Video: ಪ್ರಮಾಣವಚನ ಸ್ವೀಕರಿಸಲು ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದ ಮಂಡ್ಯ ಶಾಸಕ ರವಿ ಗಾಣಿಗ
ಬೆಂಗಳೂರು, ಮೇ 22: 2023ರ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ ಮೊದಲ ಅಧಿವೇಶನ ಆರಂಭಗೊಂಡಿದ್ದು, ನೂತನ ಶಾಸಕರೊಬ್ಬರು ಎತ್ತಿನ ಗಾಡಿಯಲ್ಲಿ ಆಗಮಿಸಿ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದರು.
ಸೋಮವಾರ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಶಾಸಕ ರವಿ ಗಾಣಿಗ ಸೋಮವಾರ ಎತ್ತಿನ ಬಂಡಿಯಲ್ಲಿ ಬೆಂಗಳೂರಿನ ವಿಧಾನಸೌಧಕ್ಕೆ ಆಗಮಿಸಿದರು. ಟಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ಶಾಸಕರು ಸ್ವತಃ ಎತ್ತಿನ ಗಾಡಿಯಲ್ಲಿ ಸವಾರಿ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

ಇತ್ತೀಚೆಗಷ್ಟೇ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆ ಎನಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರವನ್ನು 2,019 ಮತಗಳ ಅಂತರದಿಂದ ರವಿ ಗಾಣಿಗ ಗೆದ್ದಿದ್ದರು. ಅವರು 61,411 ಮತಗಳನ್ನು ಪಡೆದಿದ್ದರು. ಅವರ ಪ್ರತಿಸ್ಪರ್ಧಿ ಜೆಡಿ (ಎಸ್) ಬಿ ಆರ್ ರಾಮಚಂದ್ರ ಅವರು 59,392 ಮತಗಳನ್ನು ಪಡೆದಿದ್ದರು.
#WATCH | Bengaluru, Karnataka: Ravi Ganiga, Congress MLA of Mandya constituency arrives at Vidhana Soudha in a bullock cart pic.twitter.com/yv3xQqaEr3
— ANI (@ANI) May 22, 2023
ಸೋಮವಾರದಿಂದ ಮೂರು ದಿನಗಳ ಕಾಲ ವಿಧಾನಸಭಾ ಅಧಿವೇಶನ ನಡೆಯುತ್ತದೆ. ಈ ವೇಳೆ ನೂತನವಾಗಿ ಆಯ್ಕೆಯಾದ ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಇಂದು ಕಾಂಗ್ರೆಸ್ ಶಾಸಕ ರವಿ ಗಾಣಿಗ ವಿಧಾನಸೌಧದ ಕೆಂಗಲ್ ಗೇಟ್ ದ್ವಾರದ ಮುಖ್ಯ ಗೇಟ್ ಮೂಲಕ ಪಶ್ಚಿಮ ದ್ವಾರಕ್ಕೆ ಎತ್ತಿನ ಗಾಡಿಯಲ್ಲಿ ಆಗಮಿಸಿ ಗಮನಸೆಳೆದರು. ಎತ್ತಿಗಾಡಿಯ ಎರಡೂ ಬದಿಯಲ್ಲಿ ಕಬ್ಬುಗಳನ್ನು ಕಟ್ಟಿ ಸಿಂಗರಿಸಿದ್ದರು. ಶಾಸಕ ರವಿ ಗಾಣಿಗ ಹೆಗಲಿಗೆ ಹಸಿರು ಶಾಲು ಹೊದ್ದು ವಿಧಾನಸಭೆಗೆ ಆಗಮಿಸಿದರು.

ಬಳಿಕ ಮಾತನಾಡಿದ ಅವರು ಎತ್ತನಿಗಾಡಿ ಮಂಡ್ಯ ಜಿಲ್ಲೆಯ ಪ್ರತೀಕವಾಗಿದೆ. ಹೀಗಾಗಿ ಎತ್ತಿನಗಾಡಿ ಓಡಿಸುತ್ತಾ ವಿಧಾನಸೌಧಕ್ಕೆ ಆಗಮಿಸಿದ್ದೇನೆ. ನಮ್ಮ ಮಂಡ್ಯದ ಜನರ ಜೀವನಾಡಿ ಕಾವೇರಿ ಮತ್ತು ಕಬ್ಬಿಣ ಕಾರ್ಖಾನೆ. ಜಿಲ್ಲೆಯ ರೈತರ ಪರವಾಗಿ ಕಲಾಪದಲ್ಲಿ ಧ್ವನಿ ಎತ್ತುತ್ತೇನೆ ಎಂದು ರವಿಕುಮಾರ್ ಗೌಡ ಗಾಣಿಗ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಚನ್ನಗಿರಿ ಶಾಸಕ ಶಾಸಕ ಬಸವರಾಜ್ ಶಿವಗಂಗಾ ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರಿನ ಮೇಲೆ ಪ್ರಮಾಣ ಸ್ವೀಕಾರ ಮಾಡಿದ್ದರು. ಇದಕ್ಕೆ ಸದನದಲ್ಲಿ ಇತರೆ ಸದನದ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಕೂಡಲೆ ಗೊಂದಲ ಬಗೆಹರಿಸಿದ ಸ್ಪೀಕರ್, ವ್ಯಕ್ತಿ ಹೆಸರಿನ ಮೇಲೆ ಪ್ರಮಾಣ ಮಾಡಿಸದಂತೆ ವಿಧಾನಸಭೆ ಕಾರ್ಯದರ್ಶಿಗೆ ಸೂಚನೆ ನೀಡಿದರು.












Click it and Unblock the Notifications