"ಸಿದ್ದರಾಮಯ್ಯನವರ ಅಹಂಕಾರ ತೃಪ್ತಿ ಪಡಿಸೋದಕ್ಕೆ ಟಿಪ್ಪು ಜಯಂತಿ!"

Posted By:
Subscribe to Oneindia Kannada
   ಟಿಪ್ಪು ಸುಲ್ತಾನ್ ರ 265ನೇ ಹುಟ್ಟು ಹಬ್ಬವನ್ನ ಆಚರಿಸುತ್ತಿರುವ ಕರ್ನಾಟಕ ಸರ್ಕಾರ | Oneindia Kannada

   ಬೆಂಗಳೂರು, ನವೆಂಬರ್ 10: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಂಕಾರವನ್ನು ತೃಪ್ತಿ ಪಡಿಸುವುದಕ್ಕಾಗಿ ಬೆಂಗಳೂರೊಂದರಲ್ಲೇ 11,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ದೇಶದ್ರೋಹಿ ಟಿಪ್ಪುವಿನ ಜಯಂತಿ ಆಚರಿಸಲಾಗುತ್ತಿದೆ!" ಎಂದು ಬಿಜೆಪಿ ನಾಯಕ, ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

   ಟಿಪ್ಪು ಜಯಂತಿ : ಮಡಿಕೇರಿಯಲ್ಲಿ ಸರ್ಕಾರಿ ಬಸ್ ಮೆಲೆ ಕಲ್ಲು ತೂರಾಟ

   ಕಳೆದ ಎರಡು ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಇಂದು(ನ.10) ರಾಜ್ಯದಾದ್ಯಂತ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಬಿಗುವಿನ ವಾತಾವರಣ ಮೂಡಿದೆ.

   ಇಂದು ರಾಜ್ಯದಾತ್ಯಂತ ಆಚರಣೆಗೊಳ್ಳಲಿದೆ ವಿವಾದದ ಟಿಪ್ಪು ಜಯಂತಿ!

   ಬಿಜೆಪಿಯ ಹಲವು ನಾಯಕರು ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಾರೆ. ಜೊತೆಗೆ ಟಿಪ್ಪು ಜಯಂತಿಯ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದರೊಂದಿಗೆ ಟ್ವಿಟ್ಟರ್ ನಲ್ಲಿಯೂ ಟಿಪ್ಪು ಜಯಂತಿಯ ಕುರಿತು ವಿರೋಧದ ಧ್ವನಿಯೇ ಹೆಚ್ಚಾಗಿ ಮೊಳಗುತ್ತಿದೆ.

   ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ವಿರೋಧವೇಕೆ?

   #TipuJayanti, ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಹಲವರು ಟಿಪ್ಪು ಜಯಂತಿಯನ್ನು ವಿರೋಧಿಸಿ, ಕರ್ನಾಟಕ ಸರ್ಕಾರವನ್ನೂ, ಸಿದ್ದರಾಮಯ್ಯ ಅವರ್ನ್ನೂ ತರಾಟೆಗೆ ತೆಗೆದುಕೊಂದಿದ್ದರೆ. ಅಲ್ಲೊಬ್ಬರು, ಇಲ್ಲೊಬ್ಬರು ಈ ಆಚರಣೆಯನ್ನು ಬೆಂಬಲಿಸಿದ್ದಾರೆ.

   In Pics : ಟಿಪ್ಪು ಸುಲ್ತಾನ್ ಯಾರಂತ ಗೊತ್ತಾ ಪುಟ್ಟಾ?

   ಸಿದ್ದು ಅಹಂಕಾರ ತೃಪ್ತಿಗೆ!

