ಐದು ವರ್ಷಗಳ ಬಳಿಕ ಕಾಣಿಸಿಕೊಂಡ ಕೋವಿಡ್ ರೀತಿಯ ವೈರಸ್‌: ಚೀನಾದಿಂದ ಬಂದ ಮಂಡ್ಯ ಶಾಸಕ ರವಿ ಗಣಿಗ ಹೇಳಿದ್ದೇನು?

ಬೆಂಗಳೂರು,ಜನವರಿ 03: ವಿಶ್ವವನ್ನೇ ಸ್ತಬ್ದಗೊಳಿಸಿದ್ದ ಕೊರೋನಾ ವೈರಸ್ ಹಾವಳಿ ಕಾಣಿಸಿಕೊಂಡ ಬರೋಬ್ಬರಿ ಐದು ವರ್ಷಗಳ ಬಳಿಕ ಚೀನಾದಲ್ಲಿ ಮತ್ತೆ ಹಲವು ವೈರಸ್‌ಗಳು ವ್ಯಾಪಕವಾಗಿ ಹಬ್ಬಿವೆ ಎಂಬ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಹೌದು, ಕಳೆದ ಕೆಲ ದಿನಗಳಿಂದ ಚೀನಾದಲ್ಲಿ ಇನ್‌ಪ್ಯೂಯೆನ್ನಾ ಎ, ಎಚ್‌ಎಂಪಿವಿ, ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಕೋವಿಡ್ 19 ವೈರಸ್ ವ್ಯಾಪಕವಾಗಿ ಹಬ್ಬಿದೆ ಎಂದು ವರದಿಗಳು ತಿಳಿಸಿವೆ. ಇನ್ನೂ ಚೀನಾ ಪ್ರವಾಸದ ಬಳಿಕ ಮಂಡ್ಯ ಶಾಸಕ ರವಿಗಣಿಗ ಅವರು ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ. ನಾಲ್ಕು ದಿನ ಚೀನಾ ಪ್ರವಾಸದಲ್ಲಿದ್ದ ರವಿಗಣಿಗ ಅವರು ಚೀನಾದ ಪರಿಸ್ಥಿತಿಯನ್ನ ವಿವರಿಸಿದ್ದಾರೆ. ಚೀನಾದಲ್ಲಿ ಶೇಖಡ 80% ರಷ್ಟು ಜನ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದಾರೆ.

Mandya MLA Ravi Ganiga surprising statement after returning from a trip to China

ಮಕ್ಕಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಟೆಸ್ಟ್ ಮಾಡುತ್ತಿದ್ದಾರೆ. ಯಾವುದೋ ವೈರಸ್ ಅಥವಾ ಕೊವಿಡ್ ರೀತಿಯ ವೈರಸ್ ಬಂದಿರಬಹುದು, ಹಾಗಾಗಿ ಮುಂಜಾಗ್ರತೆ ಕ್ರಮಕ್ಕಾಗಿ ಮಾಸ್ಕ್ ಹಾಕಿರಬಹುದು. ಹಾಂಗ್ ಕಾಂಗ್ ಏರ್ಪೊರ್ಟ್ ನಲ್ಲೂ ಮಾಸ್ಕ್ ಧರಿಸಿದ್ದರು. ಕೋವಿಡ್ ರೀತಿಯ ಹೊಸ ವೈರಸ್ ಬಂದಿರಬಹುದೆಂದು ಶಂಕೆ ವ್ಯಕ್ತಪಡಿಸಿದ ರವಿಗಣಿಗ, ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟರೈಸ್ ಇಡಲಾಗಿದೆ ಎಂದು ಮಂಡ್ಯ ಶಾಸಕ ರವಿಗಣಿಗ ಅವರು ಹೇಳಿದರು.

