ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ದಿಟವೇ? ಎಷ್ಟಿದೆ ಚಾನ್ಸ್?

|
Google Oneindia Kannada News

ಬೆಂಗಳೂರು, ಸೆ. 28: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮಲ್ಲಿಕಾರ್ಜುನ ಖರ್ಗೆ ಹೆಸರು ಇತ್ತೀಚೆಗೆ ಬಲವಾಗಿ ಕೇಳಿಬರುತ್ತಿದೆ. ಪಕ್ಷ ಕೊಡುವ ಯಾವ ಜವಾಬ್ದಾರಿಯನ್ನೂ ತಳ್ಳಿಹಾಕದಷ್ಟು ನಿಷ್ಠಾವಂತ ನಾಯಕ ಮತ್ತು ಕಾರ್ಯಕರ್ತ ಎನಿಸಿರುವ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಸರ್ವಶಕ್ತ ಪಟ್ಟ ಅಲಂಕರಿಸಲು ಮಾನಸಿಕವಾಗಿ ಸಿದ್ಧವಾಗಿದ್ದಾರೆ.

ಪಿಟಿಐ ವರದಿ ಪ್ರಕಾರ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನದ ರೇಸ್‌ಗೆ ಕಾಲಿಡಲು ಯಾವ ಅಂಜಿಕೆಯೂ ಇಲ್ಲ. ಆದರೆ, ಇದಕ್ಕೆ ಸೋನಿಯಾ ಗಾಂಧಿ ಒಪ್ಪಿದಲ್ಲಿ ಮಾತ್ರ ಅವರು ಸ್ಪರ್ಧಿಸುತ್ತಾರೆ.

ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಭೇಟಿಯಾಗಿ ಭಾವುಕಳಾದ ಯುವತಿಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಭೇಟಿಯಾಗಿ ಭಾವುಕಳಾದ ಯುವತಿ

"ಪಕ್ಷ ಏನು ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ತಾನು ಬದ್ಧನಾಗಿರುವುದಾಗಿ ಸೋನಿಯಾ ಗಾಂಧಿ ಅವರಿಗೆ ಖರ್ಗೆ ತಿಳಿಸಿದ್ದಾರೆ" ಎಂದು ಅವರ ಆಪ್ತರೊಬ್ಬರು ಹೇಳಿದ್ದಾರೆ.

Mallikarjuna Kharge Ready To Join Race For AICC President Post If Sonia Gandhi Agrees

ಖರ್ಗೆ ಜನಪ್ರಿಯತೆ
ಇತ್ತೀಚಿನ ಕೆಲ ವರ್ಷಗಳವರೆಗೂ ಕರ್ನಾಟಕ ರಾಜಕಾರಣದಲ್ಲಿದ್ದ 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಈಗ ರಾಷ್ಟ್ರಮಟ್ಟದಲ್ಲಿ ಖ್ಯಾತರಾಗಿದ್ದಾರೆ. ವಿಪಕ್ಷ ನಾಯಕರಾಗಿ ಅವರ ಮೊನಚು ಮಾತುಗಳು ಬಹಳ ಮಂದಿಯ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮೊದಲಾದವರೂ ಖರ್ಗೆ ಮಾತುಗಳಿಗೆ ಗೌರವ ತೋರುತ್ತಾರೆ.

ಕಲಬರ್ಗಿ ಜಿಲ್ಲೆಯವರಾದ ಮಲ್ಲಿಕಾರ್ಜುನ ಖರ್ಗೆಗೆ ಹಿಂದಿ ಸಹಜವಾಗಿಯೇ ಬರುತ್ತದೆ. ಹೀಗಾಗಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅವರು ಹಿಂದಿಯಲ್ಲಿ ಉಗ್ರ ಭಾಷಣ ಮಾಡಲು ಸಾಧ್ಯವಾಗಿದೆ. ಉತ್ತರ ಭಾರತೀಯರಲ್ಲಿ ಅನೇಕರಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಹಿಂದಿ ಭಾಷೆ ಶೈಲಿ ಬಹಳ ಇಷ್ಟ ಎಂದು ಹೇಳಲಾಗುತ್ತದೆ.

ಆರ್‌ಎಸ್‌ಎಸ್ ಕೂಡ ಏಕೆ ಬ್ಯಾನ್ ಆಗಬಾರದು?: ಕೇಂದ್ರ ನಾಯಕರ ಪ್ರತಿಕ್ರಿಯೆ!ಆರ್‌ಎಸ್‌ಎಸ್ ಕೂಡ ಏಕೆ ಬ್ಯಾನ್ ಆಗಬಾರದು?: ಕೇಂದ್ರ ನಾಯಕರ ಪ್ರತಿಕ್ರಿಯೆ!

ಅದೇನೇ ಇರಲಿ, 13 ವರ್ಷಗಳಿಂದ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಮಲ್ಲಿಕಾರ್ಜು ಖರ್ಗೆ ಬಹಳಷ್ಟು ಮಂದಿಯ ಬೆಂಬಲವನ್ನಂತೂ ಸಂಪಾದಿಸಿದ್ಧಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಮೊದಲಾದ ನಾಯಕರ ಜೊತೆ ಖರ್ಗೆಗೆ ಉತ್ತಮ ಸಂಬಂಧ ಇದೆ.