   ಕೇವಲ ಸಿದ್ದರಾಮಯ್ಯ ಅವರ ಅಹಂಕಾರವನ್ನು ತೃಪ್ತಿಪಡಿಸುವುದಕ್ಕೆ ಮತ್ತು ಕಾಂಗ್ರೆಸ್ ನ ಓಲೈಕೆ ರಾಜಕಅರಣದ ಭಾಗವಅಗಿ ದೇಶದ್ರೋಹಿ ಟಿಪ್ಪುವಿನ ಜಯಂತಿಯನ್ನು ಆಚರಿಸಲಾಗುತ್ತಿದೆ. ಅದಕ್ಕಾಗಿ ಕೇವಲ ಬೆಂಗಳೂರಿನಲ್ಲೇ 11,000 ಪೊಲೀಸರನ್ನು ನಿಯೋಜಿಸಲಾಗಿದೆ" ಎಂದು ಚಿಕ್ಕಮಗಳೂರು ಶಾಸಕ ಸಿಟಿ ರವಿ ಟ್ವೀಟ್ ಮಾಡಿದ್ದಾರೆ.

   ನಮ್ಮ ವಿರೀಧಿಗಳ ವೈಭವೀಕರಣ!

   ಆವು ಭಾರತೀಯರೇಕೆ ಹೀಗೆ? ನಮಗೆ ದ್ರೋಹ ಬಗೆದ, ನಮ್ಮ ವಿರೋಧಿಗಳ ವೈಭವೀಕರಿಸುತ್ತೇವೆ. ಅವರ ಅಪರಾಧಗಳನ್ನು, ಹೇಯಕೃತ್ಯಗಳನ್ನು ಮರೆಮಾಚಿಬಿಡುತ್ತೇವೆ. ಆಡಳಿತದಲ್ಲಿರುವವರು ಮತಕ್ಕೋಸ್ಕರ ಏನು ಬೇಕಾದರೂ ಮಾಡಬಹುದು ಎಂಬುದೇ ಕಾಂಗ್ರೆಸ್ ನ ಸಿದ್ಧಾಂತವೆನ್ನಿಸುತ್ತದೆ ಎಂದು ಗೀತಾ ರಾಜಶೇಖರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ತನ್ವೀರ್ ಸೇಠ್ ಗೂ ಟಿಪ್ಪು ಬಗ್ಗೆ ಗೌರವವಿಲ್ಲ!

   ಹಿಂದಿನ ವರ್ಷ ಟಿಪ್ಪು ಜಯಂತಿ ಆಚರಣೆಯ ವೇದಿಕಯಲ್ಲೇ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ನೋಡಿದ್ದರು. ಅದರರ್ಥ, ಟಿಪ್ಪು ಬಗ್ಗೆ ಅವರಿಗೂ ಗೌರವವಿಲ್ಲ ಎಂದೇ ಅರ್ಥವಲ್ಲವೇ ಎಂದು ಹೋಹನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಕಾಂಗ್ರೆಸ್ ಗೆ ನಾಚಿಕೆಯಾಗಬೇಕು!

   ಸಾವಿರಾರು ಹಿಂದುಗಳನ್ನು ನಿರ್ದಯವಾಗಿ ಕೊಂದ ಟಿಪ್ಪು ಸುಲ್ತಾನ್ ನ ಜನ್ಮದಿನ ಆಚರಿಸುತ್ತಿರುವ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ಶರತ್ ಕುಮಾರ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

   ಟಿಪ್ಪು ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ

   ಟಿಪ್ಪು ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ. ಒಬ್ಬ ಉತ್ತಮ ರಾಜ. ಉತ್ತಮ ಆಡಳಿತಗಾರ, ದ್ರಷ್ಟಾರ, ವೀರ ಹುತಾತ್ಮ. ಅವರು ಬ್ರಿಟಿಶರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಎಸ್.ಎಂ.ಅಲ್ತಾಫ್-ಉರ್-ರೆಹಮಾನ್ ಎನ್ನುವವರು ಟಿಪ್ಪುವನ್ನು ಹಾಡಿ ಹೊಗಳಿ ಟ್ವೀಟ್ ಮಾಡಿದ್ದಾರೆ!

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Tipu Jayanti celebration in Karnataka on Nov 10th. Many twitterians oppose celebration of Tipu Sultans birthday. They called Tipu Sultan is a tyrant who murdered innumerous Hindus in his tenure. TipuJayanti hashtag is trending on twitter now.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