ಗಂಜಾಂ ಬಳಿ ಜೀವನದಿ ಕಾವೇರಿಗೆ ಇಂದು ಸಂಜೆ ಮಹಾ ಆರತಿ
ಮಂಡ್ಯ, ಜೂನ್ 12: ಶ್ರೀರಂಗಪಟ್ಟಣ ಬಳಿ ಇಂದು ಜೀವನದಿ ಕಾವೇರಿಗೆ ಮಹಾ ಆರತಿ ನೆರವೇರಲಿದೆ.
ಕಾವೇರಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ಗುರಿಯೊಂದಿಗೆ ಜತೆಗೆ ನದಿಯ ಬಗ್ಗೆ ಜನರಲ್ಲಿ ಶ್ರದ್ಧಾಭಾವ ಮೂಡಿಸುವ ಸಲುವಾಗಿ ಗಂಜಾಂ ಶ್ರೀರಂಗಪಟ್ಟಣದ ಶ್ರೀಶಂಕರ ಪರಮಾನಂದ ಟ್ರಸ್ಟಿನ ಸ್ವಾಮಿ ಗಣೇಶ ಸ್ವರೂಪಾನಂದ ಗಿರಿ ಅವರು ನದಿಗೆ ಈ ಮಹಾ ಆರತಿ ಸಲ್ಲಿಸಲಿದ್ದಾರೆ.
ಲಲಿತಾ ಸಹಸ್ರನಾಮದ ಬಳಿಕ ಕಾವೇರಿ ಮಾತೆಗೆ ಹುಣ್ಣಿಮೆ ಆರತಿ:

ಶ್ರೀರಂಗಪಟ್ಟಣದ ನಾರಾಯಣ ಆಶ್ರಮದ ಶ್ರೀ ವಿಠಲತೀರ್ಥ ಸ್ವಾಮೀಜಿ, ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಬೋಧಸ್ವರೂಪಾನಂದ ಮಹಾರಾಜ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ.
ಕಾವೇರಿ ನದಿಯನ್ನು ಮಾಲಿನ್ಯ ಮುಕ್ತಗೊಳಿಸಿ, ಪಾವಿತ್ರ್ಯತೆ ಉಳಿಸಿಕೊಳ್ಳಲು ಜನರನ್ನು ಜಾಗೃತಗೊಳಿಸಬೇಕು ಎಂಬ ಉದ್ದೇಶದಿಂದ ಈ ಮುಂಚೆ ಕರ್ನಾಟಕ-ತಮಿಳುನಾಡು ಭಾಗದ ಕಾವೇರಿ ತೀರ ಪ್ರದೇಶದಲ್ಲಿ ಮಾತೆ ಕಾವೇರಿ ತೀರ್ಥಯಾತ್ರೆ ನಡೆಸಿರುವ ಸ್ವಾಮೀಜಿ, ಪ್ರತಿ ಹುಣ್ಣಿಮೆಯಂದು ಕಾವೇರಿ ನದಿಗೆ ಮಹಾ ಆರತಿ ನೆರವೇರಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 94800 32015 ಸಂಖ್ಯೆಯನ್ನು ಸಂಪರ್ಕಿಸಬಹುದು.












Click it and Unblock the Notifications