• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರ; ಪ್ಯಾಕೇಜ್ ವಿವರಗಳು

|

ಬೆಂಗಳೂರು, ನವೆಂಬರ್ 23 : ಕರ್ನಾಟಕದ ಹೆಮ್ಮೆಯ ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲು ಪುನಃ ಸಂಚಾರ ಆರಂಭಿಸಲಿದೆ. ಜನವರಿ 2021ರಿಂದ ರೈಲು ಸಂಚಾರವನ್ನು ಆರಂಭಿಸಲಿದ್ದು, ಪ್ರವಾಸಿ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗಿದೆ.

ಗೋಲ್ಡನ್ ಚಾರಿಯಟ್ ರೈಲು ಸೇವೆಯನ್ನು ಮೊದಲು ಆರಂಭಿಸಿದ್ದು ಕರ್ನಾಟಕ ಪ್ರವಾಸೋದ್ಯಮ ಇಲಾಖೆ. ದಕ್ಷಿಣ ಭಾರತದ ಏಕೈಕ ಐಷಾರಾಮಿ ಪ್ರವಾಸಿ ರೈಲನ್ನು ಈ ವರ್ಷ ಐಆರ್‌ಸಿಟಿಸಿಗೆ ಹಸ್ತಾಂತರ ಮಾಡಲಾಗಿದೆ.

ಮತ್ತೆ ಗೋಲ್ಡನ್ ಚಾರಿಯಟ್ ರೈಲು ಸಂಚಾರ; ಬುಕ್ಕಿಂಗ್ ಆರಂಭ

ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ಐಆರ್‌ಸಿಟಿಸಿ ರೈಲಿನ ಮಾರ್ಕೆಟಿಂಗ್ ಮತ್ತು ಕಾರ್ಯಾಚರಣೆಯನ್ನು ನಿರ್ವಹಣೆ ಮಾಡಲಿದೆ. ಹೊಸ ಅವತಾರದಲ್ಲಿ ರೈಲನ್ನು ಸಿದ್ಧಗೊಳಿಸಲಾಗಿದ್ದು, ಜನವರಿಯಲ್ಲಿ ಹಳಿಯ ಮೇಲೆ ಓಡಲಿದೆ.

ಮತ್ತೆ ಹಳಿ ಮೇಲೆ ಗೋಲ್ಡನ್ ಚಾರಿಯಟ್; ದರದಲ್ಲಿ ಭಾರಿ ಕಡಿತ

ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪ್ರವಾಸ ಪ್ಯಾಕೇಜ್, ಬೆಂಗಳೂರಿನಿಂದ ಹೊರಟು ಬೆಂಗಳೂರಿಗೆ ವಾಪಸ್ ಆಗುವ ಮೂರು ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗಿದೆ. ಗೋಲ್ಡನ್ ಚಾರಿಯಟ್ ವೆಬ್ ಸೈಟ್‌ ಮೂಲಕ ಪ್ಯಾಕೇಜ್ ಬುಕ್ಕಿಂಗ್‌ ಮಾಡಬಹುದಾಗಿದೆ.

ಪುನಃ ಸಂಚಾರ ಆರಂಭಿಸಲಿದೆ ಐಷಾರಾಮಿ ಗೋಲ್ಡನ್ ಚಾರಿಯಟ್

ಹೊಸ ವಿನ್ಯಾಸದಲ್ಲಿ ರೈಲು

ಹೊಸ ವಿನ್ಯಾಸದಲ್ಲಿ ರೈಲು

ಗೋಲ್ಡನ್ ಚಾರಿಯಟ್ ರೈಲಿನ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗಿದೆ. ಅತ್ಯಾಧುನಿಕ ವ್ಯವಸ್ಥೆಗಳನ್ನು ಪರಿಚಯಿಸಲಾಗಿದ್ದು, ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಐಷಾರಾಮಿ ಪಿಠೋಪಕರಣ, ಜಿಮ್, ಅಂತರಾಷ್ಟ್ರೀಯ ಮತ್ತು ದೇಶಿಯ ಆಹಾರದ ಮೆನು ಪರಿಚಯಿಸಲಾಗಿದೆ.

