'ಕುಮಾರಸ್ವಾಮಿ ಅವರಿಗೆ ನಿಜವಾದ ಶನಿ ರೇವಣ್ಣ'

Posted By:
Subscribe to Oneindia Kannada

ಬೆಂಗಳೂರು, ಜೂನ್ 13 : 'ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಿಜವಾದ ಶನಿ ಅವರ ಸಹೋದರ ಎಚ್.ಡಿ.ರೇವಣ್ಣ' ಎಂದು ಜೆಡಿಎಸ್‌ನಿಂದ ಅಮಾನತುಗೊಂಡಿರುವ ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ ತಿರುಗೇಟು ಕೊಟ್ಟರು. [ಶನಿಕಾಟ ಶುರುವಾದರೆ ಆಗೋದು ಹೀಗೆ!]

ಸೋಮವಾರ ಗೋಲ್ಡ್ ಫಿಂಜ್ ಹೋಟೆಲ್‌ನಲ್ಲಿ ಚೆಲುವರಾಯಸ್ವಾಮಿ ಅವರ ಜೊತೆ ಬಾಲಕೃಷ್ಣ ಅವರು ಪತ್ರಿಕಾಗೋಷ್ಠಿ ನಡೆಸಿದರು. 'ಜೆಡಿಎಸ್‌ಗೆ ಅಮರಿದ್ದ ಶನಿಗಳನ್ನು ಕಾಂಗ್ರೆಸ್‌ಗೆ ಟ್ರಾನ್ಸ್‌ಫರ್ ಮಾಡಿದ್ದೇವೆ' ಎಂದು ಭಾನುವಾರ ಹೇಳಿದ್ದ ರೇವಣ್ಣ ಅವರ ವಿರುದ್ಧ ವಾಗ್ದಾಳಿ ನಡೆಸಿದರು. [ಚೆಲುವರಾಯಸ್ವಾಮಿ ಹೇಳಿದ್ದೇನು?]

hc balakrishna

'ರಾಜ್ಯಸಭೆ ಚುನಾವಣೆಯಲ್ಲಿ ರೇವಣ್ಣ ಅವರು ಹಣ ಪಡೆದಿಲ್ಲವೇ? ಎಂದು ಪ್ರಶ್ನಿಸಿದ ಬಾಲಕೃಷ್ಣ ಅವರು, ಇಲ್ಲಿಯವರೆಗೆ ಹಣ ಪಡೆದಿಲ್ಲ ಎಂದು ರೇವಣ್ಣ ಆಣೆ ಮಾಡಲಿ' ಎಂದು ಸವಾಲು ಹಾಕಿದರು. 'ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ' ಎಂದು ಸಲಹೆ ಕೊಟ್ಟರು. [8 ಶಾಸಕರ ಅಮಾನತು ಮುಂದೇನು?]

'ಎಚ್ಡಿಕೆಯನ್ನು ನಮ್ಮ ಕೈಗೆ ಕೊಡಿ' : 'ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೇ ಕುಮಾರಸ್ವಾಮಿ ಅವರನ್ನು ಬೆಳೆಯಲು ಬಿಡುತ್ತಿಲ್ಲ. ಮಗ ಬಲಿಷ್ಠನಾದರೆ ನಾನು ವೀಕ್ ಆಗುವೆ ಎಂಬ ಭಯ ಗೌಡರಿಗಿದೆ. ಕುಮಾರಸ್ವಾಮಿ ಅವರನ್ನು ನಮ್ಮ ಕೈಗೆ ಕೊಡಿ 2018ರಲ್ಲಿ ಅವರನ್ನು ನಾವು ಮುಖ್ಯಮಂತ್ರಿ ಮಾಡುತ್ತೇವೆ' ಎಂದು ಬಾಲಕೃಷ್ಣ ಹೇಳಿದರು. [8 ಭಿನ್ನಮತೀಯ ಶಾಸಕರಿಗೆ ಅಮಾನತು ಶಿಕ್ಷೆ]

'ಗೌಡರಿಗಾಗಿ ಜೆಡಿಎಸ್‌ಗೆ ಬಂದೆ' : 'ನಾನು ಸದಾನಂದ ಗೌಡ ಮತ್ತು ಶೆಟ್ಟರ್ ಅವರ ಸಮಕಾಲೀನ ರಾಜಕಾರಣಿ. ಬಿಜೆಪಿಯಲ್ಲಿದ್ದರೆ ಇಂದು ನಾನು ಹಿರಿಯ ನಾಯಕನಾಗುತ್ತಿದ್ದೆ. ಆದರೆ, ದೇವೇಗೌಡರಿಗಾಗಿ ನಾನು ಬಿಜೆಪಿ ತೊರೆದು ಜೆಡಿಎಸ್‌ಗೆ ಬಂದೆ' ಎಂದರು.

'ಎಚ್ಚರಿಕೆ ನೀಡಿದ್ದೆ' : 'ಹಿಂದೆ ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡಿ ಎಂದು ನಾನೇ ಹೇಳಿದ್ದೆ. ನೀವು ಕೊಡದಿದ್ದರೆ ಜನರೇ ಅಧಿಕಾರ ಕೊಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದೆ. ಆದರೆ, ನನ್ನ ಮಾತು ಕೇಳಲಿಲ್ಲ. ಯಡಿಯೂರಪ್ಪ ಅವರು ಸಚಿವ ಸ್ಥಾನ ಕೊಡುತ್ತೇನೆ ಬಾ ಎಂದರು. ಆದರೆ, ಕುಮಾರಸ್ವಾಮಿ ಅವರಿಗಾಗಿ ನಾನು ಹೋಗಲಿಲ್ಲ' ಎಂದು ಬಾಲಕೃಷ್ಣ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Magadi MLA HC Balakrishna slammed JDS leader HD Revanna who called eight rebels as 'Shanis'. On Sunday Revanna said, Shani kata has now been transferred to the Congress. JDS suspended HC Balakrishna for voting for Congress candidate.
Please Wait while comments are loading...