ಮಹದಾಯಿ ಪ್ರತಿಭಟನೆ, ಯಡಿಯೂರಪ್ಪ ಇನ್ನೂ ಬಂದಿಲ್ಲ

Posted By: Gururaj
Subscribe to Oneindia Kannada

ಬೆಂಗಳೂರು, ಡಿಸೆಂಬರ್ 25 : ಮಹದಾಯಿ ಹೋರಾಟಗಾರರ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದೆ. ಕೊರೆಯುವ ಚಳಿಯನ್ನು ಲೆಕ್ಕಿಸದೇ ನೂರಾರು ರೈತರು ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಧರಣಿ ನಡೆಸುತ್ತಿದ್ದಾರೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾನಿರತ ರೈತರು ಪಟ್ಟು ಹಿಡಿದಿದ್ದಾರೆ. ಯಾವ ಬಿಜೆಪಿ ನಾಯಕರ ಮನವಿಗೂ ಅವರು ಸ್ಪಂದಿಸುತ್ತಿಲ್ಲ.

ಹೋರಾಟ 2ನೇ ದಿನ : ಬಿಎಸ್‌ವೈ ಆಗಮನಕ್ಕೆ ಪಟ್ಟು

Mahadayi issue : Farmers protest in Bengaluru enters 3rd day

ಬಿ.ಎಸ್.ಯಡಿಯೂರಪ್ಪ ಅವರು ಹಾವೇರಿ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಬ್ಯುಸಿಯಾಗಿದ್ದು, ರೈತರು ಮೂರು ದಿನಗಳಿಂದ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸ್ಥಳಕ್ಕೆ ಆಗಮಿಸಿಲ್ಲ.

ಮಹದಾಯಿ ವಿವಾದ: ಗೋವಾ ಸಿಎಂಗೆ ಮತ್ತೊಮ್ಮೆ ಸಿದ್ದು ಪತ್ರ

'ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಸಿದ್ಧ ಎಂದು ಹೇಳಿದ್ದ ಯಡಿಯೂರಪ್ಪ ಬೆಳಗ್ಗೆ ಒಂದು ಬಣ್ಣ, ಸಂಜೆಗೆ ಒಂದು ಬಣ್ಣ ಬದಲಿಸುವ ನಾಟಕವಾಡುತ್ತಿದ್ದಾರೆ. ಹೀಗಾಗಿ ಅವರ ಪುಣ್ಯತಿಥಿ ಮಾಡುವ ಕಾಲ ಬಂದಿದೆ' ಎಂದು ಧಾರವಾಡದ ರೇವಣ ಸಿದ್ದೇಶ್ವರ ಮಠದ ಬಸವರಾಜ ದೇವರು ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಬೆಂಬಲಕ್ಕೆ ನಿಂತ ಜನಸಾಮಾನ್ಯರ ವೇದಿಕೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than 300 farmers including several women protesting outside the Bharatiya Janata Party (BJP) office at Malleswaram, Bengaluru. Protest entered for 3rd day farmers demanding for Yeddyurappa should visit to place.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