ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 28: ಗೋವಾದ ಜೀವನದಿಯಾಗಿರುವ ಮಾಂಡೋವಿ-ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಮೂರು ದಶಕಗಳಿಗೂ ಅಧಿಕ ಕಥೆ ವ್ಯಥೆ ಇದೆ. ಮಹದಾಯಿ ಯೋಜನೆ ಕಾಲಾನುಕ್ರಮದಲ್ಲಿ ನಡೆದ ಬೆಳವಣಿಗೆಗಳತ್ತ ಅವಲೋಕನ ಇಲ್ಲಿದೆ.

ಕಳಸಾ ಬಂಡೂರಿ ನಾಲೆ ಕಾಮಗಾರಿಗೆ ಆಹ್ರಹಿಸಿ ಉತ್ತರ ಕರ್ನಾಟಕದ ರೈತರು ಮುಷ್ಕರ ನಿರತರಾಗಿ ವರ್ಷ ಕಳೆದಿದೆ. ಸರ್ಕಾರಗಳು ಬದಲಾದರೂ ಕುಡಿಯುವ ನೀರಿಗಾಗಿ ಹೋರಾಟ ನಿಂತಿಲ್ಲ, ಜನರ ದಾಹ ತೀರಿಲ್ಲ.

ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ 100 ಟಿಎಂಸಿಗೂ ಅಧಿಕ ನದಿ ನೀರಲ್ಲಿ 7.56 ಟಿಎಂಸಿ ಪಾಲು ಕೇಳಿದ ಕರ್ನಾಟಕಕ್ಕೆ ಮತ್ತೆ ಮತ್ತೆ ಮುಖಭಂಗವಾಗುತ್ತಿದೆ. ಜುಲೈ 27ರಂದು ಮಹಾದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪು ಕೂಡಾ ಆಘಾತ ತಂದಿದೆ. ಕಾನೂನು ಹೋರಾಟ, ರೈತರ ಪ್ರತಿಭಟನೆ, ಸಾರ್ವಜನಿಕರ ಅಸಹನೆ ಮುಂದುವರೆದಿದೆ.

ಬೆಳಗಾವಿ ಜಿಲ್ಲೆ ಭೀಮ್ ಘಡ ದ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಮಾಂಡೋವಿ (ಮಹದಾಯಿ) ನದಿ 77 ಕಿ.ಮೀ ಹರಿಯಲಿದ್ದು ಈ ಪೈಕಿ ಕರ್ನಾಟಕದಲ್ಲಿ 29 ಕಿ.ಮೀ ಹಾಗೂ 52 ಕಿ.ಮೀ ಗೋವಾದಲ್ಲಿ ಹರಿಯುತ್ತದೆ. ಆದರೆ, 200 ಟಿಎಂಸಿ ನೀರು ವ್ಯರ್ಥವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ.

Mahadayi water dispute Timeline

* 1978: ಮಹದಾಯಿ ಯೋಜನೆ ಸಿದ್ಧ

* 1980: ಎಸ್.ಆರ್.ಬೊಮ್ಮಾಯಿ ಆಯೋಗದಿಂದ ಯೋಜನೆ ಜಾರಿಗೆ ಸಲಹೆ

* 1988: ಕರ್ನಾಟಕ ಸರ್ಕಾರದ ಅನುಮೋದನೆ. ಆದರೆ ಗೋವಾ ಸರ್ಕಾರದ ವಿರೋಧದಿಂದ ತಡೆ.

* 1989: ಸಿಎಂ ಆಗಿದ್ದ ಎಸ್.ಆರ್.ಬೊಮ್ಮಾಯಿ ಅವರಿಂದ ಗೋವಾ ಸಿಎಂ ಪ್ರತಾಪ್​ಸಿಂಗ್ ರಾಣೆ ಜತೆ ಮಾತುಕತೆ ನಡೆಸಿದ ವೇಳೆ 45 ಟಿಎಂಸಿ ನೀರು ಬಳಸಲು ರಾಣೆ ಅನುಮತಿ

* 2000ರ ಜು.10: ಕಳಸಾ-ಬಂಡೂರಿ ನಾಲೆಗಳ ಯೋಜನೆಗೆ ರಾಜ್ಯ ಅರಣ್ಯ ಇಲಾಖೆಯಿಂದ ಪರಿಸರ ಕುರಿತು ಅನುಮತಿ

* 2000ರ ಆಗಸ್ಟ್ 22: ಬಂಡೂರಿ ನಾಲಾ ಯೋಜನೆ ಅಂದಾಜು ವೆಚ್ಚ 49.20 ಕೋಟಿ ರೂ., ಕಳಸಾ ನಾಲಾ ಯೋಜನೆ ಅಂದಾಜು ವೆಚ್ಚ 44.78 ಕೋಟಿ ರೂ.ಗೆ ಆಡಳಿತಾತ್ಮಕ ಒಪ್ಪಿಗೆ

