ಮಲ್ಲೇಶ್ವರ ಸಾಯಿ ಜ್ಯೂಸ್ ಸೆಂಟರ್ ಮಾಲೀಕನ ದೇಶ ಪ್ರೇಮ ರೋಚಕ ಸ್ಟೋರಿ
ಬೆಂಗಳೂರು, ಫೆ. 04: ನಮ್ಮ ಸಾಯಿ ಜ್ಯೂಸ್ ಸೆಂಟರ್‌ನಲ್ಲಿ ಭಾರತೀಯ ಯೋಧರು ಯಾವುದೇ ಹಣ ಪಾವತಿ ಮಾಡಬೇಕಿಲ್ಲ!. ಮಲ್ಲೇಶ್ವರದ ಗ್ರೌಂಡ್ ಸಮೀಪ ಇರುವ ಸಾಯಿ ಜ್ಯೂಸ್ ಸೆಂಟರ್ ಮುಂದೆ ಇಂತದ್ದೊಂದು ನಾಮ ಫಲಕ ಹಾಕಲಾಗಿದೆ. ಕೊಡಗು ಮೂಲದ ಯುವಕ ಈ ಜ್ಯೂಸ್ ಸೆಂಟರ್ ಮಾಲೀಕ. ಭಾರತೀಯ ಯೋಧರು ಈ ಜ್ಯೂಸ್ ಸೆಂಟರ್‌ನಲ್ಲಿ ಜ್ಯೂಸ್ ಕುಡಿದರೂ, ಚಹಾ, ಕಾಫಿ ಕುಡಿದರೂ ಐದು ಪೈಸೆ ಕೂಡ ತೆಗೆದುಕೊಳ್ಳುವುದಿಲ್ಲ. ಭಾರತೀಯ ಯೋಧರಿಗೆ ಇಂತಹ ಆಫರ್ ಕೊಡುವ ಮೂಲಕ ಕೊಡಗು ಮೂಲದ ಸಾಯಿ ಜ್ಯೂಸ್ ಸೆಂಟರ್ ಮಾಲೀಕ ತನ್ನ ದೇಶ ಪ್ರೇಮ ಮೆರೆದಿದ್ದಾನೆ.
ಮಲ್ಲೇಶ್ವರದ ಕ್ರೀಡಾಂಗಣ ಎಡ ಭಾಗದಲ್ಲಿ ಇರುವ ಈ ಸಾಯಿ ಜ್ಯೂಸ್ ಸೆಂಟರ್ ತುಂಬಾ ಚಿಕ್ಕದು. ಎಷ್ಟೇ ವಹಿವಾಟು ನಡೆದರೂ ಒಂದು ಕುಟುಂಬ ಕನಿಷ್ಠ ಜೀವನ ನಡೆಸುವಷ್ಟು ವಹಿವಾಟು ನಡೆಯುತ್ತದೆ. ಅದರಲ್ಲೂ ಕೊರೊನಾ ಬಳಕ ಜ್ಯೂಸ್ ಸೆಂಟರ್‌ಗಳಿಗೆ ವ್ಯಾಪಾರವೇ ಇಲ್ಲ. ಹೀಗಾಗಿ ಜ್ಯೂಸ್ ಸೆಂಟರ್ ಇಟ್ಟುಕೊಂಡಿರುವರು ಸಂಕಷ್ಟ ಎದುರಿಸುತ್ತಿದ್ದಾರೆ. ಇರುವ ಅಲ್ಪದರಲ್ಲೇ ಭಾರತೀಯ ಯೋಧರು ಸಾಯಿ ಜ್ಯೂಸ್ ಸೆಂಟರ್‌ನಲ್ಲಿ ಏನೇ ತೆಗೆದುಕೊಂಡರೂ ಹಣ ಕೊಡಬೇಕಾಗಿಲ್ಲ. ಈ ಕುರಿತು ಅಧಿಕೃತ ಫಲಕವನ್ನೇ ಹಾಕಲಾಗಿದ್ದು, ಅಂಗಡಿಗೆ ಹೋಗುವವರ ಗಮನ ಸೆಳೆಯುತ್ತಿದೆ.

ಈ ಕುರಿತು ಸಾಯಿ ಜ್ಯೂಸ್ ಸೆಂಟರ್ ಮಾಲೀಕರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿದಾಗ, ನಾವು ಇಲ್ಲಿ ಸುಖವಾಗಿದ್ದೇವೆ. ಅದಕ್ಕೆ ಕಾರಣ ನಮ್ಮ ಭಾರತೀಯ ಯೋಧರು. ಈ ಸೆಂಟರ್ ನಾನು ಪಡೆದ ದಿನದಿಂದ ಭಾರತೀಯ ಯೋಧರು ಏನೇ ತೆಗೆದುಕೊಂಡರೂ ಉಚಿತ. ನಾನು ಅವರಿಂದ ಹಣ ಪಡೆಯುವುದಿಲ್ಲ. ನಮ್ಮ ದೇಶದ ಬಗ್ಗೆ ನಾವು ಅಭಿಮಾನ ಮೆರೆಯದಿದ್ದರೇ ಬೇರೆ ಯಾರು ಮೆರೆಯಬೇಕು? ಯೋಧರ ಮೇಲಿನ ಪ್ರೀತಿಯಿಂದ ಸಾಯಿ ಜ್ಯೂಸ್ ಸೆಂಟರ್ ನಲ್ಲಿ ಅವರು ನಮ್ಮ ಸೆಂಟರ್‌ನಲ್ಲಿ ಏನೇ ತೆಗೆದುಕೊಂಡರೂ ಹಣ ಪಡೆಯುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕೊಡಗಿನ ಮೂಲದ ಸಾಯಿ ಜ್ಯೂಸ್ ಸೆಂಟರ್ ಮಾಲೀಕ ತನ್ನ ಹೆಸರು ಹೇಳಲು ಕೂಡ ನಿರಾಕರಿಸಿದರು. ನನ್ನ ಹೆಸರು ಏನಕ್ಕೆ ಬಿಡಿ. ನಾನು ಮಾಡಬೇಕು ಅಂದಿದ್ದನ್ನು ಮಾಡಿದ್ದೇನೆ. ಅದರಲ್ಲಿ ಏನೂ ವಿಶೇಷತೆ ಇಲ್ಲ ಎಂದು ನಗೆ ಬೀರಿದರು.

ನಿಮ್ಮದು ಪುಟ್ಟ ಜ್ಯೂಸ್ ಸೆಂಟರ್. ಇದರಲ್ಲಿ ಬರುವ ಹಣದಲ್ಲಿ ನೀವು ಜೀವನ ಮಾಡುವುದೇ ಕಷ್ಟ. ಅದರಲ್ಲಿಯೋಧರಿಗೆ ಉಚಿತ ಕೊಟ್ಟರೆ ಹೇಗೆ ಎಂದಾಗ, ಅಯ್ಯೋ ಯೋಧರ ಕಷ್ಟ, ತ್ಯಾಗದ ಮುಂದೆ ನಾವು ಶೂನ್ಯ ಅಲ್ಲವೇ ಎನ್ನುವ ಉತ್ತರ ಅವರಿಂದ ಬಂತು. ಅಂತೂ ಇರುವ ಅಲ್ಪದರಲ್ಲಿ ಯೋಧರ ಬಗ್ಗೆ ಅಭಿಮಾನ ಮೆರೆದು ಕೊಡಗು ಮೂಲದ ಈ ಯುವಕ ಮಾದರಿ ಎನಿಸಿದ್ದಾರೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications