ಖರ್ಗೆ ಟ್ರಸ್ಟ್‌ನಿಂದಲೂ ನಿವೇಶನ ವಾಪಸ್‌! ಮುಡಾ ಕೇಸ್‌ನಿಂದ ಹೆದರಿದ್ರಾ ನಾಯಕರು?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣವು ರಾಜ್ಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ಇದು ಕೋರ್ಟ್‌ ಮೆಟ್ಟಿಲೇರಿದ ಬಳಿಕ ಸಿಎಂ ಸಿದ್ದರಾಮಯ್ಯ ಪತ್ನಿ ಅವರು ನಿವೇಶನಗಳನ್ನು ವಾಪಸ್‌ ನೀಡುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಖರ್ಗೆ ಕುಟುಂಬ ಕೂಡ ವಿವಾದದ ಸೈಟ್‌ ಹಿಂತಿರುಗಿಸಲು ಮುಂದಾಗಿದೆ.

ಕಾಂಗ್ರೆಸ್‌ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಸ್ಥರೇ ಟ್ರಸ್ಟಿಗಳಾಗಿರುವ ಸಿದ್ದಾರ್ಥ್ ವಿಹಾರ ಟ್ರಸ್ಟ್​ ಕೂಡ ಐದು ಎಕರೆ ವಿಸ್ತೀರ್ಣದ ಸಿಎ ನಿವೇಶವನ್ನು ಹಿಂತಿರುಗಿಸಲು ತೀರ್ಮಾನಿಸಿದೆ. ಈ ಬಗ್ಗೆ ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಮಾಹಿತಿ ನೀಡಿದ್ದಾರೆ.

Mallikarjun Kharge s Trust Has Also Decided To Return CA Sites

ಖರ್ಗೆ ಕುಟುಂಬದ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಕೆಐಎಡಿಬಿ ವತಿಯಿಂದ ಸಿಎ ಸೈಟ್‌ಗಳನ್ನು ಮಂಜೂರು ಮಾಡಲಾಗಿತ್ತು. ಈ ವಿಚಾರ ಕೂಡ ವಿವಾದಕ್ಕೆ ಸಿಲುಕಿ, ರಾಜ್ಯಪಾಲರ ಅಂಗಳ ತಲುಪಿತ್ತು. ಹಾಗಾಗಿ ಮುಂಜಾಗ್ರತೆಯಿಂದ ಆ ಸೈಟ್‌ಗಳನ್ನು ವಾಪಸ್ ನೀಡಲು ತೀರ್ಮಾನಿಸಲಾಗಿದೆ.

ಈ ಬಗ್ಗೆ ಇಂದು ಪ್ರೆಸ್‌ಮೀಟ್‌ನಲ್ಲಿ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಕೆಐಎಡಿಬಿ ಹಂಚಿಕೆ ಮಾಡಿದ್ದ ಭೂಮಿಯನ್ನು ವಾಪಸ್‌ ನೀಡಲು ನಿರ್ಧರಿಸಿದ್ದೇವೆ. ನಮ್ಮ ಟ್ರಸ್ಟ್‌ಗೆ ಕಾನೂನು ಬಾಹಿರವಾಗಿ ಸೈಟ್ ಹಂಚಿಕೆಯಾಗಿದೆ ಎನ್ನುವ ಆರೋಪ ಇತ್ತು. ಈ ಬಗ್ಗೆ ಟ್ರಸ್ಟ್ ಅಧ್ಯಕ್ಷರಿಗೆ ಸರಿಯಾದ ಮಾಹಿತಿ ಇರಲಿಲ್ಲ ಎಂದಿದ್ದಾರೆ.

