• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪತ್ರಕರ್ತರಿಗಾಗಿ 'ಮಾಧ್ಯಮ ಸಂಜೀವಿನಿ' ಯೋಜನೆಗೆ ಸರ್ಕಾರ ಆದೇಶ

|
   ಪತ್ರಕರ್ತರಿಗಾಗಿ 'ಮಾಧ್ಯಮ ಸಂಜೀವಿನಿ' ಯೋಜನೆಗೆ ಸರ್ಕಾರ ಆದೇಶ | Oneindia Kannada

   ಬೆಂಗಳೂರು, ಸೆಪ್ಟೆಂಬರ್ 25: ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಘೋಷಿಸಿದ್ದ "ಮಾಧ್ಯಮ ಸಂಜೀವಿನಿ" ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

   ಪತ್ರಕರ್ತರು ವೃತ್ತಿನಿರತ ಕೆಲಸಗಳ ವೇಳೆ ಅಪಘಾತಕ್ಕೆ ಒಳಗಾದರೆ ಇಲ್ಲವೆ ಇನ್ನಿತರೆ ಅವಘಡಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಅವರುಗಳ ಕುಟುಂಬದವರಿಗೆ ರೂ.5.00 ಲಕ್ಷ ವರೆಗಿನ ಜೀವ ವಿಮೆ ಖಾತರಿ ನೀಡಲಿರುವ "ಮಾಧ್ಯಮ ಸಂಜೀವಿನಿ" ಸಮೂಹ ಜೀವವಿಮೆ ಸೌಲಭ್ಯವನ್ನು ಪತ್ರಕರ್ತರಿಗೆ ಕಲ್ಪಿಸಲಾಗುವುದು.

   ಕೊಡಗಿನ ಪ್ರವಾಹದಲ್ಲಿ ಪತ್ರಕರ್ತರ ಮನೆಗಳೇ ಕೊಚ್ಚಿಹೋಗಿವೆ

   ಮಾಧ್ಯಮ ಸಂಜೀವಿನಿ ಯೋಜನೆಯಡಿ ಪತ್ರಕರ್ತರಿಗೆ ರೂ. 5.00 ಲಕ್ಷ ವರೆಗಿನ ಜೀವವಿಮೆ ಸೌಲಭ್ಯದ ಖಾತ್ರಿ ನೀಡಲಾಗುವುದು. ಈ ವಿಮೆ ಕಂತುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಭರಿಸಲಾಗುವುದು.

   ಕಾಂಪೀಟ್ ವಿತ್ ಚೈನಾ ಯೋಜನೆ: ಈ ವರ್ಷ 500 ಕೋಟಿ ಅನುದಾನ

   ಸಿದ್ದರಾಮಯ್ಯ ಅವರ ಅವಧಿಯಲ್ಲಿಯೇ ಈ ಯೋಜನೆಯನ್ನು ಘೋಷಿಸಲಾಗಿತ್ತು. ಆದರೆ ಈ ಅವಧಿಯಿಂದ ಜಾರಿಗೆ ಬಂದಿದೆ. ರಾಜ್ಯದಲ್ಲಿ ಇರುವ ಸಾವಿರಾರು ಮಂದಿ ಪತ್ರಕರ್ತರಲ್ಲಿ ಕೇವಲ ಕೆಲವೇ ಮಂದಿಗೆ ವಿಮೆ ಸೌಲಭ್ಯ ಸಿಗುತ್ತಿರುವುದು ಶೋಚನೀಯ.

   ಆಧಾರ್ ಕಡ್ಡಾಯವಾಗುವುದೇ?: ಸೆ.26 ರಂದು ಅಂತಿಮ ತೀರ್ಪು

   60 ವರ್ಷ ವಯಸ್ಸಿನವರಿಗೆ ಸೌಲಭ್ಯ ಪಡೆಯಬಹುದು

   60 ವರ್ಷ ವಯಸ್ಸಿನವರಿಗೆ ಸೌಲಭ್ಯ ಪಡೆಯಬಹುದು

   ಕಾರ್ಯನಿರತ ಪತ್ರಕರ್ತರು ತಮ್ಮ 60 ವರ್ಷ ವಯಸ್ಸಿನವರಿಗೆ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಈ ಯೋಜನೆಯಿಂದ ರಾಜ್ಯದಾದ್ಯಂತ ಪ್ರಸ್ತುತ ಇರುವ 2065 ಮಾನ್ಯತೆ ಪಡೆದ ಪತ್ರಕರ್ತರು ಪ್ರಯೋಜನೆ ಪಡೆದುಕೊಳ್ಳಲಿದ್ದಾರೆ. ಈ ಯೋಜನೆಯನ್ನು ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ನಿಯಮ 1999/2000 ರಡಿ ಟೆಂಡರ್ ಆಹ್ವಾನಿಸಿ ಕ್ರಮ ವಹಿಸಲಾಗುವುದು.

