ಅನುದಾನಿತ ಪ್ರೌಢಶಾಲಾ ಶಿಕ್ಷಕಿಯರಿಗೆ ಶಿಶುಪಾಲನಾ ರಜೆ ಸೌಲಭ್ಯ

ಬೆಂಗಳೂರು, ಮೇ 11; ಅನುದಾನಿತ ಪ್ರೌಢಶಾಲಾ ಮಹಿಳಾ ಶಿಕ್ಷಕಿಯರು ಮತ್ತು ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಇರುವಂತೆ ಶಿಶುಪಾಲನಾ ರಜೆ ಸೌಲಭ್ಯವನ್ನು ವಿಸ್ತರಿಸಲು ಮನವಿ ಮಾಡಲಾಗಿದೆ. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಶಾಲಾ ಮತ್ತು ಸಾಕ್ಷರತಾ ಇಲಾಖೆ ಇವರಿಗೆ ಈ ಕುರಿತು ಪತ್ರವನ್ನು ಬರೆಯಲಾಗಿದೆ.

ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರು ಈ ಕುರಿತು ಪತ್ರವನ್ನು ಬರೆದಿದ್ದು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಮತ್ತು 21/6/2021ರ ಸರ್ಕಾರದ ಆದೇಶ, 17/11/2021ರ ಸರ್ಕಾರದ ಆದೇಶವನ್ನು ಉಲ್ಲೇಖ ಮಾಡಿ ಹಲವು ಅಂಶಗಳನ್ನು ವಿವರಿಸಿದ್ದಾರೆ.

ಪತ್ರದಲ್ಲಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರು ಮತ್ತು ನೌಕರರು ಸರ್ಕಾರದ ಅನುದಾನದಿಂದಲೇ ವೇತನ, ಭತ್ಯೆಗಳನ್ನು ಪಡೆಯುತ್ತಿದ್ದಾರೆ. ಅಲ್ಲದೆ ಸರ್ಕಾರಿ ಮಹಿಳಾ ನೌಕರರ ಮತ್ತು ಅನುದಾನಿತ ಪ್ರೌಢಶಾಲಾ ಮಹಿಳಾ ನೌಕರರ ಕರ್ತವ್ಯದ ಸ್ವರೂಪ ಒಂದೇ ರೀತಿಯಾಗಿದ್ದು, ಅನುದಾನಿತ ಪ್ರೌಢಶಾಲಾ ಮಹಿಳಾ ಶಿಕ್ಷಕಿಯರು ಮತ್ತು ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಇರುವಂತೆ ಶಿಶುಪಾಲನಾ ರಜೆ ಸೌಲಭ್ಯವನ್ನು ವಿಸ್ತರಿಸುವ ಕೋರಿಕೆ ಇದೆ ಎಂದು ಹೇಳಿದ್ದಾರೆ.

mother and child

ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ನೀಡಲಾದ ಶಿಶುಪಾಲನಾ ರಜೆ ಸೌಲಭ್ಯವನ್ನು ಅನುದಾನಿತ ಶಾಲಾ ಮಹಿಳಾ ನೌಕರರು/ ಸಿಬ್ಬಂದಿಗಳಿಗೂ ವಿಸ್ತರಿಸುವ ಬಗ್ಗೆ ಸ್ಪಷ್ಟ ಅಭಿಪ್ರಾಯದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ. ರಾಜ್ಯ ಸರ್ಕಾರವು 2021-12ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯ ಸರ್ಕಾರದ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಘೋಷಿಸಿದ್ದು, ಅದರಂತೆ ಕೆಲವು ಷರತ್ತುಗಳ ಮೇರೆಗೆ ಇಡೀ ಸೇವಾವಧಿಯಲ್ಲಿ ಗರಿಷ್ಟ ಆರು ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಸಕ್ಷಮ ಪ್ರಾಧಿಕಾರವು ಮಂಜೂರು ಮಾಡತಕ್ಕದೊಂದು ಆದೇಶಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ರಜೆ ನೀಡಲು ಮಾರ್ಗಸೂಚಿಗಳು; ಶಿಕ್ಷಣ ಇಲಾಖೆಯ ಶಿಕ್ಷಕಿಯರಿಗೆ 180 ದಿನಗಳ ಶಿಶುಪಾಲನಾ ರಜೆ ಮಂಜೂರಿಸಲು ಸ್ಪಷ್ಟೀಕರಣ ನೀಡಿ ಶಿಕ್ಷಣ ಇಲಾಖೆಯ ಶಿಕ್ಷಕಿಯರು ಒಂದೇ ಶಾಲೆಯಲ್ಲಿ ಒಬ್ಬರಿಗಿಂತ ಹೆಚ್ಚಿನ ಶಿಕ್ಷಕಿಯರು ಶಿಶುಪಾಲನಾ ರಜೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದಲ್ಲಿ ಈ ಕೆಳಕಂಡ ಮಾರ್ಗಸೂಚಿ ಅನುಸರಿಸಿ ಇತ್ಯರ್ಥ ಪಡಿಸಲು ಆದೇಶಿಸಲಾಗಿದೆ