Mallikarjuna Kharge Ready To Join Race For AICC President Post If Sonia Gandhi Agrees

ಮೇಲಾಗಿ ಗಾಂಧಿ ಕುಟುಂಬಕ್ಕೆ ಅವರದ್ದು ಪರಮ ನಿಷ್ಠೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂದಿ ಇಬ್ಬರ ಜೊತೆಯೂ ಖರ್ಗೆಗೆ ಒಳ್ಳೆಯ ಬಾಂಧವ್ಯ ಇದೆ. ರಾಹುಲ್ ಗಾಂಧಿಯೇ ಎಐಸಿಸಿ ಅಧ್ಯಕ್ಷರಾಗಲಿ ಎಂಬುದು ಖರ್ಗೆ ಮೊದಲಿಂದಲೂ ಮಾಡಿಕೊಳ್ಳುತ್ತಿರುವ ಮನವಿ. ಆದರೆ, ರಾಹುಲ್ ಗಾಂಧಿ ಅಧ್ಯಕ್ಷರಾಗಲು ಒಲ್ಲೆ ಎಂದಿದ್ದಾರೆ. ಈಗ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಎದ್ದಿದೆ.

ಸೆ. 30 ನಾಮಪತ್ರ ಸಲ್ಲಿಕೆಗೆ ಗಡುವು
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚು ಜನರ ಹೆಸರು ಚಾಲ್ತಿಯಲ್ಲಿಲ್ಲ. ಮೊನ್ನೆಯವರೆಗೂ ಅಶೋಕ್ ಗೆಹ್ಲೋಟ್ ಮತ್ತು ಶಶಿ ತರೂರ್ ಹೆಸರು ಲಿಸ್ಟ್‌ನಲ್ಲಿ ಇತ್ತು. ಅಶೋಕ್ ಗೆಹ್ಲೋತ್ ರಾಜಸ್ಥಾನದಲ್ಲಿ ತಮ್ಮ ಬೆಂಬಲಿಗ ಶಾಸಕರಿಂದ ಬ್ಲ್ಯಾಕ್‌ಮೇಲ್ ರಾಜಕಾರಣ ಮಾಡಿದ ಫಲವಾಗಿ ಎಐಸಿಸಿ ಅಧ್ಯಕ್ಷೀಯ ರೇಸ್‌ನಿಂದ ಹೊರಬಿದ್ದಿದ್ದಾರೆ.

ಶಶಿ ತರೂರ್ ಸ್ಪರ್ಧಿಸುವುದು ಖಚಿತವಾಗಿದೆ. ನಾಳೆ ಗುರುವಾರ ಅವರು ನಾಮಪತ್ರ ಸಲಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 30ರವರೆಗೆ ಗಡುವು ಇದೆ. ಅಂದರೆ ಇನ್ನೆರಡು ದಿನದಲ್ಲಿ ನಾಮಪತ್ರ ಸಲ್ಲಿಕೆಯಾಗಬೇಕು. ಈಗ ಮಲ್ಲಿಕಾರ್ಜುನ ಖರ್ಗೆ ಹೆಸರು ರೇಸ್‌ನಲ್ಲಿ ಕೇಳಿಬಂದಿದೆ. ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಲು ಸೋನಿಯಾ ಗಾಂಧಿ ಅನುಮತಿಸುವುದು ಖಚಿತ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್ 1ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ಅಕ್ಟೋಬರ್ 8ರವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶ ನೀಡಲಾಗಿದೆ. ಅಂದು ಸಂಜೆ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.

ಒಬ್ಬರಿಗಿಂತ ಹೆಚ್ಚು ಮಂದಿ ಸ್ಪರ್ಧಿಗಳಿದ್ದರೆ ಅಕ್ಟೋಬರ್ 17ರಂದು ಚುನಾವಣೆ ನಡೆಯುತ್ತದೆ. ಎರಡು ದಿನಗಳ ಬಳಿಕ, ಅಂದರೆ ಅಕ್ಟೋಬರ್ 19ರಂದು ಮತ ಎಣಿಕೆ ಆಗುತ್ತದೆ. ಅದೇ ದಿನ ಫಲಿತಾಂಶ ಪ್ರಕಟವಾಗುತ್ತದೆ.

ವಿವಿಧ ಕಾಂಗ್ರೆಸ್ ಪದಾಧಿಕಾರಿಗಳು ಎಐಸಿಸಿ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಕಾಂಗ್ರೆಸ್‌ನಲ್ಲಿ 9 ಸಾವಿರ ಸದಸ್ಯರು ಮತದಾನದ ಅರ್ಹತೆ ಹೊಂದಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Karnataka politician Mallikarjuna Kharge is said to be willing to contest in the AICC president elections, if Sonia Gandhi agrees for it, reports PTI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X