   25 ರಿಂದ 60 ವರ್ಷದ ಪತ್ರಕರ್ತರಿಗೆ ಸೌಲಭ್ಯ

   25 ರಿಂದ 60 ವರ್ಷದ ಪತ್ರಕರ್ತರಿಗೆ ಸೌಲಭ್ಯ

   ಪತ್ರಕರ್ತರು ಇಲಾಖೆಯಿಂದ ಮಾನ್ಯತೆ ಪತ್ರವನ್ನು ಪಡೆದಿರಬೇಕು. 25 ವರ್ಷದಿಂದ 60 ನೇ ವಯಸ್ಸಿನವರೆಗೆ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಪತ್ರಕರ್ತರು ವೃತ್ತಿ ನಿರತ ಕೆಲಸದ ಮೇಲೆ ಅಪಘಾತಕ್ಕೆ ಒಳಗಾಗದರೆ ಅಥವಾ ಗಂಭೀರ ಮತ್ತು ಇನ್ನಿತರೆ ಮಾರಣಾಂತಿಕ ಕಾಯಿಲೆಗಳಿಂದ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

   ಸೌಲಭ್ಯ ಪಡೆಯಲು ನೀಡಬೇಕಾದ ದಾಖಲೆ

   ಸೌಲಭ್ಯ ಪಡೆಯಲು ನೀಡಬೇಕಾದ ದಾಖಲೆ

   ವಿಮಾ ಸೌಲಭ್ಯ ಪಡೆಯಲು ನಾಮ ನಿರ್ದೇಶಿತ ವ್ಯಕ್ತಿಯು ಕಂದಾಯ ಇಲಾಖೆಯಿಂದ ಕುಟುಂಬ ಅವಲಂಬಿತ ಪ್ರಮಾಣ ಪತ್ರವನ್ನು ಪಡೆದು ವಿಮಾ ಸಂಸ್ಥೆಗೆ ಸಲ್ಲಿಸಬೇಕು. ಕಾರ್ಯ ನಿರ್ವಹಿಸುವ ವೇಳೆಯಲ್ಲಿ ಅಮಾನತ್ತು ಇಲ್ಲವೆ ವಜಾಗೊಂಡಿರುವ ಪತ್ರಕರ್ತರು ಈ ಸೌಲಭ್ಯಕ್ಕೆ ಅರ್ಹರಾಗಿರುವುದಿಲ್ಲ.

   ಸದನದ ಹಕ್ಕುಚ್ಯುತಿಗೆ ಒಳಗಾಗಿರಬಾರದು

   ಸದನದ ಹಕ್ಕುಚ್ಯುತಿಗೆ ಒಳಗಾಗಿರಬಾರದು

   ಪತ್ರಕರ್ತರು ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಭಾರತೀಯ ಪತ್ರಿಕಾ ಮಂಡಳಿ ಅಥವಾ ಐ.ಬಿ.ಎ. ನಲ್ಲಿ ಛೀಮಾರಿ ಅಥವಾ ದಂಡ ಇಲ್ಲವೆ ಎರಡೂ ಶಿಕ್ಷೆಗಳಿಗೆ ಗುರಿಯಾಗಿರುವಂತ ಪತ್ರಕರ್ತರು ಮತ್ತು ಸದನದ ಹಕ್ಕುಚ್ಯುತಿ ಸಮಿತಿಯ ದಂಡನೆಗೊಳಗಾದ ಪತ್ರಕರ್ತರು ಈ ಸೌಲಭ್ಯಕ್ಕೆ ಅರ್ಹರಲ್ಲ. ಅರ್ಜಿ ಸಲ್ಲಿಸುವ ವೇಳೆಯಲ್ಲಿ ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಭಾಗಿಯಾಗಿರಬಾರದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

   English summary
   Karnataka state government announced scheme for registered journalists. As per this scheme Journalists who died or get accident while working will get relief money of 5 lakh rupees.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X