leave order

* ಒಂದು ಶಾಲೆಯಲ್ಲಿ 2 ಅಥವಾ 2ಕ್ಕಿಂತ ಹೆಚ್ಚು ಮಹಿಳಾ ಶಿಕ್ಷಕಿಯರು ರಜೆ ಕೋರಿ ಅರ್ಜಿ ಸಲ್ಲಿಸಿದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಮಗುವಿನ ಶಿಕ್ಷಕಿಗೆ ಸೇವಾ ಪುಸ್ತಕದಲ್ಲಿ ಈಗಾಗಲೇ ನಮೂದಿಸಿರುವ ಮಕ್ಕಳ ವಿವರಗಳ ಆಧಾರದ ಮೇಲೆ ರೋಟೇಷನ್ ಪದ್ಧತಿಯಲ್ಲಿ ಆದ್ಯತೆಯ ಮೇಲೆ ಮಂಜೂರು ಮಾಡುವುದು (ಪಾಳಿ ಪದ್ಧತಿ).

* ತಾಲೂಕಿನಲ್ಲಿ ರಜೆ ಮಂಜೂರಾತಿ ಕೋರಿರುವ ಎಲ್ಲಾ ಅರ್ಜಿಗಳನ್ನು ಪ್ರಾಧಿಕಾರವು ಅರ್ಹತೆಯ ಆಧಾರದ ಮೇಲೆ ತೀರಾ ಅನಿವಾರ್ಯತೆ ಇರುವ ಹಾಗೂ ಪ್ರಕರಣಗಳ ಗಂಭೀರತೆಯನ್ನು ಪರಿಗಣಿಸಿ, ಆದ್ಯತೆಯ ಮೇಲೆ ಮಂಜೂರಾತಿಗೆ ಕ್ರಮವಹಿಸುವುದು.

* ಸದರಿ ಸೌಲಭ್ಯವನ್ನು ಹಕ್ಕು ಎಂಬುದಾಗಿ ಪರಿಗಣಿಸಿ, ಕ್ಲೇಮ್ ಮಾಡಲು ಅವಕಾಶವಿರುವುದಿಲ್ಲ. ಸಕ್ಷಮ ರಜೆ ಮಂಜೂರಾತಿ ಪ್ರಾಧಿಕಾರದ (ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮವಹಿಸುವ ಷರತ್ತಿನೊಂದಿಗೆ) ಪೂರ್ವಾನುಮತಿ ಪಡೆದು ನಂತರವೇ ರಜೆಯನ್ನು ಉಪಯೋಗಿಸಿಕೊಳ್ಳುವುದು.

* ಏಕೋಪಾಧ್ಯಾಯ ಶಾಲೆ/ ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಶಿಕ್ಷಕಿಯರು ಈ ರಜೆ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸಿದಲ್ಲಿ ಮಂಜೂರಾತಿ ಸಕ್ಷಮ ಪ್ರಾಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಮಾಡಿದ ತರುವಾಯ ರಜೆ ಮಂಜೂರಾತಿಗೆ ಕ್ರಮವಹಿಸಬಹುದಾಗಿದೆ.

* ಒಟ್ಟಾರೆ ಶಾಲೆಯ ಶೈಕ್ಷಣಿಕ ಹಿತಕ್ಕೆ ಧಕ್ಕೆಯಾಗದಂತೆ ಕ್ಷೇತ್ರ ಶಿಕ್ಷಣಾಧಿಆಕರಿಗಳು ನಿಯಮಾನುಸಾರ ಮಂಜೂರಾತಿಗೆ ಕ್ರಮವಹಿಸುವುದು.

* ಪ್ರತಿ ಬಾರಿಯೂ ಈ ರಜೆ ಮಂಜೂರಾತಿಯು ಕನಿಷ್ಠ 15 ದಿನಗಳು, ಗರಿಷ್ಠ 30 ದಿನಗಳು ಮೀರದಂತೆ ಇರಬೇಕು. (ಶೈಕ್ಷಣಿಕ ಹಿತ ದೃಷ್ಟಿಯಿಂದ).

