ಉತ್ತರ ಕರ್ನಾಟಕದಲ್ಲಿ ಭುಗಿಲೆದ್ದ ರೈತರ ಆಕ್ರೋಶ

Subscribe to Oneindia Kannada

ಹುಬ್ಬಳ್ಳಿ, ಜುಲೈ, 27: ಕರ್ನಾಟಕ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕಳಸಾ ಬಂಡೂರಿ ನ್ಯಾಯಾಧೀಕರಣದ ವಜಾ ಮಾಡುತ್ತಿದ್ದಂತೆ ಉತ್ತರ ಕರ್ನಾಟಕದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ.

ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ 7.65 ಟಿಎಂಸಿ ನೀರು ಬಳಕೆಗೆ ಅವಕಾಶ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಾಧೀಕರಣ ಪೀಠ ಬುಧವಾರ ತಿರಸ್ಕರಿಸಿದೆ. ಇದರ ಪರಿಣಾಮ ಹುಬ್ಬಳ್ಳಿ, ಧಾರವಾಡ, ಹಾವೇರಿ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ.[ಕರ್ನಾಟಕದ ಅರ್ಜಿ ತಿರಸ್ಕರಿಸಿದ ಮಹಾದಾಯಿ ನ್ಯಾಯ ಮಂಡಳಿ]

Mahadayi tribunal Verdict: Karnataka Bandh on July 28

ವಿಪಕ್ಷ ನಾಯಕ ಜಗದದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ ಸೇರಿದಂತೆ ಜನಪ್ರತಿನಿಧಿಗಳ ಮನೆಗೆ ರೈತರು ಮುತ್ತಿಗೆ ಹಾಕಲು ಆರಂಭಿಸಿದ್ದಾರೆ. ಎಲ್ಲಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

hubballi

ಬೆಳಗಾವಿ, ಹುಬ್ಬಳ್ಳಿ, ನರಗುಂದ, ಬೆಟಗೇರಿಯಲ್ಲಿ ರೈತರು ಬೀದಿಗಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಕನ್ನಡ ಪರ ಸಂಘಟನೆಗಳು ನಿಷೇಧಾಜ್ಞೆಯ ನಡುವೆಯೂ ಟಯರ್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಆರಂಭಿಸಿವೆ. ಗುರುವಾರ ಜುಲೈ 28 ರಂದು ಉತ್ತರಕರ್ನಾಟಕ ಬಂದ್ ಗೆ ಕಳಸಾ ಬಂಡೂರಿ ಹೋರಾಟ ಸಮಿತಿ ಕರೆ ನೀಡಿದ್ದರೆ, ರಾಜ್ಯ ರೈತ ಸಂಘ ಕರ್ನಾಟಕ ಬಂದ್ ಗೆ ಕರೆ ನೀಡಿದೆ.[ಏನಿದು ಕಳಸಾ ಬಂಡೂರಿ ಯೋಜನೆ]

hubballi

ಪ್ರತಿಭಟನೆ ಕಾವು ಹೇಗಿತ್ತು? ವಿಡಿಯೋ ನೋಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahadayi Water Disputes Tribunal on Wednesday rejected the Karnataka government interim petition seeking permission to utilize 7 TMC feet of water for drinking water purposes. After this verdict North Karnataka turned to violent. Kannada organizations called for Karnataka Bandh on 28, July, 2016
Please Wait while comments are loading...