ಎಸ್ಮಾಗೆ ಮೊದಲ ಬಲಿ, ಮಂಡ್ಯ ಪೇದೆ ರಾಮಕೃಷ್ಣ ಸಸ್ಪೆಂಡ್

Posted By:
Subscribe to Oneindia Kannada

ಮಂಡ್ಯ, ಜೂನ್ 05: ಎಸ್ಮಾ ಕಾಯ್ದೆ ಜಾರಿಗೊಳಿಸಿದ ಕರ್ನಾಟಕ ಸರ್ಕಾರ ಪೊಲೀಸರಿಗೆ ಶಿಸ್ತಿನ ಪಾಠ ಕಲಿಸಿದೆ. ಈ ನಡುವೆ ಪೊಲೀಸರ ಪರ ಏಕಾಂಗಿಯಾಗಿ ಹೋರಾಟಕ್ಕಿಳಿದ ಮಂಡ್ಯದ ಪೇದೆ ರಾಮಕೃಷ್ಣ ಅವರಿಗೆ ಅಮಾನತು ಆದೇಶ ಸಿಕ್ಕಿದೆ. ಇದೊಂದು ವೈಯಕ್ತಿಕ ದ್ವೇಷದ ಕ್ರಮವಾಗಿದ್ದು, ನಾನು ಕಾನೂನು ಹೋರಾಟ ನಡೆಸುವುದಾಗಿ ನೊಂದ ಪೇದೆ ರಾಮಕೃಷ್ಣ ಹೇಳಿದ್ದಾರೆ.

ಮಂಡ್ಯದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ್ದ ಡಿಸ್ಟ್ರಿಕ್ಟ್ ಆರ್ಮ್ಡ್ ರಿಸರ್ವ್ (ಡಿಎಆರ್) ಪೇದೆ ಎನ್.ರಾಮಕೃಷ್ಣ ಅವರು ಅಮಾನತುಗೊಂಡಿರುವ ನತದೃಷ್ಟ ಸಿಬ್ಬಂದಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಎಚ್ ಸುಧೀರ ಕುಮಾರ್ ರೆಡ್ಡಿ ಅವರು ರಾಮಕೃಷ್ಣ ಅವರನ್ನು ಸೇವೆಯಿಂದ ವಜಾ ಮಾಡಿ ಶನಿವಾರ ತಡರಾತ್ರಿ ಅದೇಶ ಹೊರಡಿಸಿದ್ದಾರೆ. [ಪೊಲೀಸರ 31 ಬೇಡಿಕೆಗಳು]

Mandya: District Armed Reserve constable Ramakrishna suspended

ಎಸ್​ಪಿ ಡಿಎಆರ್​ನ ಆರ್​ಪಿಐ ಎಆರ್​ಎಸ್​ಐ ಕಿರುಕುಳ ಖಂಡಿಸಿ ಅವರ ವರ್ಗಾವಣೆಗೆ ಆಗ್ರಹಿಸಿ ಪೇದೆ ರಾಮಕೃಷ್ಣ ಶನಿವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದರು. [ಮಂಡ್ಯ : ಸಿಗರೇಟ್ ಸೇದಿದ ಪೇದೆಗೆ ಅಮಾನತು ಶಿಕ್ಷೆ!]

ಕರ್ನಾಟಕದ ಪೊಲೀಸರು ಸಾಮೂಹಿಕ ರಜೆ ಹಾಕಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದರು. ಆದರೆ, ಇದಕ್ಕೂ ಮುನ್ನ ಕರ್ನಾಟಕ ಸರ್ಕಾರ ಎಸ್ಮಾ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಿ, ಪೊಲೀಸರ ಪ್ರತಿಭಟನೆಯನ್ನು ಹತ್ತಿಕ್ಕುವಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಯಶಸ್ವಿಯಾಗಿದೆ.[ಎಸ್ಮಾ ಎಂದರೇನು?]

ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ರನ್ನು ಗುರುವಾರವೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಶಶಿಧರ್ ವಿರುದ್ಧ ಎಸ್ಮಾ ಕಾಯ್ದೆ ಉಲ್ಲಂಘನೆ, ರಾಜ್ಯದ್ರೋಹದ ಆರೋಪ ಹೊರೆಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mandya:District Armed Reserve constable Ramakrishna was arrested for staging protest. Later SP CH Sudheer Kumar Reddy suspended him.
Please Wait while comments are loading...