ಈ ಮನವಿ ಹಿನ್ನೆಲೆಯಲ್ಲಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರು ಮತ್ತು ನೌಕರರು ಎಂದು ಮಾತ್ರ ಇದ್ದರೂ ಸಹಿತ, ಅನುದಾನಿತ ಪ್ರಾಥಮಿಕ/ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರು ಮತ್ತು ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಇರುವಂತೆ ಶಿಶುಪಾಲನಾ ರಜೆ ಸೌಲಭ್ಯವನ್ನು ವಿಸ್ತರಿಸುವ ಕುರಿತು ಸಾಧಕ/ ಬಾಧಕ ಅಂಶಗಳ ಕುರಿತು ಕಳಗಿನಂತೆ ವಿವರಿಸಲಾಗಿದೆ.

ಸಾಧಕ/ ಬಾಧಕಗಳು; ಪ್ರಸ್ತುತ ಸದರಿ ಸೌಲಭ್ಯ, ಸರಕಾರಿ ನೌಕರರಿಗೆ ಮಾತ್ರ ಇರುತ್ತದೆ. ಅನುದಾನಿತ ಶಾಲಾ ಸಿಬ್ಬಂದಿ ಸರಕಾರಿ ನೌಕರರಾಗಿರುವುದಿಲ್ಲ ಅನುದಾನಿತ ಶಾಲೆಗಳ ಮಹಿಳಾ ನೌಕರರು ಸರ್ಕಾರದ ಅನುದಾನ ಪಡೆಯುವ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ ನಿರ್ವಹಿಸುತ್ತಿದ್ದಾರೆ. ಸದರಿ ಸೌಲಭ್ಯವನ್ನು ಈ ನೌಕರರಿಗೆ ವಿಸ್ತರಿಸುವ ವಿಷಯವು ನೀತಿ ನಿರೂವಣಾ ವಿಷಯವಾಗಿರುವುದರಿಂದ ಸರಕಾರದ ಹಂತದಲ್ಲಿ ತೀರ್ಮಾನವಾಗಬೇಕಾಗಿರುತ್ತದೆ.

ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರಿಗೆ ರಜೆ ಮಂಜೂರು ಮಾಡುವ ಪ್ರಾಧಿಕಾರಿಯು ಆಡಳಿತ ಮಂಡಳಿಯೇ ಆಗಿರುವುದರಿಂದ ಸದರಿಯವರ ಶಾಲೆಗಳಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಗದಂತೆ ಪರ್ಯಾಯ ವ್ಯವಸ್ಥೆಯನ್ನು ಆಯಾ ಆಡಳಿತ ಮಂಡಳಿಗಳೇ ಅವರ ಸ್ವಂತ ಸಂಪನ್ಮೂಲದಿಂದಲೇ ಮಾಡಬೇಕಿರುತ್ತದೆ. ಒಂದು ವೇಳೆ ಆಡಳಿತ ಮಂಡಳಿಗಳು ಪರ್ಯಾಯ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂದು ಮನವಿ ಸಲ್ಲಿಸಿದಲ್ಲಿ ಸರಕಾರಕ್ಕೆ ಆರ್ಥಿಕ ಹೊರೆಯಾಗುತ್ತದೆ.

ಈ ಮೇಲಿನ ಎಲ್ಲಾ ಅಂಶಗಳನ್ನು ಅವಗಾಹನೆಗೆ ತರುತ್ತಾ, ಅನುದಾನಿತ ಪ್ರಾಥಮಿಕ/ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರು ಮತ್ತು ನೌಕರರಿಗೆ ಶಿಶುಪಾಲನ ರಜೆ ಸೌಲಭ್ಯವನ್ನು ವಿಸ್ತರಿಸುವುದು ನೀತಿ ನಿರೂವಣಾ ವಿಷಯವಾಗಿರುವುದರಿಂದ ಈ ಬಗ್ಗೆ, ಸರ್ಕಾರದ ಹಂತದಲ್ಲಿ ನಿರ್ಣಯಿಸಬೇಕಾಗಿರುವುದರಿಂದ ಈ ಮೇಲಿನ ಅಭಿಪ್ರಾಯದ ವರದಿಯನ್ನು ಮುಂದಿನ ಕ್ರಮಕ್ಕಾಗಿ ಸರ್ಕಾರದ ಅವಗಾಹನೆಗೆ ಸಲ್ಲಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+