ಮನೋರಂಜನೆಗೆ ಆದ್ಯತೆ

ಮನೋರಂಜನೆಗೆ ಆದ್ಯತೆ

ರೈಲಿನಲ್ಲಿ ಪ್ರವಾಸಿಗರಿಗೆ ಮನೋರಂಜನೆ ಒದಗಿಸಲು ಎಲ್‌ಇಡಿ ಟಿವಿ ಅಳವಡಿಕೆ ಮಾಡಲಾಗಿದೆ. ಅಮೆಜಾನ್, ನೆಟ್‌ಫ್ಲಿಕ್ಸ್, ಹಾಟ್‌ ಸ್ಟಾರ್ ಸಂಪರ್ಕವಿರಲಿದೆ. ರೈಲಿನಲ್ಲಿ ವಿಶೇಷ ಸ್ಪಾ, ಜಿಮ್ ವ್ಯವಸ್ಥೆ ಮಾಡಲಾಗಿದೆ. ಹಲವಾರು ಹೊಸ ಸೇವೆಯೊಂದಿಗೆ ರೈಲು ಹಳಿಯ ಮೇಲೆ ಬರುತ್ತಿದೆ.

ಪ್ಯಾಕೇಜ್‌ ವಿವರಗಳು

ಪ್ಯಾಕೇಜ್‌ ವಿವರಗಳು

ಹೆಮ್ಮೆಯ ಕರ್ನಾಟಕ ಎಂಬ 6 ರಾತ್ರಿ, 7 ಹಗಲು ಪ್ಯಾಕೇಜ್, ದಕ್ಷಿಣ ಆಭರಣ ಎಂಬ 6 ರಾತ್ರಿ, 7 ಹಗಲುಗಳ ಪ್ಯಾಕೇಜ್ ಪರಿಚಯಿಸಲಾಗಿದೆ. ಇವುಗಳಲ್ಲಿ ಕರ್ನಾಟಕ ಮತ್ತು ಅಕ್ಕಪಕ್ಕದ ರಾಜ್ಯಗಳ ಪ್ರವಾಸ ಸೇರಿದೆ. ಕರ್ನಾಟಕದ ಒಂದು ಮಿನುಗು ನೋಟ ಎಂಬ 3 ರಾತ್ರಿ, 4 ಹಗಲುಗಳ ಪ್ರವಾಸವನ್ನು ಸಹ ಆರಂಭಿಸಲಾಗಿದೆ.

  ಮನ್ಸೂರ್ ವಿಡಿಯೋ ಅಲ್ಲಿ ಹೇಳಿರೋದಾದ್ರು ಏನು? | Oneindia Kannada
  2021ರಿಂದ ಆರಂಭ

  2021ರಿಂದ ಆರಂಭ

  ಜನವರಿ 2021ರಿಂದ ಗೋಲ್ಡನ್ ಚಾರಿಯಟ್ ಸಂಚಾರ ಆರಂಭವಾಗಲಿದೆ. ಪ್ರವಾಸಿ ಪ್ಯಾಕೇಜ್‌ಗಳ ದರಗಳು 59,999 ರೂ. ಆಗಿವೆ. ವೆಬ್‌ಸೈಟ್‌ನಲ್ಲಿ ವಿವರಗಳು ಲಭ್ಯವಿದೆ. ಐಆರ್‌ಸಿಟಿಸಿ ಮೂಲಕ ಬುಕ್ ಮಾಡಿದರೆ ರಿಯಾಯಿತಿ ಸಹ ನೀಡಲಾಗುತ್ತದೆ.

  English summary
  Indian Railways Catering and Tourism Corporation (IRCTC) will run luxury Golden Chariot train from January 2021. Tourist package announced.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X