ತಿರುಪತಿ ತಿಮ್ಮಪ್ಪನ ಅಭಿಷೇಕಕ್ಕೆ ಮಲ್ನಾಡ್ ಗಿಡ್ಡ ದೇಸಿತಳಿಯ ಹಾಲು

Posted By:
Subscribe to Oneindia Kannada

ಬೆಂಗಳೂರು, ಅ 25: ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವರ ಅಭಿಷೇಕಕ್ಕೆ ಇನ್ನು ಮಲ್ನಾಡ್ ಗಿಡ್ಡ ದೇಸಿತಳಿಯ ಹಾಲು ಬಳಕೆಯಾಗಲಿದೆ.

ಇದಕ್ಕಾಗಿ ರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದಿಂದ ಎರಡು ಹಸು ಮತ್ತು ಎರಡು ಕರುಗಳನ್ನು ರಾಘವೇಶ್ವರ ಶ್ರೀಗಳು ಬುಧವಾರ (ಅ 25) ಟಿಟಿಡಿ ಟ್ರಸ್ಟಿಗೆ ಹಸ್ತಾಂತರಿಸಿದರು.

Malnad cow milk will be used for Tirupati Balaji Abhishekha

ರಾಘವೇಶ್ವರ ಶ್ರೀಗಳ ದೋಷಮುಕ್ತ ತೀರ್ಪು: ಅನೈತಿಕ ಸಂಬಂಧದ ಉಲ್ಲೇಖವಿಲ್ಲ

ಭಾರತದ ಅಪೂರ್ವ ಗೋತಳಿಗಳ ಸಂರಕ್ಷಣೆ - ಸಂವರ್ಧನೆಯಲ್ಲಿ ಟಿಟಿಡಿ ಟ್ರಸ್ಟ್ ಮಹತ್ವದ ಪಾತ್ರ ವಹಿಸುತ್ತಿದ್ದು, ಇದು ಸಮಾಜದ ಇತರ ಸಂಘ ಸಂಸ್ಥೆಗಳಿಗೂ ಮಾದರಿ ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ಹೇಳಿದರು. ಶ್ರೀಗಳು ಈ ಸಂದರ್ಭದಲ್ಲಿ ಗೋಪೂಜೆ ನೆರವೇರಿಸಿ, ಟಿಟಿಡಿಗೆ ಗೋಗಳನ್ನು ಹಸ್ತಾಂತರಿಸಿದ್ದಾರೆ.

ಎರಡು ದಶಕಗಳಿಂದ ಗೋಸೇವೆಯಲ್ಲಿ ನಿರತರಾಗಿರುವ ಶ್ರೀಮಠಕ್ಕೆ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ವತಿಯಿಂದ ಓಂಗೋಲ್ ತಳಿಯ ಮೂರು ಗೋವು ಮತ್ತು ಎರಡು ಹೋರಿಗಳನ್ನು ನೀಡಲಾಯಿತು.

ತಿರುಪತಿ ದೇವಸ್ಥಾನದ ಗೋಶಾಲೆಗೆ ಕಾಸರಗೋಡು ಗಿಡ್ಡ ತಳಿಯ ಹಸುಗಳನ್ನು ಶ್ರೀಮಠದಿಂದ ಒದಗಿಸಿಕೊಡುವಂತೆ ಈ ಸಂದರ್ಭದಲ್ಲಿ ಟಿಟಿಡಿ ಪರವಾಗಿ ಅಶೋಕ್ ಮನವಿ ಮಾಡಿಕೊಂಡರು. ಶ್ರೀವಾರಿ ಗೋಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಹರಿನಾಥ್ ರೆಡ್ಡಿ, ಕಾಮದುಘಾ ವಿಭಾಗದ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Malnad cow milk will be used for Tirupati Balaji Abhishekha. Two cows and two calves has been handed over TTD by Raghaveshwara Seer of Ramachandrapura Math on Oct 25.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X