ಪಾಂಡವಪುರದಲ್ಲಿ ಮೈದುನನೇ ಅತ್ತಿಗೆಯನ್ನು ಕೊಂದ

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಮೇ 29: ಮೈದುನನೇ ಅತ್ತಿಗೆಯನ್ನು ಕೊಲೆಗೈದ ಘಟನೆ ಪಾಂಡವಪುರ ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ನಡೆದಿದ್ದು, ಘಟನೆಗೆ ಅಕ್ರಮ ಸಂಬಂಧವೇ ಕಾರಣ ಎನ್ನಲಾಗಿದೆ.

ಗ್ರಾಮದ ನಿವಾಸಿ ಟಿಪ್ಪರ್ ಚಾಲಕ ಬಸವರಾಜು ಎಂಬವರ ಪತ್ನಿ ವಿಶಾಲಾಕ್ಷಿ (36) ಎಂಬಾಕೆಯೆ ಮೈದುನನಿಂದ ಕೊಲೆಯಾದ ಮಹಿಳೆ. ಈಕೆಯ ಮೈದುನ ರಾಜು ಹಂತಕನಾಗಿದ್ದು, ಕೃತ್ಯ ನಡೆಸಿದ ಪರಾರಿಯಾಗಿದ್ದಾನೆ. ರಾಜು ಅಣ್ಣನ ಮನೆ ಪಕ್ಕದಲ್ಲೇ ವಾಸವಾಗಿದ್ದನು. ಅಣ್ಣ ಬಸವರಾಜು ಟಿಪ್ಪರ್ ಚಾಲಕನಾಗಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದನು.

Pandavapura Murder,

ರಾಜು ಮದುವೆಯಾಗಿದ್ದನಾದರೂ ಕಳೆದ ಐದು ವರ್ಷಗಳ ಹಿಂದೆಯೇ ತನ್ನ ಹೆಂಡತಿಯನ್ನು ತೊರೆದಿದ್ದನು. ಈತ ಅತ್ತಿಗೆ ವಿಶಾಲಾಕ್ಷಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು ಎನ್ನಲಾಗಿದೆ.

ಪತಿ ಬಸವರಾಜು ಕೆಲಸಕ್ಕೆಂದು ಮೈಸೂರಿಗೆ ತೆರಳಿದ್ದು, ಪತ್ನಿ ವಿಶಾಲಾಕ್ಷಿ ಮೈದುನ ರಾಜು ಮನೆಗೆ ತೆರಳಿದ್ದಾಳೆ. ಮಧ್ಯಾಹ್ನದಿಂದಲೇ ಮೈದುನನೊಂದಿಗೆ ಇದ್ದಳು. ಈ ನಡುವೆ ಅವರ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ. ಅದು ತಾರಕಕ್ಕೇರಿದ್ದು, ಸಿಟ್ಟಿಗೆದ್ದ ರಾಜು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಬಾಗಿಲು ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಇತ್ತ ಬಸವರಾಜು ತಾಯಿ ಸಿದ್ದಮ್ಮ ಅವರು ಮಧ್ಯಾಹ್ನ ಮನೆಯಿಂದ ಹೊರಹೋದ ಸೊಸೆ ಮರಳಿ ಬಾರದ್ದರಿಂದ ಎಲ್ಲೆಡೆ ಹುಡುಕಾಡಿ ಕೊನೆಗೆ ರಾಜು ಮನೆಗೆ ಹೋಗಿ ನೋಡಿದಾಗ ಅಲ್ಲಿ ಕೊಲೆಯಾಗಿರುವುದು ಗೊತ್ತಾಗಿದೆ. ಕೂಡಲೇ ಪಕ್ಕದವರಿಗೆ ವಿಷಯ ತಿಳಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಪಾಂಡವಪುರ ಪಟ್ಟಣ ಠಾಣೆಯ ಪಿಎಸ್‍ಐ ಅಯ್ಯನಗೌಡ, ಎಎಸ್‍ಐ ಜವರೇಗೌಡ, ಶಿವಶಂಕರ್ ಮತ್ತಿತರರು ಸ್ಥಳಕ್ಕಾಗಮಿಸಿ ಮಹಜರು ನಡೆಸಿ, ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರಿಗೆ ನೀಡಲಾಗಿದೆ. ಪರಾರಿಯಾಗಿರುವ ಹಂತಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mandya : Pandavapura Murder: An illicit affair turned in to tragedy. Man who had relationship with his Sister in law alleged killed her.
Please Wait while comments are loading...