* 2002: ಕೇಂದ್ರದ ಮಂಜೂರಾತಿ ಪಡೆದ ಕರ್ನಾಟಕ ಸರ್ಕಾರ ಕಾರ್ಯಪ್ರವೃತ್ತ

* 2002ರ ಏಪ್ರಿಲ್ 30: ಕಳಸಾ ಬಂಡೂರಿ ಕಣಿವೆಯಿಂದ 7.56 ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ಹರಿಸುವ ಕರ್ನಾಟಕದ ಯೋಜನೆಗೆ ಭಾರತ ಸರ್ಕಾರದ ಜಲಸಂಪನ್ಮೂಲ ಸಚಿವಾಲಯದಿಂದ ತಾತ್ವಿಕ ಒಪ್ಪಿಗೆ

* 2002ರ ಮೇ 5: ಗೋವಾ ತಕರಾರು

* 2002ರ ಜುಲೈ9: ನ್ಯಾಯಾಧಿಕರಣ ರಚಿಸಲು ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಗೋವಾ ಸರ್ಕಾರದಿಂದ ಪತ್ರ

* 2002ರ ಸೆಪ್ಟೆಂಬರ್ 19: ಯೋಜನೆ ಅನುಷ್ಠಾನಕ್ಕೆ ಕೇಂದ್ರ ಜಲ ಆಯೋಗ ನೀಡಿದ್ದ ತಾತ್ವಿಕ ಒಪ್ಪಿಗೆಗೆ ಜಲ ಆಯೋಗದಿಂದಲೇ ತಡೆ

* 2002ರ ಡಿಸೆಂಬರ್ 20: ಮಹದಾಯಿ ನೀರಿನ ವಿವಾದ ಕುರಿತು ರ್ಚಚಿಸಲು ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವರ ನೇತೃತ್ವದಲ್ಲಿ ಗೋವಾ ಹಾಗೂ ಕರ್ನಾಟಕ ಸಭೆ

* 2006ರ ಸೆಪ್ಟೆಂಬರ್ 22: ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಕೆ.ಎಸ್. ಈಶ್ವರಪ್ಪ ಅವರಿಂದ ಬೆಳಗಾವಿ ಜಿಲ್ಲೆ ಕಣಕುಂಬಿಯಲ್ಲಿ ಭೂಮಿಪೂಜೆ

* 2006ರ ನವೆಂಬರ್ 15: ಕರ್ನಾಟಕ ಸರ್ಕಾರದ ಯೋಜನೆಗೆ ತಡೆ ನೀಡುವಂತೆ ಗೋವಾ ಸರ್ಕಾರದಿಂದ ಸವೋಚ್ಚ ನ್ಯಾಯಾಲಯಕ್ಕೆ ಮನವಿ

* 2006ರ ನವೆಂಬರ್ 27: ಕಾಮಗಾರಿಗೆ ತಡೆ ನೀಡಲು ನಿರಾಕರಣೆ

* 2010: ಮಹದಾಯಿ ಜಲ ವಿವಾದ ನ್ಯಾಯಾಧಿಕರಣ ನೇಮಕ

* 2014: ನ್ಯಾಯಾಧಿಕರಣ ತಂಡ ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ

* 2015 ಜೂನ್​ನಿಂದ ಮತ್ತೆ ಜನರ ಹೋರಾಟ

* 2016 : ಗದಗ ನರಗುಂದ ಧಾರವಾಡದ ನವಲಗುಂದ ಸೇರಿದಂತೆ ರೈತರ ಪ್ರತಿಭಟನೆಗೆ ನೋವಿನ ವರ್ಷ.
* ಬಿಜೆಪಿಯ ಮಟ್ಟಣ್ಣನವರ್ ಅವರಿಂದ ನಾಲೆ ಒಡೆಯುವ ಬೆದರಿಕೆ, ವಿಡಿಯೋ ಬಿಡುಗಡೆ
* ಜುಲೈ 27: ನ್ಯಾಯಾಧೀಕರಣದಿಂದ ಕರ್ನಾಟಕದ ಮಧ್ಯಂತರ ಅರ್ಜಿ ತಿರಸ್ಕಾರ, ಜುಲೈ 28ರಂದು ಕರ್ನಾಟಕ ಬಂದ್.
(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mahadayi water dispute Timeline: In a major setback to Karnataka, Mahadayi river tribunal verdict on Wednesday, July 27 went against the state, while favouring Goa and Maharashtra.
Please Wait while comments are loading...