಪತ್ರೆಗೆ ದಾಖಲಾಗಿದ್ದಾರೆ. [ರಾಘವೇಶ್ವರ ಶ್ರೀಗಳು ಖುಲಾಸೆ, ತೀರ್ಪಿನ 5 ಅಂಶಗಳು]

sagar

ಹಲ್ಲೆ ಮಾಡಿದಕ್ಕೆ ದಾಖಲೆಗಳು ಇವೆ, ಮಾಧ್ಯಮದವರು ಮಾಡಿದ ಚಿತ್ರೀಕರಣದಲ್ಲೂ ಆರೋಪಿಗಳ ಸೆರೆಯಾಗಿದೆ ಎಂದು ಹೇಳಿರುವ ಉದಯ ಕುಮಾರ್ ಹಲ್ಲೆ ಕೋರರನ್ನು ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ.

ಆಗಿದ್ದೇನು?
ಅಖಿಲ ಹವ್ಯಕ ಒಕ್ಕೂಟ ರಾಘವೇಶ್ವರ ಶ್ರೀಗಳ ಪೀಠ ತ್ಯಾಗಕ್ಕೆ ಒತ್ತಾಯಿಸಿ ಭಾನುವಾರ ಆಯೋಜಿಸಿದ್ದ ಸಭೆಗೆ ಅಡ್ಡಿಪಡಿಸುವ ಉದ್ದೇಶದಿಂದ ಆಗಮಿಸಿದ ಮಠದ ಭಕ್ತರು ಸಭೆ ನಡೆಸುತ್ತಿದ್ದ ಜಾಗಕ್ಕೆ ಬಂದು ಚಪ್ಪಲಿ, ಕಸಪೊರಕೆಯಿಂದ ದಾಳಿ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.[ಪ್ರೇಮಲತಾ ದಿವಾಕರ್ ಸಂದರ್ಶನ]

ನಾವು ಮಠದ ವ ವಿರೋಧಿಗಳಲ್ಲ ಆದರೆ ಚಾರಿತ್ರ್ಯ ಕಳೆದುಕೊಂಡ ಸ್ವಾಮೀಜಿ ಪೀಠದಲ್ಲಿ ಮುಂದುವರಿಯಬಾರದು ಎಂಬ ಕಾರಣ ಇಟ್ಟುಕೊಂಡು ಸಮಾಲೋಚನಾ ಸಭೆ ನಡೆಸಿದರೆ ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.[ಮಹಿಳಾ ಆಯೋಗಕ್ಕೆ ಮಠದ ಪ್ರಶ್ನೆಗಳು]

ಹವ್ಯಕ ಒಕ್ಕೂಟದ ಪ್ರಮುಖರಾದ ಯು.ಎನ್.ಭಟ್, ಸಿ.ಬಿ.ಎಲ್.ಹೆಗಡೆ, ಎಚ್.ಎಸ್. ಮಂಜಪ್ಪ, ಕೆ.ಎನ್.ಶರ್ಮ, ಇಂದಿರಾ ಮೋಹನ್ ಹೆಗಡೆ, ಕೆ.ಟಿ. ಮಹಾಬ ಲಗಿರಿ, ಸಿ.ಎಚ್.ಎಸ್.ಭಟ್, ಗೋಪಾ ಲಕೃಷ್ಣ ನೀರ್ಜಾಲು, ಮಂಜುನಾಥ ಹೆಗಡೆ ಹೊಸಬಾಳೆ, ಬೀರೂರು ಮಂಜಣ್ಣ ಸಭೆಯಲ್ಲಿ ಭಾಗವಹಿಸಿದ್ದರು.

ದೇವರ ಕೋರ್ಟ್ ನಲ್ಲಿ ಶಿಕ್ಷೆ ಆಗುತ್ತದೆ
ನ್ಯಾಯಾಲಯದಿಂದ ರಾಘವೇಶ್ವರ ಸ್ವಾಮೀಜಿ ಮುಕ್ತಿ ಕಂಡಿರಬಹುದು. ಆದರೆ ಯಾರೇ ತಪ್ಪು ಮಾಡಿದ್ದರೂ ದೇವರ ಕೋರ್ಟ್ ನಲ್ಲಿ ಶಿಕ್ಷೆ ಆಗುತ್ತದೆ ಎಂದು ನಾಡೋಜ ಪಾಟೀಲ ಪುಟ್ಟಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A meeting organised by Akhila Karnataka Havyaka Okkuta at Sagar, Shivamogga District to demand the removal of Raghaveshwara Bharathi as the pontiff of the Ramachandrapur Mutt, witnessed a clash between two groups of the Havyaka community.
Please Wait while comments are loading...