ಹಿಂದೂ ಸಂಘಟನೆ ವಿರುದ್ಧ ಮಂಗ್ಳೂರು ಸಿಟಿಜನ್ ಸಂಯೋಜಕಿ ದೂರು
ಮಂಗಳೂರು,ಡಿಸೆಂಬರ್.22: ನಟ ಶಾರುಖ್ ಖಾನ್ ಅಭಿನಯದ ದಿಲ್ವಾಲೆ ಸಿನಿಮಾಕ್ಕೆ ಅಡ್ಡಿ ಪಡಿಸುತ್ತಿರುವ ಹಿಂದೂ ಸಂಘಟನೆಗಳ ವಿರುದ್ಧ ಮಂಗಳೂರಿನ ಸಿಟಿಜನ್ ಫೋರಂನ ಸಂಯೋಜಕಿ ವಿದ್ಯಾ ದಿನಕರ್ ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.
ದಿಲ್ ವಾಲೆ ಸಿನಿಮಾಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರು ಮಂಗಳೂರು, ಉಡುಪಿಯಾದ್ಯಂತ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಗರದ ಮಲ್ಟಿಫ್ಲೆಕ್ಸ್ ನಲ್ಲಿ ಪ್ರದರ್ಶನಗೊಳ್ಳಲಿದ್ದ ಚಿತ್ರ ಪ್ರದರ್ಶನ ತಡೆದು, ಪೋಸ್ಟರ್ ಗಳನ್ನು ಹರಿದು ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.[ದಿಲ್ವಾಲೆ ಸಿನಿಮಾ ಪ್ರದರ್ಶನ ವಿರೋಧಿಸಿದ ಬಜರಂಗದಳ]

ಬಜರಂಗ ದಳ ನಾಯಕ ಶರಣ್ ಪಂಪ್ವೆಲ್ ಭಾನುವಾರ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಿನಿಮಾ ಮಾಲಿಕರ ರಕ್ಷಣೆ ಕೊಡಬೇಕಾದ ಪೊಲೀಸರೇ 'ನಿಮ್ಮ ರಿಸ್ಕ್ ನಕ್ಕಿ ಚಿತ್ರ ಪ್ರದರ್ಶಿಸಿ, ಅಹಿತಕರ ಘಟನೆ ಸಂಭವಿಸಿದರೆ ನಾವು ಜವಾಬ್ದಾರರಲ್ಲ' ಎಂದು ಥಿಯೇಟರ್ ಮಾಲೀಕರಿಗೆ ಹೇಳುವ ಮೂಲಕ ಪ್ರತಿಭಟನಾಕಾರರ ಪರವಾಗಿ ನಿಂತಿದ್ದಾರೆ. ಜೊತೆಗೆ ಪುನಃ ದಿಲ್ವಾಲೆ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಬೇಕು ಹಾಗೂ ಸಿನಿಮಾ ಮಾಲೀಕರು ಹಾಗೂ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಕರಾಟೆಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿ
ಉಡುಪಿ,ಡಿ.22 : ಮಲೇಶ್ಯಾದಲ್ಲಿ ನಡೆದ ಅಂತರರಾಷ್ಟೀಯ ಮಟ್ಟದ ಕರಾಟೆ ಸ್ವರ್ಧೆಯಲ್ಲಿ ಭಾರತ ತಂಡ ಪ್ರತಿನಿಧಿಸಿ ಚಿನ್ನದ ಪದಕ ಪಡೆದು ಜಯಶಾಲಿಯಾದ ಸರಕಾರ ಪದವಿ ಪೂರ್ವ ಕಾಲೇಜು, ವಿದ್ಯಾರ್ಥಿ "ಕಾರ್ತಿಕ ಜೋಗಿ " ಅವರಿಗೆ ಉಡುಪಿ ಜಿಲ್ಲೆಯ ಪರ್ಕಳದ ನಾಗರಿಕರಿಂದ ಮಂಗಳವಾರ 6 ಗಂಟೆಗೆ ಭವ್ಯ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿದೆ.[ಅಂದು ಚಾಂಪಿಯನ್, ಇಂದು ಚಹಾ ಅಂಗಡಿ ಚಾಕರಿ]

ಕಾರ್ತಿಕ ಜೋಗಿ ಅವರ ಈ ಸಾಧನೆಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರಣೀಭೂತರಾಗಿರುವ ಎಲ್ಲರಿಗೂ ಇದೇ ವೇಳೆ ಅಭಿನಂದನೆಯನ್ನು ಸಲ್ಲಿಸಲಾಯಿತು. ಹಾಗೂ ಇವರು ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ ಎಂದೂ ಹಾರೈಸಲಾಯಿತು.












Click it and Unblock the Notifications