ಹಾಂಗ್ ಕಾಂಗ್ ಏರ್ಪೊರ್ಟ್​ನಲ್ಲೂ ಮಾಸ್ಕ್ ಧರಿಸಿದ್ದರು ಎಂದು ತಿಳಿಸಿದರು. ಕೊವಿಡ್ ರೀತಿಯ ಹೊಸ ವೈರಸ್ ಬಂದಿರಬಹುದೆಂದು ಮಂಡ್ಯ ಕಾಂಗ್ರೆಸ್‌ ಶಾಸಕರಾದ ರವಿ ಗಣಿಗ ಅವರು ಶಂಕೆ ವ್ಯಕ್ತಪಡಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಇಡಲಾಗಿದೆ. ಹೊಸ ವೈರಸ್ ಇರಬಹುದು, ಹಾಗಾಗಿ ನಾವು ಮುಂಜಾಗರೂತೆಯಿಂದ ಇದ್ದರೆ ಒಳ್ಳೆಯದು ಎಂದು ರವಿ ಗಣಿಗ ಅವರು ತಿಳಿಸಿದರು.

ಮತ್ತೆ ಬಂತು ಹೊಸ ವೈರಸ್

ಕಳೆದ ಐದು ವರ್ಷಗಳ ಬಳಿಕ ಮತ್ತೆ ಹೊಸ ವೈರಸ್‌ ಮತ್ತೆಯಾಗಿದೆ ಎಂದು ವರದಿಯಾಗಿದೆ. ವೈರಸ್ ವ್ಯಾಪಕವಾಗಿ ಹಬ್ಬಿರುವ ಕಾರಣ, ದೇಶದ ಹಲವು ಭಾಗಗಳಲ್ಲಿ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ವೈರಸ್ ಸೋಂಕಿನಿಂದಾಗಿ ಭಾರೀ ಪ್ರಮಾಣದಲ್ಲಿ ಸಾವು ಸಂಭವಿಸಿದ್ದು, ಶವಾಗಾರ ಮತ್ತು ಸ್ಮಶಾನಗಳಲ್ಲೂ ಜಾಗ ಇಲ್ಲದಂತಾಗಿದೆ. ಸೋಂಕು ತಡೆಗೆ ಈಗಾಗಲೇ ಚೀನಾ ಸರ್ಕಾರ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ ಎಂಬ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇನ್ನೂ ಮತ್ತೆ ಹೊಸ ವೈರಸ್‌ ಕುರಿತು ಇದುವರೆಗೂ ಚೀನಾ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೊತೆಗೆ ಇದನ್ನು ನಿರಾಕರಿಸಿಯೂ ಇಲ್ಲ. ಈ ಹಿಂದೆ ಕೋವಿಡ್ ಕಾಣಿಸಿಕೊಂಡಾಗಲೂ ಚೀನಾ ಇದೇ ರೀತಿಯಲ್ಲಿ ವರ್ತಿಸಿತ್ತು. ಹೀಗಾಗಿ ಚೀನಾದ ವರ್ತನೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ನ್ಯುಮೋನಿಯಾ ಸೇರಿ ದಂತೆ ಉಸಿರಾಟ ಸಂಬಂಧಿ ಸಮಸ್ಯೆಗಳ ಮೇಲೆ ನಿಗಾ ವಹಿಸಲಾಗುತ್ತಿದೆ.

ಕೊರೋನಾ ಸಂದರ್ಭದಲ್ಲಿ ಉಂಟಾದ ಅವ್ಯವಸ್ಥೆಯ ಪರಿಸ್ಥಿತಿ ಮತ್ತೆ ನಿರ್ಮಾಣವಾಗುವುದನ್ನು ತಡೆಯುವ ಸಲುವಾಗಿ ಸೂಕ್ತ ಮಾರ್ಗಸೂಚಿ ರಚಿಸಲು ಸಿದ್ದತೆ ನಡೆಯುತ್ತಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಆಯೋಗ, ಈ ರೋಗದ ವರದಿ, ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಏಜೆನ್ಸಿ ಸ್ಥಾಪಿಸಲು ಮತ್ತು ಸಿಸಿಟಿವಿ ಅಳವಡಿಸಲು ನಿರ್ಧರಿಸಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+