Get Updates
Get notified of breaking news, exclusive insights, and must-see stories!

ಸ್ವಚ್ಛ ಭಾರತ ಅಭಿಯಾನಕ್ಕೆ 'ಡನ್' ಎಂದ ಮಂಡ್ಯ

ಮಂಡ್ಯ, ಡಿ. 1: ಸ್ವಚ್ಛ ಭಾರತ ಅಭಿಯಾನ ಅಸಂಖ್ಯಾತ ವೈಟ್ ಕಾಲರ್ ಜನರ ಕೈಯಲ್ಲಿ ಪೊರಕೆ ಹಿಡಿಸಿದೆ. ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವುದನ್ನು ಹೆಮ್ಮೆಯ ವಿಷಯವನ್ನಾಗಿಸಿದ ಹೆಗ್ಗಳಿಕೆ ಈ ಅಭಿಯಾನದ್ದು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಹೆಚ್ಚು ಸ್ಪಂದನೆ ಸಿಕ್ಕಿರಲಿಲ್ಲ. ಆದರೆ, ಸರ್ಕಾರಿ ಅಧಿಕಾರಿಗಳು ಎಂಬ ಆಡಳಿತ ಯಂತ್ರ ಮಾತ್ರ ನಿರ್ಲಿಪ್ತವಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಜಾರಿಗೆ ಶಕ್ತಿ ಮೀರಿ ಯತ್ನಿಸಿದೆ. ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆ ಎಲ್ಲರಿಗಿಂತ ಮೊದಲು ಇಟ್ಟುಕೊಂಡ ಗುರಿಯನ್ನೂ ಮುಟ್ಟಿದೆ. [ಮಂಡ್ಯ ಜಿಲ್ಲೆಯಲ್ಲಿ 1 ಲಕ್ಷ ಶೌಚಾಲಯ]

ಹೌದು, ಮಂಡ್ಯ ಜಿಲ್ಲೆಯಲ್ಲಿ 31,425 ಶೌಚಾಲಯಗಳ ನಿರ್ಮಾಣದ ಗುರಿಯನ್ನು ಅಕ್ಟೋಬರ್ ತಿಂಗಳಿನಲ್ಲಿಯೇ ಸಾಧಸಿಯಾಗಿದೆ. ನಂತರ ಮತ್ತೆ 40 ಸಾವಿರ ಶೌಚಾಲಯಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. [ಎರಡು ಗುರಿಗಳ ಬೆನ್ನು ಹತ್ತಿದ ದಿವ್ಯ ಸ್ಪಂದನಾ]

ಜಿಲ್ಲೆಯಲ್ಲಿ 2013-14ನೇ ಆರ್ಥಿಕ ವರ್ಷದಲ್ಲಿಯೇ ಗುರಿಯ ಶೇ. 68ರಷ್ಟು ಅಂದರೆ 17,033 ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಆದ್ದರಿಂದ ಗುರಿ ಮುಟ್ಟುವುದು ಕಷ್ಟವಾಗಲಿಲ್ಲ.

ಗುರಿ ಮುಟ್ಟಿದ್ದು ಹೀಗೆ...: ಗುರಿ ಸಾಧನೆ ಸಾಧ್ಯವಾಗಿದ್ದು ಹೇಗೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ವಿವರಿಸಿದ್ದು ಹೀಗೆ.

ಯೋಜನೆ ಜಾರಿ ಮಾಡುವಾಗ ತಳಮಟ್ಟದಲ್ಲಿ ಕಂಡುಬರುವ ಸಮಸ್ಯೆಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿತ್ತು. ಇವುಗಳಿಗೆ ಪರಿಹಾರ ಕಂಡುಹಿಡಿದು ಯೋಜನೆ ತಯಾರಿಸಿದ್ದರಿಂದ ಗುರಿ ಮುಟ್ಟಲು ಸಾಧ್ಯವಾಯಿತು. ಶಿಕ್ಷಕರು ಹಾಗೂ ಅಂಗನವಾಡಿ ಶಿಕ್ಷಕರಿಗೆ ಶೌಚಾಲಯ ಹೊಂದಿರದ ವಿದ್ಯಾರ್ಥಿಗಳ ಮನೆ ಗುರುತಿಸಿ ಜಾಗೃತಿ ಮೂಡಿಸಲು ಸೂಚಿಸಲಾಗಿತ್ತು ಎಂದು ರೋಹಿಣಿ ತಿಳಿಸಿದ್ದಾರೆ. [ಅತ್ಯಾಚಾರ ನಿಲ್ಲಲು ಶೌಚಾಲಯ ಕಟ್ಟಿಸಿ]

ambareesh

ಮಂಡ್ಯದ ಗಂಡಿನ ಕರೆ: ಶೌಚಾಲಯ ಕುರಿತು ಜಾಗೃತಿ ಮೂಡಿಸಲು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ ಜಿಲ್ಲೆಯ ಮೊಬೈಲ್‌ಗಳಿಗೆ ಧ್ವನಿ ಸಂದೇಶ ರವಾನಿಸಿದ್ದರು. [ಬೆಂಗಳೂರಲ್ಲಿ ಇ ಶೌಚಾಲಯ]

ಅಲ್ಲದೆ, ಪ್ರತಿ ವಾರ ಎಲ್ಲ ಪಂಚಾಯಿತಿಗಳ ಕಾರ್ಯದದರ್ಶಿಗಳು, ಅಭಿವೃದ್ಧಿ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಚರ್ಚಿಸಲಾಗಿತ್ತು ಎಂದು ರೋಹಿಣಿ ಸಿಂಧೂರಿ ವಿವರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+