ಶನಿವಾರದಿಂದ ಮಂಡ್ಯದಲ್ಲಿ ಬಾಯಿ ಚಪ್ಪರಿಸೋ ತಿನಿಸುಗಳು...

ಮಂಡ್ಯ, ಜನವರಿ,16: ತೀತರ್ ಸ್ಪೆಷಲ್, ಪ್ರೇಮಾ ಚಿಕನ್ ಪಲಾವ್, ಚಿಕನ್ ಕಬಾಬ್, ಗ್ರಿಲ್ ಚಿಕನ್, ಜೀವನ್ ಬಿರಿಯಾನಿ, ದೊಡ್ಡಣ್ಣ ಬಜ್ಜಿ, ಕೊಲ್ಹಾಪುರಿ ಬೇಲ್, ಕೊಲ್ಹಾಪುರಿ ಸೋಡಾ, ಬಿಡದಿ ತಟ್ಟೆ ಇಡ್ಲಿ, ಮೇಲುಕೋಟೆ ಪುಳಿಯೊಗರೆ, ಸಕ್ಕರೆ ಪೊಂಗಲ್, ನ್ಯೂಡೆಲ್ಲಿ ಟಿಫಾನೀಸ್ ಚಾಟ್ಸ್, ಗೌತಮ್ ದೋಸೆ ಮತ್ತು ಫಿಶ್. ಹುಬ್ಬಳ್ಳಿ ಜೋಳದ ರೊಟ್ಟಿ, ಮದ್ದೂರು ವಡೆ, ಬೆಳಗಾವಿ ಕುಂದಾ, ಧಾರವಾಡ ಪೇಡ, ಉತ್ತರ ಕರ್ನಾಟಕದ ಬಗೆ ಬಗೆಯ ಆಹಾರಗಳು. ಕೋಲ್ಕತ್ತ ಸ್ಟೈಲ್, ಪಂಜಾಬಿ ಮಾದರಿಯ ವೈವಿಧ್ಯ ತಿನಿಸುಗಳು, ವಿವಿಧ ಮಾದರಿ ಹಣ್ಣಿನ ಜ್ಯೂಸ್..

ಇದೆಲ್ಲ ಯಾವ ಹೋಟೆಲ್ ಮೆನು ಅಂಥ ಅಚ್ಚರಿಯಾಯಿತೇ? ಇವುಗಳನ್ನೆಲ್ಲ ಸವಿಯುವ ಬಯಕೆಯಿದ್ದರೆ ಮಂಡ್ಯ ಯೂತ್ ಗ್ರೂಪ್ ವತಿಯಿಂದ ಜ.16ರಿಂದ 19ರವರೆಗೆ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮಂಡ್ಯ ಬಹುರುಚಿ ಮೇಳ ಹಾಗೂ ಯುವಯಾನ ಕಾರ್ಯಕ್ರಮ ಬರಲೇಬೇಕು.[ಗುರುವಾರದಿಂದ ಮೈಸೂರಲ್ಲಿ ಆರಂಭವಾಗಿದೆ ಬಹುರೂಪಿ ನಾಟಕೋತ್ಸವ]

Mandya

ಜ.16ರಂದು ಸಂಜೆ 6 ಗಂಟೆಗೆ ಕಿರುತೆರೆ ನಿರ್ದೇಶಕ ಸಿಹಿಕಹಿ ಚಂದ್ರು ಬಹುರುಚಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಜ.17ರಂದು 'ಭುಜಂಗ' ಚಿತ್ರತಂಡದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ನಂತರ ಚಿತ್ರತಂಡ ಸ್ಟಾರ್ ನೈಟ್ಸ್ ಕಾರ್ಯಕ್ರಮ ನಡೆಸಿಕೊಡಲಿದೆ. ಇದಲ್ಲದೆ ಸರಿಗಮಪ ಲಿಟ್ಲ್ ಚಾಂಪಿಯನ್ ಸುಪ್ರಿಯಾ ಜೋಶಿ ಅವರಿಂದ ಗಾನಸುಧೆ ಮೂಡಿಬರಲಿದೆ.

ಜ.18ರಂದು ಮೈಯ್ಯಾಸ್ ಉತ್ಪನ್ನಗಳ ಮಾಲೀಕ ಸದಾನಂದ ಮೈಯ್ಯಾ ಅವರು ಮಂಡ್ಯ ಯೂತ್ ಗ್ರೂಪಿನ ಮಹತ್ವಾಕಾಂಕ್ಷೆಯ 'ಮನೆಗೊಂದು ಗಿಡ-ಹಸಿರು ಮಂಡ್ಯ' ಯೋಜನೆ ಉದ್ಘಾಟಿಸುವರು. ಸೈಕಲ್ ಮ್ಯಾನ್‍ ಗೆ ಜಿಲ್ಲಾಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್ ಚಾಲನೆ ನೀಡುವರು.[ಬೆಂಗಳೂರು: ಸಂಕ್ರಾಂತಿಗೆ ಹಳ್ಳಿಮನೆ ಹಬ್ಬದೂಟ]

ಜ.19ರಂದು ನಾಡಿನ ಪ್ರಸಿದ್ಧ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ತಂಡದಿಂದ ನಗೆಹಬ್ಬ, ಮೈಸೂರಿನ ವಾಸುದೇವ ಆಚಾರ್ಯ ಅವರಿಂದ ಷಾಡೋ ಷೋ' ನಡೆಯಲಿದೆ. ನಾಲ್ಕು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರೇಕ್ಷಕರು ಮನೆಗೆ ಬರಿಗೈಲಿ ಹೋಗುವಂತಿಲ್ಲ. ಮೈಯ್ಯಾಸ್ ಜಾಮೂನ್, ಪುಳಿಯೊಗರೆ ಮಿಕ್ಸ್, ರಸಂ ಪುಡಿಯನ್ನು ಉಚಿತವಾಗಿ ನೀಡಲಾಗುತ್ತದೆ. ಮಹಿಳೆಯರಿಗಾಗಿ ಅಡುಗೆ ಮಾಡುವ ಸ್ಪರ್ಧೆ, ತಿಂಡಿ ತಿನ್ನುವ ಸ್ಪರ್ಧೆಯೂ ಇದೆ ಇನ್ನೇನು ಈಗಲೇ ರೆಡಿಯಾಗಿ.. ಮಂಡ್ಯದ ಬಹುರುಚಿ ಹಬ್ಬಕ್ಕೆ ಹೋಗಲು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+