ಮಗನ ಶವದೊಂದಿಗೆ ರಾತ್ರಿ ಕಳೆದ ತಾಯಿ..!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜೂನ್ 28 : ಹೆಂಡತಿ ಮಕ್ಕಳನ್ನು ಬಿಟ್ಟು ಹೋದ ವ್ಯಕ್ತಿಯೊಬ್ಬ ಮಗನ ಶವವನ್ನು ಮನೆಗೆ ತರಲು ಅವಕಾಶ ನೀಡದ ಕಾರಣ, ತಾಯಿ ಮಗನ ಶವದ ಜೊತೆ ರಾತ್ರಿ ಕಳೆದ ಮನಮಿಡಿಯುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ತಂದೆ ಬಿಟ್ಟು ಹೋದರೂ ಮನೆಯ ಜವಬ್ದಾರಿ ಹೊತ್ತಿದ್ದ ಮಗ ಲೋಹಿತ್ (22) ಬಸ್ಸಿನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದರು. ಬಾಡಿಗೆ ಮನೆಯಲ್ಲಿದ್ದುಕೊಂಡು ತಾಯಿ, ತಂಗಿಯನ್ನು ಸಾಕುತ್ತಿದ್ದರು. ಸೋಮವಾರ ಕಾರ್ಯನಿರ್ವಹಿಸುತ್ತಿದ್ದ ಆಕಸ್ಮಿಕವಾಗಿ ಜಾರಿ ಬಿದ್ದು ಲೋಹಿತ್ ಮೃತಪಟ್ಟಿದ್ದರು. [ಮಾನವೀಯತೆ ಮರೆತ ಜನರಿಗೆ ಏನು ಹೇಳಬೇಕು?]

madikeri

ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಆತನಿದ್ದ ಬಾಡಿಗೆ ಮನೆಗೆ ತಾಯಿ ಮತ್ತು ತಂಗಿ ರಾತ್ರಿ 11ಗಂಟೆ ವೇಳೆಗೆ ತೆಗೆದುಕೊಂಡು ಹೋದರು. ಆದರೆ, ಮನೆಯ ಮಾಲೀಕ ಶವವನ್ನು ಒಳಗೆ ಇಡಲು ಒಪ್ಪಿಗೆ ನೀಡಲಿಲ್ಲ. ['ಹೃದಯ'ವಂತೆ ರೀನಾ ಸಮಾಜ ಸೇವಾ ಸಂಸ್ಥೆಗೆ 5 ವರ್ಷ]

ತಂದೆ ಹೆಬ್ಬಾಲೆ ಎಂಬ ಪ್ರದೇಶದಲ್ಲಿದ್ದ. ಅಲ್ಲಿಗೆ ಮಗನ ಶವವನ್ನು ತೆಗೆದುಕೊಂಡು ಹೋಗಲು ಆತ ಒಪ್ಪಿಗೆ ನೀಡಲಿಲ್ಲ. ಆದ್ದರಿಂದ, ಲೋಹಿತ್ ತಾಯಿ ಮತ್ತು ತಂಗಿ ಶವವನ್ನು ಆಂಬ್ಯುಲೆನ್ಸ್‌ನಲ್ಲಿಟ್ಟುಕೊಂಡು ರಾತ್ರಿ ಕಳೆದಿದ್ದಾರೆ. ಮಂಗಳವಾರ ಈ ವಿಷಯ ತಿಳಿದ ಕೆಲವು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮನೆ ಮಾಲೀಕನ ಮನವೊಲಿಸಿ ಸ್ವಲ್ಪ ಸಮಯದವರೆಗೆ ಮೃತದೇಹವನ್ನು ಮನೆಯಲ್ಲಿಡಲು ವ್ಯವಸ್ಥೆ ಮಾಡಿದರು. [ಅಮ್ಮಾ ನೀನೇಕೆ ಅಷ್ಟೊಂದು ಕ್ರೂರಿಯಾದೆ?]

death

ನಂತರ ಬಸ್ ಮಾಲೀಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಲೋಹಿತ್‌ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಯಿತು. ಲೋಹಿತ್ ತಂದೆ 4 ವರ್ಷಗಳ ಹಿಂದೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ತೊರೆದು ಹೆಬ್ಬಾಲೆಯಲ್ಲಿ ನೆಲೆಸಿದ್ದ. ಮಾನವೀಯತೆ ಮರೆತ ಆತನಿಗೆ ಸಾರ್ವಜನಿಕರು ಹಿಡಿಶಾಪ ಹಾಕಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mother spend a night with the son dead body after her husband refused to kept body at house. Incident reported at Madikeri, Karnataka. Last writes of Lohit who dyed in accident held on June 28 with the help of villagers.
Please Wait while comments are loading...