ರಾಯಚೂರು: 2 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ ಪತ್ತೆಯಾಯ್ತು ಮತ್ತೊಂದು ಭ್ರೂಣ, ಇದು ವೈದ್ಯಕೀಯ ವಿಸ್ಮಯ

ರಾಯಚೂರು: ವೈದ್ಯಕೀಯ ಲೋಕದಲ್ಲಿ ಆಗಾಗ ನಡೆಯುವ ಕೆಲವು ಘಟನೆಗಳು ಸಾಮಾನ್ಯ ಜನರನ್ನ ಮಾತ್ರವಲ್ಲದೆ, ದಶಕಗಳ ಕಾಲ ಅನುಭವ ಇರುವ ವೈದ್ಯರನ್ನೂ ಬೆರಗುಗೊಳಿಸುತ್ತವೆ. ಇಂತಹದ್ದೇ ಒಂದು ಅತ್ಯಂತ ಅಪರೂಪದ ಹಾಗೂ ಅಚ್ಚರಿಯ ವೈದ್ಯಕೀಯ ಪ್ರಕರಣವೊಂದು ರಾಯಚೂರು ಜಿಲ್ಲೆಯಲ್ಲಿ ವರದಿಯಾಗಿದೆ.

ಹೌದು, ಕೇವಲ ಎರಡು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿದೆ. ಇದು ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿರುವ ಸಹಸಾ ಆಸ್ಪತ್ರೆಯಲ್ಲಿ ಈ ವೈದ್ಯಕೀಯ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

Medical Marvel in Raichur Fetus Found Inside a 2-Month-Old Baby Boy s Stomach in Sindhanur

ಅಪರೂಪದ ಫೀಟಸ್ ಇನ್ ಫೀಟು ಪ್ರಕರಣ

ಎರಡು ತಿಂಗಳ ಹಸುಗೂಸಿನ ಹೊಟ್ಟೆ ವಿಪರೀತವಾಗಿ ಊದಿಕೊಂಡಿತ್ತು. ಮಗು ತಿಂದಿದ್ದನ್ನ ಜೀರ್ಣಿಸಿಕೊಳ್ಳಲಾಗದೆ ಪದೇಪದೇ ವಾಂತಿ ಮಾಡುತ್ತಿತ್ತು. ಮಗುವಿನ ಈ ಅಸಹಜ ಬೆಳವಣಿಗೆಯಿಂದ ಆತಂಕಗೊಂಡ ಪೋಷಕರು, ಸಿಂಧನೂರಿನ ಸಹಸಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿದ್ದರು.

ವೈದ್ಯರು ಮಗುವನ್ನು ಪ್ರಾಥಮಿಕ ತಪಾಸಣೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಗಡ್ಡೆಯಂತಹ ರಚನೆ ಇರುವುದು ಅನುಮಾನ ಮೂಡಿಸಿತ್ತು. ಬಳಿಕ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿರುವುದು ಮಾಂಸದ ಗಡ್ಡೆಯಲ್ಲ, ಬದಲಾಗಿ ಅದೊಂದು ಭ್ರೂಣ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.

ಮರುಪರೀಕ್ಷಾ ತಂತ್ರಜ್ಞಾನದ ನೆರವಿನಿಂದ ಇದು ಭ್ರೂಣವೇ ಎಂಬುದನ್ನು ವೈದ್ಯರು ನೂರಕ್ಕೆ ನೂರರಷ್ಟು ದೃಢಪಡಿಸಿದ್ದಾರೆ.