Mallikarjun Kharge s Trust Has Also Decided To Return CA Sites

ನಮ್ಮ ಫ್ಯಾಮಿಲಿಯಲ್ಲಿ ಮೂರು ಮಂದಿಯಷ್ಟೇ ರಾಜಕಾರಣದಲ್ಲಿದ್ದೇವೆ. ನನ್ನ ಸಹೋದರ ತುಂಬಾ ಮೃದು ಸ್ವಭಾವದವರು. ಈ ವಿವಾದದಿಂದಾಗಿ ಕುಟುಂಬಸ್ಥರಿಗೆ ಬೇಸರ ಆಗಿದೆ ಎಂದು ಅವರ ನೊಂದಿದ್ದಾರೆ. ಹೀಗಾಗಿ ಸೈಟ್‌ಗಳನ್ನು ವಾಪಸ್‌ ನೀಡುವುದಾಗಿ ಕೆಐಎಡಿಬಿಗೆ ಪತ್ರ ಕೂಡ ಬರೆದಿದ್ದಾರೆ. ಸೈಟ್‌ಗಳನ್ನು ನಾವು ಕಾನೂನಾತ್ಮಕವಾಗಿಯೇ ವಾಪಸ್‌ ನೀಡುತ್ತಿದ್ದೇವೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ನಮ್ಮ ಟ್ರಸ್ಟ್‌ ಅಧ್ಯಕ್ಷರಾದ ರಾಹುಲ್‌ ಖರ್ಗೆ ಅವರಿಗೆ ಈ ಗೊಂದಲದ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಕೇಂದ್ರದಿಂದ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಸಂದಿವೆ. ಯುಪಿಎಸ್‌ಸಿಯಲ್ಲೂ ಅವರು ಅಭೂತಪೂರ್ವ ಸಾಧನೆ ಮಾಡಿದ್ದರು. ಅವರು ಎಲ್ಲರಂತೆ ಯುರೋಸ್ಪೇಸ್‌ನಲ್ಲಿ ಜಾಗ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಅದರಂತೆ ಸೈಟ್ ಕೂಡ ಅಲರ್ಟ್​​ ಆಗಿದೆ. ಇದರಲ್ಲಿ ತರಾತುರಿ ಏನಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Mallikarjun Kharge s Trust Has Also Decided To Return CA Sites

ಸಿಎ ಸೈಟ್ ಪಡೆಯುವ ಬಗ್ಗೆ ರಾಹುಲ್ ಖರ್ಗೆ ನಿರ್ಧರಿಸಿದ್ದರು. ಈಗ ಅವರೇ ಈ ಸೈಟ್‌ಗಳನ್ನು ವಾಪಸ್‌ ಕೊಡೋಣ ಎಂದಿದ್ದಾರೆ. ಬಹುತೇಕರಿಗೆ ನಮ್ಮ ಸಹೋದರ ರಾಹುಲ್ ಖರ್ಗೆ ಯಾರೂ ಅನ್ನೋದೆ ತಿಳಿದಿಲ್ಲ. ನಮ್ಮ ಕುಟುಂಬದಲ್ಲಿ ಅವರು ಬಹಳ ಶ್ರಮ ಪಟ್ಟು ವಿದ್ಯಾಭ್ಯಾಸ ಮಾಡಿದ್ದಾರೆ. ಈ ವಿವಾದ ರಾಜಕೀಯ ಆರೋಪವಷ್ಟೇ. ಇದರಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ರಾಹುಲ್‌ ಅವರಿಗೆ ರಾಜಕಾರಣವೂ ಅಷ್ಟಾಗಿ ಗೊತ್ತಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ರಾಹುಲ್ ಖರ್ಗೆ ತುಂಬಾ ಸೂಕ್ಷ್ಮ ಮನೋಭಾವದವರು. ಬಿಜೆಪಿ ಅವರು ಮನುಸ್ಮೃತಿ ಸ್ವಭಾವದವರು, ಬಿಜೆಪಿ ನಾಯಕರ ತಮ್ಮ ಮಕ್ಕಳನ್ನೇ ಆರ್‌ಎಸ್‌ಎಸ್‌ಗೆ ಕಳಿಸುವುದಿಲ್ಲ. ಆದರೆ, ನಮ್ಮ ಬಗ್ಗೆ ಆರೋಪಗಳನ್ನು ಮಾಡುತ್ತಿರುತ್ತಾರೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+