ಮಹದಾಯಿ ಹೋರಾಟ : 15 ಕಾರ್ಯಕರ್ತರಿಗೆ ಜಾಮೀನು

Posted By:
Subscribe to Oneindia Kannada

ಗದಗ, ಆಗಸ್ಟ್ 19 : ಮಹದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸುವಾಗ ಬಂಧಿತರಾಗಿದ್ದ 15 ಮಂದಿ ಶ್ರೀರಾಮಸೇನೆ ಕಾರ್ಯಕರ್ತರಿಗೆ ಜಾಮೀನು ಸಿಕ್ಕಿದೆ. ಶುಕ್ರವಾರ ಅವರು ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಬಳ್ಳಾರಿ ಕಾಗಾಗೃಹದಲ್ಲಿದ್ದ 16 ಕಾರ್ಯಕರ್ತರನ್ನು ಗುರುವಾರ ಗದಗದ ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಇವರಲ್ಲಿ 15 ಕಾರ್ಯಕರ್ತರಿಗೆ ನ್ಯಾಯಾಧೀಶೆ ಕೆ.ಲತಾ ಅವರು ಜಾಮೀನು ಮಂಜೂರು ಮಾಡಿದರು.[ಆಗಸ್ಟ್ 27ರಂದು ಕರ್ನಾಟಕದಲ್ಲಿ ರೈಲು ಸಂಚಾರವಿಲ್ಲ]

mahadayi

ಆದರೆ, ಅಡ್ಡ ಹೆಸರಿನ ಗೊಂದಲದ ಕಾರಣದಿಂದ ಒಬ್ಬರಿಗೆ ಜಾಮೀನು ನಿರಾಕರಿಸಲಾಯಿತು. ಪುನಃ ಪೊಲೀಸರು ಎಲ್ಲರನ್ನು ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋಗಿದ್ದು, ಶುಕ್ರವಾರ ಅವರನ್ನು ಬಿಡುಗಡೆ ಮಾಡಲಾಗುತ್ತದೆ.[ಜೈಲಿನಿಂದ ಬಿಡುಗಡೆಯಾದ ರೈತರು ಹೇಳಿದ್ದೇನು?]

ಜಾಮೀನಿನ ಭರವಸೆ : ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಬಂಧಿತರಾಗಿರುವ ರೈತರು ಮತ್ತು ಕನ್ನಡ ಪರ ಸಂಘಟನೆಗಳ ಸದಸ್ಯರಿಗೆ ಜಾಮೀನು ಪಡೆಯಲು ಸಹಕಾರ ನೀಡುವುದಾಗಿ ಸರ್ಕಾರ ಹೇಳಿತ್ತು.

ಪತ್ರಿಭಟನೆ ವೇಳೆ ಬಂಧಿತರಾಗಿದ್ದ 179 ರೈತರಿಗೆ ಆಗಸ್ಟ್ 12ರಂದು ಜಾಮೀನು ನೀಡಲಾಗಿತ್ತು. ಧಾರವಾಡ ಜಿಲ್ಲಾ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ನೀಡಿದ ಬಳಿಕ ಚಿತ್ರದುರ್ಗ, ಬಳ್ಳಾರಿ ಜೈಲುಗಳಿಂದ ರೈತರನ್ನು ಬಿಡುಗಡೆ ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gadag court granted bail for 15 Sri Ram Sena activists arrested during the protest against the Mahadayi verdict. Activists will released form Ballari central jail on August 19, 2016.
Please Wait while comments are loading...