ವೈದ್ಯಕೀಯ ವಿಸ್ಮಯದ ಹಿಂದಿನ ಕಾರಣ ಬಿಚ್ಚಿಟ್ಟ ವೈದ್ಯರು

ಈ ಅಪರೂಪದ ವೈದ್ಯಕೀಯ ಸ್ಥಿತಿಯನ್ನ ವಿಜ್ಞಾನದ ಭಾಷೆಯಲ್ಲಿ ಫೀಟಸ್ ಇನ್ ಫೀಟು ಎಂದು ಕರೆಯಲಾಗುತ್ತದೆ. ಇದರ ಬಗ್ಗೆ ಮಾಹಿತಿ ನೀಡಿರುವ ಮಕ್ಕಳ ತಜ್ಞರಾದ ಡಾ. ಕೆ. ಶಿವರಾಜ್ ಹಾಗೂ ರೇಡಿಯಾಲಜಿಸ್ಟ್ ಡಾ. ವಿವೇಕ್ ಜೀರಂಕಲಿ, "ತಾಯಿಯ ಗರ್ಭದಲ್ಲಿ ಅವಳಿ ಮಕ್ಕಳು ರೂಪುಗೊಳ್ಳುವ ಆರಂಭಿಕ ಹಂತದಲ್ಲಿ ಈ ವಿಶಿಷ್ಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಎರಡು ಭ್ರೂಣಗಳ ಪೈಕಿ ಒಂದು ಭ್ರೂಣದ ಬೆಳವಣಿಗೆ ಅಸಹಜವಾಗಿ ನಿಂತುಹೋಗುತ್ತದೆ. ಆ ಬೆಳೆಯದ ಭ್ರೂಣವು, ಆರೋಗ್ಯವಂತವಾಗಿ ಬೆಳೆಯುತ್ತಿರುವ ಮತ್ತೊಂದು ಭ್ರೂಣದ ದೇಹದೊಳಗೆ ಸೇರಿಕೊಳ್ಳುತ್ತದೆ. ಇದನ್ನೇ ಫೀಟಸ್ ಇನ್ ಫೀಟು ಎನ್ನುತ್ತಾರೆ," ಎಂದು ವಿವರಿಸಿದ್ದಾರೆ ಎಂದು ವಿಜಯಕರ್ನಾಟಕ ಪತ್ರಿಕೆಗೆ ವರದಿ ಮಾಡಿದೆ.

ಇದು ಅತ್ಯಂತ ಅಪರೂಪದ ಪ್ರಕರಣವಾಗಿದ್ದು, ಜಗತ್ತಿನಲ್ಲಿ ಜನಿಸುವ ಪ್ರತಿ 50 ಲಕ್ಷ ಅವಳಿ ಶಿಶುಗಳ ಪೈಕಿ ಕೇವಲ ಒಂದು ಮಗುವಿನಲ್ಲಿ ಮಾತ್ರ ಇಂತಹ ಸ್ಥಿತಿ ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಭಾರತೀಯ ವೈದ್ಯಕೀಯ ಜರ್ನಲ್‌ನ ವರದಿಗಳ ಪ್ರಕಾರ, ಇಡೀ ದೇಶದಲ್ಲಿ ಇದುವರೆಗೆ ಕೇವಲ 230 ಇಂತಹ ಪ್ರಕರಣಗಳು ಮಾತ್ರ ವರದಿಯಾಗಿವೆ.

ಇನ್ನು ಕರ್ನಾಟಕ ರಾಜ್ಯದ ಮಟ್ಟಿಗೆ ಹೇಳುವುದಾದರೆ, ಇದು ಕೇವಲ ಮೂರನೇ ಪ್ರಕರಣವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಆಸ್ಪತ್ರೆಗೆ ಮಗು ರವಾನೆ

ಸದ್ಯ ಮಗುವಿನ ಹೊಟ್ಟೆಯಲ್ಲಿರುವ ಭ್ರೂಣವನ್ನ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಬೇಕಾದ ಅನಿವಾರ್ಯತೆ ಇದೆ. ಕೇವಲ ಎರಡು ತಿಂಗಳ ಮಗುವಾಗಿರುವುದರಿಂದ ಅತ್ಯಂತ ಎಚ್ಚರಿಕೆಯಿಂದ ತುರ್ತು ಚಿಕಿತ್ಸೆ ಹಾಗೂ ನಿರಂತರ ನಿಗಾದ ಅಗತ್ಯವಿದೆ.

ಹೀಗಾಗಿ ಸಿಂಧನೂರಿನ ವೈದ್ಯರು ಮಗುವನ್ನ ಬಳ್ಳಾರಿಯ ಬಿಎಂಸಿಆರ್‌ಐ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಬಳ್ಳಾರಿಯ ಆಸ್ಪತ್ರೆಯಲ್ಲಿ ಮಗುವಿನ ರಕ್ತ ಪರೀಕ್ಷೆಗಳು ಹಾಗೂ ಇತರ ಸಂಪೂರ್ಣ ವೈದ್ಯಕೀಯ ಮೌಲ್ಯಮಾಪನಗಳನ್ನ ನಡೆಸಿದ ಬಳಿಕ, ಶಸ್ತ್ರಚಿಕಿತ್ಸೆಯ ಅಗತ್ಯತೆ ಮತ್ತು ಅದನ್ನು ಯಾವಾಗ ಮಾಡಬೇಕು ಎಂಬ ದಿನಾಂಕವನ್ನು ತಜ್ಞ ವೈದ್ಯರ ತಂಡ ನಿರ್ಧರಿಸಲಿದೆ.

ಸದ್ಯ ಕರುನಾಡಿನಲ್ಲಿ ನಡೆದ ಈ ವೈದ್ಯಕೀಯ ಲೋಕದ ವಿಸ್ಮಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ .

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+